Monday, Sep 16 2019 | Time 06:13 Hrs(IST)
Entertainment Share

ಕುಣಿಸುತಿದೆ ಜಬರಿಯಾ ಜೋಡಿ ಚಿತ್ರದ ‘ಜಿಲ್ಲಾ ಹಿಲೆಲಾ’ ಸಾಂಗ್

ನವದೆಹಲಿ, ಜುಲೈ 11 (ಯುಎನ್ಐ) ಮೋಹಕ ಮುಗುಳ್ನಗೆಯ ಚೆಲುವೆ ಪರಿಣೀತಿ ಚೋಪ್ರಾ ಹಾಗೂ ಬಾಲಿವುಡ್ ಹ್ಯಾಂಡ್ ಸಮ್ ನಟ ಸಿದ್ದಾರ್ಥ್ ಮಲ್ಹೋತ್ರಾ ಜಿಲ್ಲಾ ಹಿಲೆಲಾ’ ಅಭಿನಯದ ಜಬರಿಯಾ ಜೋಡಿಯಾಗಿ ನಟಿಸುತ್ತಿರುವ ‘ಜಬರಿಯಾ ಜೋಡಿ’ ಚಿತ್ರದ ‘ಹಾಡು ಬಿಡುಗಡೆಯಾಗಿದೆ ಆದರೆ ಸಿದ್ದಾರ್ಥ್ ಜೊತೆ ಹೆಜ್ಜೆ ಹಾಕಿರುವು ಸ್ವೀಡನ್ ನ ಸ್ಟಾಕ್ಹೋಮ್ ಬೆಡಗಿ ಎಲ್ಲಿ ಆವ್ರೋಮ್
“ಸಿದ್ಧರಾಗಿ! ಈಗ ಕೇವಲ ಪಾಟ್ನಾ ಮಾತ್ರವಲ್ಲ, ಜಿಲ್ಲಾ ಹಿಲೆಲಾ ಹಾಡಿಗೆ ಇಡೀ ಭಾರತವೇ ಕುಣಿಯಲಿದೆ” ಎಂದು ಜಬರಿಯಾ ಜೋಡಿ ಚಿತ್ರತಂಡ ಟ್ವೀಟ್ ಮಾಡಿದೆ.
“ಪಾಟ್ನಾ ಹಿಲೆ, ಜಿಲ್ಲಾ ಹಿಲೆ, ಇದೀಗ ಪೂರಾ ಭಾರತವೇ ಜಬರಿಯಾ ಸ್ಟೈಲ್ ನಲ್ಲಿ ನರ್ತಿಸಲಿದೆ” ಎಂದು ನಿರ್ಮಾಪಕಿ ಏಕ್ತಾ ಕಪೂರ್ ತಮ್ಮ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
“ದೇಸಿ ಹಬ್ಬಗಳಲ್ಲಿ ಮೈಮರೆತು ಕುಣಿಯಲು ‘ಜಿಲ್ಲಾ ಹಿಲೆಲಾ’ ಸೂಪರ್ ಹಾಡು” ಎಂದು ಸಿದ್ದಾರ್ಥ್ ಮಲ್ಹೋತ್ರಾ ಟ್ವೀಟ್ ಮಾಡಿದ್ದಾರೆ.
ಸಿದ್ದಾರ್ಥ್ ಮತ್ತು ಎಲ್ಲಿ ಆವ್ರೋಮ್ ಹೆಜ್ಜೆ ಹಾಕಿರುವ ಹಾಡು, ಪ್ರೇಕ್ಷಕರನ್ನು ಕುಣಿಸುವಂತಹ ಬೀಟ್ ಒಳಗೊಂಡಿದೆ
ಮೊದಲಿಗೆ ಫೆಂಟಾಸ್ಟಿಕ್ ಪೋಸ್ಟರ್, ಆನಂತರ ಟ್ರೇಲರ್ ಮತ್ತು ‘ಖಡ್ಕೆ ಗ್ಲಾಸಿ’ ಭರ್ಜರಿ ಹಾಡಿನೊಂದಿಗೆ ‘ಜಬರಿಯಾ ಜೋಡಿ’ ಜಾಲತಾಣದಲ್ಲಿ ಸದ್ದು ಮಾಡಿದೆ.
ಕಾಮಿಡಿ ವಿತ್ ಲವ್ ಸಿನಿಮಾ ಜಬರಿಯಾ ಜೋಡಿಯಲ್ಲಿ ಪರಿಣೀತಿ ಚೋಪ್ರಾ ಬಬ್ಲಿಯಾಗಿ ಕಾಣಿಸಿಕೊಂಡಿದ್ದಾರೆ ಏಕ್ತಾ ಕಪೂರ್, ಶೋಭಾ ಕಪೂರ್ ಹಾಗೂ ಶೈಲೇಶ್ ಆರ್ ಸಿಂಗ್ ನಿರ್ಮಿಸುತ್ತಿರುವ ಚಿತ್ರಕ್ಕೆ ಪ್ರಶಾಂತ್ ಸಿಂಗ್ ನಿರ್ದೇಶನವಿದೆ.
ಯುಎನ್ಐ ಎಸ್ಎ ಎಸ್ಎಚ್ 1822
More News

ಯೂಟ್ಯೂಬ್ ಚಾನೆಲ್ ಗೆ ದಿಶಾ ಪಟಾನಿ ಚಾಲನೆ

14 Sep 2019 | 6:42 PM

 Sharesee more..
ಮೇಕಪ್ ಇಲ್ಲದ ಸಮಂತಾ ಫೋಟೋಗೆ ಅಭಿಮಾನಿಗಳು ಫಿದಾ

ಮೇಕಪ್ ಇಲ್ಲದ ಸಮಂತಾ ಫೋಟೋಗೆ ಅಭಿಮಾನಿಗಳು ಫಿದಾ

14 Sep 2019 | 5:11 PM

ಬೆಂಗಳೂರು, ಸೆ 14 (ಯುಎನ್ಐ) ಕೆಲವು ತಿಂಗಳುಗಳ ಹಿಂದಷ್ಟೇ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ತಮ್ಮ ಮೇಕಪ್ ಇಲ್ಲದ ಫೋಟೋ ಒಂದನ್ನು ಶೇರ್ ಮಾಡಿ, ಅಭಿಮಾನಿಗಳ ಮನಗೆದ್ದಿದ್ದರು.

 Sharesee more..