Saturday, Sep 21 2019 | Time 21:07 Hrs(IST)
  • ಉಪ ಚುನಾವಣೆ ಘೋಷಣೆ: ಅನರ್ಹರಿಗೆ ಭವಿಷ್ಯದ ಚಿಂತೆ
  • ಪರಿಷತ್ ವಿಪಕ್ಷ ಸ್ಥಾನಕ್ಕೆ ಲಾಬಿ ಶುರುಮಾಡಿಕೊಂಡ ಸಿ ಎಂ ಇಬ್ರಾಹಿಂ
  • 370ನೇ ವಿಧಿ ರದ್ಧತಿ ಸಂಬಂಧ ನಾಳೆ ನಗರದಲ್ಲಿ ಜನಜಾಗೃತಿ ಸಮಾವೇಶ : ಎನ್ ರವಿಕುಮಾರ್
  • ಉಪ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳು ?!
  • ಮೋಟಾರು ವಾಹನ ದಂಡ ಶುಲ್ಕ ಇಳಿಕೆ : ಮುಖ್ಯಮಂತ್ರಿ
  • ಉಪಚುನಾವಣೆಗೆ ಸಜ್ಜಾಗಿದ್ದೇವೆ , 15 ಕ್ಷೇತ್ರಗಳನ್ನು ಗೆಲ್ಲುತ್ತೇವೆ : ದಿನೇಶ್ ಗುಂಡೂರಾವ್
business economy Share

ಕೇಂದ್ರದಿಂದ 6,000 ಕೋಟಿ ರೂ. ಬಂಡವಾಳ ಎದುರು ನೋಡುತ್ತಿರುವ ಐಒಬಿ

ಚೆನ್ನೈ, ಜುಲೈ 9 (ಯುಎನ್‌ಐ) ದಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (ಐಒಬಿ) , ತನ್ನ ಉಳಿತಾಯ ಖಾತೆ ಠೇವಣಿಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರದಿಂದ 6,000 ಕೋಟಿ ರೂ. ಬಂಡವಾಳ ಎದುರು ನೋಡುತ್ತಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಐಒಬಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕರ್ಣಮ್ ಶೇಖರ್, ನಿಷ್ಕ್ರಿಯ ಸಾಲ (ಎನ್‌ಪಿಎಲ್) ಖಾತೆಗಳತ್ತ ಗಮನ ಹರಿಸಲಿದೆ. ವಶಪಡಿಸಿಕೊಂಡ ಅಡಮಾನದ ಆಸ್ತಿಗಳನ್ನು ಹರಾಜು ಮಾಡುವುದು, ನಿವ್ವಳ ಬಡ್ಡಿ ಆದಾಯ ಮತ್ತು ನಿವ್ವಳ ಬಡ್ಡಿ ಅಂತರ ಹೆಚ್ಚಿಸುವುದು ಮತ್ತು ಈ ವರ್ಷ ಶಿಕ್ಷಣ ಸಾಲ ಕಟ್ಟದವರನ್ನು ನಿಭಾಯಿಸಲು ಯತ್ನಿಸುತ್ತಿದೆ ಎಂದರು.
ದೊಡ್ಡ ಮೊತ್ತದ ಸಾಲ ವಸೂಲಾತಿಯಿಂದ ಈ ಆರ್ಥಿಕ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಬ್ಯಾಂಕ್‌ ಲಾಭ ಗಳಿಕೆಯತ್ತ ಹೆಜ್ಜೆ ಹಾಕುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ಕಳೆದ ಒಂದೆರಡು ವರ್ಷಗಳಿಂದ ಬ್ಯಾಂಕ್ ಕಾರ್ಪೊರೇಟ್ ವಲಯದ ಕಡೆಗೆ ಒಲವು ತೋರುತ್ತಿರುವುದರ ಕುರಿತು ಪ್ರತಿಕ್ರಿಯಸಿದ ಅವರು, ಚಿಲ್ಲರೆ ವ್ಯಾಪಾರ, ಆಭರಣ ಮತ್ತು ಇತರ ಸಾಲಗಳ ಮೇಲೆ ಹೆಚ್ಚಿನ ಗಮನ ಹರಿಸುವುದರೊಂದಿಗೆ ಇದನ್ನು ಬದಲಾಯಿಸಲಾಗುವುದು, ಕಾರ್ಪೊರೇಟ್-ಚಿಲ್ಲರೆ ಅನುಪಾತ 50:50 ಆಗಿರುತ್ತದೆ ಎಂದರು.
ಯುಎನ್‌ಐ ಕೆಎಸ್‌ವಿ ವಿಎನ್‌ಎಲ್‌ 1934
More News
ಕಾರ್ಪೊರೇಟ್ ತೆರಿಗೆ ಕಡಿತ ರಫ್ತಿನಡಿ ಬಂಡವಾಳ ಹರಿವಿಗೆ ಸಹಕಾರಿ : ಎಫ್ ಐ ಇ ಒ

