Wednesday, Feb 26 2020 | Time 10:31 Hrs(IST)
  • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
  • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
  • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
  • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
  • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಕೈದಿಗಳ ಪಟ್ಟಿ ವಿನಿಮಯ ಮಾಡಿಕೊಂಡ ಭಾರತ-ಪಾಕಿಸ್ತಾನ

ನವದೆಹಲಿ, ಜ. 1 (ಯುಎನ್‌ಐ) ಭಾರತ ಮತ್ತು ಪಾಕಿಸ್ತಾನ ಬುಧವಾರ ರಾಜತಾಂತ್ರಿಕ ಮಾರ್ಗಗಳ ಮೂಲಕ ನವದೆಹಲಿ ಮತ್ತು ಇಸ್ಲಾಮಾಬಾದ್‌ನಲ್ಲಿ ಏಕಕಾಲದಲ್ಲಿ ತಮ್ಮ ವಶದಲ್ಲಿರುವ ನಾಗರಿಕ ಕೈದಿಗಳು ಮತ್ತು ಮೀನುಗಾರರ ಪಟ್ಟಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿವೆ.
"2008 ರ ಒಪ್ಪಂದದ ನಿಬಂಧನೆಗಳಿಗೆ ಅನುಗುಣವಾಗಿ, ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಂದು ಅಂತಹ ಪಟ್ಟಿಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ಹೇಳಿಕೆಯಲ್ಲಿ ತಿಳಿಸಿವೆ.
ಇದಲ್ಲದೆ, ಪಾಕಿಸ್ತಾನದ ವಶದಲ್ಲಿರುವ 14 ಭಾರತೀಯ ನಾಗರಿಕ ಕೈದಿಗಳು ಮತ್ತು 100 ಭಾರತೀಯ ಮೀನುಗಾರರಿಗೆ ತಕ್ಷಣ ಕಾನ್ಸುಲರ್ ಭೇಟಿಗೆ ಅವಕಾಶ ಒದಗಿಸಲು ಪಾಕಿಸ್ತಾನವನ್ನು ಕೇಳಲಾಗಿದೆ ಎಂದು ಅದು ಹೇಳಿದೆ.
ಭಾರತದ ವಶದಲ್ಲಿರುವ 267 ಪಾಕಿಸ್ತಾನ ನಾಗರಿಕ ಕೈದಿಗಳು ಮತ್ತು 99 ಮೀನುಗಾರರ ಪಟ್ಟಿಗಳನ್ನು ಪಾಕಿಸ್ತಾನಕ್ಕೆ ಭಾರತ ಹಸ್ತಾಂತರಿಸಿತು. ಅದೇ ರೀತಿ, ಪಾಕಿಸ್ತಾನವು ತನ್ನ ವಶದಲ್ಲಿರುವ ಭಾರತೀಯರು ಎನ್ನಲಾದ 55 ನಾಗರಿಕ ಕೈದಿಗಳು ಮತ್ತು 227 ಮೀನುಗಾರರ ಪಟ್ಟಿಗಳನ್ನು ಭಾರತದೊಂದಿಗೆ ಹಂಚಿಕೊಂಡಿತು.
ಪಾಕಿಸ್ತಾನದ ವಶದಿಂದ ಭಾರತೀಯ ನಾಗರಿಕ ಕೈದಿಗಳು, ಕಾಣೆಯಾದ ಭಾರತೀಯ ರಕ್ಷಣಾ ಸಿಬ್ಬಂದಿ ಮತ್ತು ಮೀನುಗಾರರನ್ನು ಮತ್ತು ಅವರ ದೋಣಿಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಮತ್ತು ವಾಪಸ್ ಕಳುಹಿಸಲು ಸರ್ಕಾರ ಕೋರಿದೆ.
ಈ ಹಿನ್ನೆಲೆಯಲ್ಲಿ 4 ಭಾರತೀಯ ನಾಗರಿಕ ಕೈದಿಗಳು ಮತ್ತು 126 ಭಾರತೀಯ ಮೀನುಗಾರರನ್ನು ತ್ವರಿತಗತಿಯಲ್ಲಿ ಭಾರತಕ್ಕೆ ಬಿಡುಗಡೆ ಮಾಡಲು ಮತ್ತು ವಾಪಸ್ ಕಳುಹಿಸಲು ಪಾಕಿಸ್ತಾನವನ್ನು ಕೇಳಲಾಯಿತು, ಅವರ ರಾಷ್ಟ್ರೀಯತೆಯನ್ನು ದೃಢಪಡಿಸಲಾಗಿದೆ ಮತ್ತು ಪಾಕಿಸ್ತಾನಕ್ಕೆ ತಲುಪಿಸಲಾಗಿದೆ ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪಾಕಿಸ್ತಾನದ ವಿವಿಧ ಜೈಲುಗಳಲ್ಲಿ ದಾಖಲಾದ, ಭಾರತೀಯರು ಎನ್ನಲಾಗಿರುವ ಕೈದಿಗಳ ಮಾನಸಿಕ ಸ್ಥಿತಿಯನ್ನು ನಿರ್ಣಯಿಸಲು ವೈದ್ಯಕೀಯ ತಜ್ಞರ ತಂಡದ ಸದಸ್ಯರಿಗೆ ವಿಸಾ ಸೌಲಭ್ಯವನ್ನು ತ್ವರಿತಗೊಳಿಸಲು ಮತ್ತು ಅವರ ಪಾಕಿಸ್ತಾನ ಭೇಟಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲು ಸರ್ಕಾರವು ಪಾಕಿಸ್ತಾನವನ್ನು ಕೋರಿದೆ. ಅದೇ ರೀತಿ ಪಾಕಿಸ್ತಾನಕ್ಕೆ ಜಂಟಿ ನ್ಯಾಯಾಂಗ ಸಮಿತಿಯ ಆರಂಭಿಕ ಭೇಟಿಯನ್ನು ಆಯೋಜಿಸಲು ವ್ಯವಸ್ಥೆ ಮಾಡುವಂತೆ ಕೋರಲಾಗಿದೆ. ಅದೇ ರೀತಿ 22 ಭಾರತೀಯ ಮೀನುಗಾರಿಕಾ ದೋಣಿಗಳ ಬಿಡುಗಡೆ ಮತ್ತು ವಾಪಸಾತಿಗೆ ಸಂಬಂಧಿಸಿದಂತೆ ಕರಾಚಿಗೆ 4 ಸದಸ್ಯರ ತಂಡದ ಆರಂಭಿಕ ಭೇಟಿಯನ್ನು ಆಯೋಜಿಸಲು ಎಲ್ಲಾ ವ್ಯವಸ್ಥೆ ಮಾಡುವಂತೆ ಕೋರಲಾಗಿದೆ.
ಪರಸ್ಪರರ ದೇಶದಲ್ಲಿ ಕೈದಿಗಳು ಮತ್ತು ಮೀನುಗಾರರಿಗೆ ಸಂಬಂಧಿಸಿದ ಎಲ್ಲಾ ಮಾನವೀಯ ವಿಷಯಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲು ಭಾರತ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ, 82 ಪಾಕಿಸ್ತಾನದ ರಾಷ್ಟ್ರೀಯತೆಯ ಸ್ಥಿತಿಯನ್ನು ದೃಢೀಕರಿಸಲು ಅಗತ್ಯ ಕ್ರಮಗಳನ್ನು ತ್ವರಿತಗೊಳಿಸಲು ಭಾರತವು ಪಾಕಿಸ್ತಾನವನ್ನು ಒತ್ತಾಯಿಸಿದೆ.
ಯುಎನ್ಐ ಎಎಚ್ 1730