Wednesday, Feb 19 2020 | Time 14:01 Hrs(IST)
  • ಬ್ಯಾಂಕಾಕ್‌ ಮಾಲ್‌ನಲ್ಲಿ ಗುಂಡು ಹಾರಿಸಿದ್ದ ಬಂಧೂಕುದಾರಿ ಬಂಧನ
  • ಇಬ್ಬರು ಕಾರುಗಳ್ಳರ ಬಂಧನ : 8 ಕಾರು ವಶ
  • ಮೇಲ್ಮನೆಯಲ್ಲಿ ಸದ್ದಾದ ಅನರ್ಹರು
  • ಮಂಗಳೂರು ಗೋಲಿಬಾರ್‌ ವಿಧಾನಸಭೆಯಲ್ಲಿ ಪ್ರತಿಧ್ವನಿ: ಗದ್ದಲ, ಕೋಲಾಹಲ; ಆಡಳಿತ-ವಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ
  • ಅನಧಿಕೃತ ಹೋಂ ಸ್ಟೇಗಳ ನೋಂದಣಿ ಕಡ್ಡಾಯ: ಕೊಡಗು ಡಿಸಿ
  • ಸ್ಪಾ ಮೇಲೆ ಸಿಸಿಬಿ ದಾಳಿ: ಓರ್ವ ಬಂಧನ, 6 ಯುವತಿಯರ ರಕ್ಷಣೆ
  • ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟಿದ್ದ ಬೈಕ್ ಕಳ್ಳನ ಬಂಧನ
  • ಮಲೆಮಹಾದೇಶ್ವರ ಬೆಟ್ಟದ ಸೋಲಾರ್ ಸಮಸ್ಯೆ: ಅಧಿಕಾರಿಗಳ ತಂಡ‌ ರವಾನೆಗೆ ಕೋಟಾ ಶ್ರೀನಿವಾಸ ಪೂಜಾರಿ ಸೂಚನೆ
  • ಚಿತ್ರರಂಗಕ್ಕೆ ಬಂದು 34 ವರ್ಷ: ಶಿವಣ್ಣ ಟ್ವೀಟ್
  • ಚಿನ್ನಾಭರಣ ಸಮೇತ ಓಮ್ನಿ ಕಳವು: ಸಿಸಿಟಿವಿಯಲ್ಲಿ ಸೆರೆ
  • ವಿಚ್ಛೇದನ ಪ್ರಕರಣಗಳಲ್ಲಿ ತೀವ್ರ ಸಂಕಷ್ಟ ಅನುಭವಿಸುವರು ಮಕ್ಕಳು ಮಾತ್ರ ಸುಪ್ರೀಂ ಕೋರ್ಟ್
  • ಅಶೋಕ್ ಪುತ್ರ ಅಪಘಾತ ನ್ಯಾಯಾಂಗ ತನಿಖೆ ಆಗಲಿ; ಪರಿಷತ್‌ನಲ್ಲಿ ಜಯಮಾಲಾ ಒತ್ತಾಯ
  • ಹರಿದ್ವಾರದ ಬ್ರಹ್ಮಕುಂಡದಿಂದ ಹರಿದುಬಂತು 40 ಸಾವಿರ ಲೀಟರ್ ಗಂಗಾಜಲ: ಶಿವರಾತ್ರಿ ಹಬ್ಬದಂದು ಕೃಷ್ಣಯ್ಯ ಶೆಟ್ಟಿ ಸಾರಥ್ಯದಲ್ಲಿ ಗಂಗಾಜಲ ವಿತರಣೆಗೆ ವ್ಯಾಪಕ ಸಿದ್ಥತೆ
  • ಟ್ರಂಪ್ ಬೇಟಿ ಹಿನ್ನಲೆ: ಯುಮುನಾ ನದಿಗೆ ನೀರು ಬಿಡುಗಡೆ
  • ಆಸ್ಟ್ರೇಲಿಯಾದಲ್ಲಿ ವಿಮಾನಗಳ ಡಿಕ್ಕಿ: ನಾಲ್ವರು ಸಾವು
Karnataka Share

ಕೊಡಗು ಜಿಲ್ಲೆಯ ಭೂಕುಸಿತ, ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಸುರೇಶ್ ಕುಮಾರ್ ಭೇಟಿ

ಮಡಿಕೇರಿ, ಆ 21 (ಯುಎನ್ಐ) ನೂತನ ಸಚಿವರಾದ ಎಸ್.ಸುರೇಶ್ ಕುಮಾರ್ ಅವರು ಕುಶಾಲನಗರ, ನೆಲ್ಯಹುದಿಕೇರಿ ಬಳಿಯ ಕುಂಬಾರಗುಂಡಿ, ಸಿದ್ದಾಪುರ ಬಳಿಯ ಕರಡಿಗೋಡು ಮತ್ತಿತರ ಪ್ರವಾಹ ಪೀಡಿತ ಪ್ರದೇಶಗಳು, ತೋರ ಭೂ ಕುಸಿತ ಪ್ರದೇಶ, ಮಾಕುಟ್ಟ ರಸ್ತೆ ವೀಕ್ಷಣೆ ಹಾಗೂ ವಿರಾಜಪೇಟೆಯ ಅಯ್ಯಪ್ಪ ಬೆಟ್ಟದಲ್ಲಿ ಭೂಮಿ ಬಿರುಕು ಬಿಟ್ಟಿರುವ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರ ಜೊತೆ ಮಾತನಾಡಿದ ಸಚಿವರು, ಪ್ರವಾಹದಿಂದ ತುಂಬಾ ತೊಂದರೆಗೆ ಒಳಗಾಗಿದ್ದು, ಸ್ಥಳಾಂತರವಾಗಲು ಮನಸ್ಸು ಮಾಡಬೇಕು. ಸರ್ಕಾರದಿಂದ ಮನೆ ನಿರ್ಮಿಸಿಕೊಡಲಾಗುವುದು ಎಂದು ಅವರು ಜನರಿಗೆ ತಿಳಿಸಿದರು.