ಕಾರ್ಪೊರೇಟ್ ತೆರಿಗೆ ಕಡಿತ ರಫ್ತಿನಡಿ ಬಂಡವಾಳ ಹರಿವಿಗೆ ಸಹಕಾರಿ : ಎಫ್ ಐ ಇ ಒ

20 Sep 2019 | 8:12 PM

ನವದೆಹಲಿ, ಸೆ 20 (ಯುಎನ್ಐ) ಕಾರ್ಪೊರೇಟ್ ತೆರಿಗೆಯನ್ನು ಶೇ 22 ಕ್ಕೆ ಮತ್ತು ಹೊಸ ತಯಾರಿಕಾ ಕಂಪೆನಿಗಳಿಗೆ ಶೇ 15 ಕ್ಕೆ ಇಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಭಾರತೀಯ ರಫ್ತು ಸಂಘದ ಒಕ್ಕೂಟ (ಎಫ್ಐಇಒ) ಶುಕ್ರವಾರ ಸ್ವಾಗತಿಸಿದೆ.

 Sharesee more..
ಕಾರ್ಪೊರೇಟ್ ವಲಯದಲ್ಲಿ ಹೊಸ ತೆರಿಗೆ ಶಕೆ ಆರಂಭಕ್ಕೆ ಪ್ರಧಾನಿ ಶ್ಲಾಘನೆ: ಸರ್ಕಾರದ ಕ್ರಮದಿಂದ ಹೆಚ್ಚು ಉದ್ಯೋಗ ಸೃಷ್ಟಿ ಎಂದು ಬಣ್ಣನೆ

ಕಾರ್ಪೊರೇಟ್ ವಲಯದಲ್ಲಿ ಹೊಸ ತೆರಿಗೆ ಶಕೆ ಆರಂಭಕ್ಕೆ ಪ್ರಧಾನಿ ಶ್ಲಾಘನೆ: ಸರ್ಕಾರದ ಕ್ರಮದಿಂದ ಹೆಚ್ಚು ಉದ್ಯೋಗ ಸೃಷ್ಟಿ ಎಂದು ಬಣ್ಣನೆ

20 Sep 2019 | 3:45 PM

ನವದೆಹಲಿ, ಸೆ 20 (ಯುಎನ್‌ಐ) ಸರ್ಕಾರ ಘೋಷಿಸಿರುವ ಹೊಸ ತೆರಿಗೆ ಸಂಬಂಧಿತ ಉಪಕ್ರಮಗಳ ಕುರಿತು ಪ್ರತಿಪಕ್ಷಗಳ ಟೀಕೆಗಳನ್ನು ಬದಿಗೊತ್ತಿರುವ ಪ್ರಧಾನಿ ನರೇಂದ್ರ ಮೋದಿ, ಹೊಸ ಕ್ರಮಗಳು ಮಹತ್ವಾಕಾಂಕ್ಷಿ 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮಕ್ಕೆ ಉತ್ತೇಜನ ನೀಡಲಿದ್ದು, ಖಾಸಗಿ ಹೂಡಿಕೆಯನ್ನು ಆಕರ್ಷಿಸಿ, ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು ಹೇಳಿದ್ದಾರೆ.

 Sharesee more..