ಅದಕ್ಕೆ ಸಂತ್ರಸ್ತರು ಕೂಲಿ ಮಾಡಿ ಬದುಕುತ್ತಿದ್ದೆವು, ಪ್ರವಾಹದಿಂದಾಗಿ ಮನೆ ಕಳೆದುಕೊಂಡಿದ್ದು, ದಿಕ್ಕು ತೋಚದಂತಾಗಿದೆ ಎಂದು ಅಳಲು ತೋಡಿಕೊಂಡರು.
ಮನೆ ಕಳೆದುಕೊಂಡ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಲಾಗುವುದು. ಆ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ ಎಂದರು. ಕುಂಬಾರಗುಂಡಿ ಮತ್ತು ಕರಡಿಗೋಡು ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ನಷ್ಟ ಉಂಟಾಗಿದ್ದು, ಈ ಸಂಬಂಧ ಸಚಿವ ಸಂಪುಟಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ರಾಜ್ಯದ ಹನ್ನೆರಡು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ಆಸ್ತಿ-ಪಾಸ್ತಿ ನಷ್ಟವಾಗಿದ್ದು, ಪ್ರವಾಹದಿಂದ ಸಾಕಷ್ಟು ಮನೆಗಳಿವೆ ಹಾನಿಯಾಗಿವೆ. ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಬೇಕಿದೆ. ಆ ನಿಟ್ಟಿನಲ್ಲಿ ಪುನರ್ವಸತಿ ಕಲ್ಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ, ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಸುಮಾರು 190 ಕ್ಕೂ ಹೆಚ್ಚು ಮನೆಗಳು ಹಾನಿಯಾಗಿರುವ ಬಗ್ಗೆ ಮಾಹಿತಿ ಇದ್ದು, ಈ ಕುಟುಂಬಗಳನ್ನು ಸ್ಥಳಾಂತರಿಸಿ ಮನೆ ನಿರ್ಮಿಸಿಕೊಡಬೇಕಿದೆ ಎಂದರು.
ಈಗಾಗಲೇ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಸಂತ್ರಸ್ತರಿಗೆ 10 ಸಾವಿರ ರೂ ಪರಿಹಾರ ನೀಡಲಾಗಿದೆ. ಕೇಂದ್ರದ ಗೃಹ ಸಚಿವರು ಮತ್ತು ಹಣಕಾಸು ಸಚಿವರು ರಾಜ್ಯ ಪ್ರವಾಸ ಕೈಗೊಂಡು ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಿದ್ದಾರೆ. ಸದ್ಯದಲ್ಲೇ ಹಣ ಬಿಡುಗಡೆಯಾಗಲಿದೆ ಎಂದು ಸುರೇಶ್ ಕುಮಾರ್ ಅವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಸಚಿವರಿಗೆ ಸಾಥ್ ನೀಡಿದ್ದರು.
ಯುಎನ್ಐ ಎಸ್ಎಂಆರ್ ಎಎಚ್ 1925