Sunday, Jan 26 2020 | Time 23:04 Hrs(IST)
 • ‘ಪದ್ಮ ‘ ಪ್ರಶಸ್ತಿ ಪುರಸ್ಕೃತರಿಗೆ ನಳಿನ್‍ ಕುಮಾರ್ ಕಟೀಲ್‍ ಅಭಿನಂದನೆ
 • ರಣಜಿ ಟ್ರೋಫಿ: ಕರ್ನಾಟಕ ತಂಡಕ್ಕೆೆ ರೈಲ್ವೇಸ್ ಸವಾಲು
 • ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬೀಗರಾಗಲಿರುವ ಕಾಂಗ್ರೆಸ್ ಶಾಸಕ ಕೃಷ್ಣಪ್ಪ
 • ಹಿಂಸಾಚಾರ ಯಾವುದೇ ಸಮಸ್ಯೆಗೆ ಪರಿಹಾರವಲ್ಲ; ಮೋದಿ
 • ಮಾಡಬಲ್ಲೆ ಎಂಬ ಛಲವಿದ್ದರೆ ಸಾಧನೆ ಸಾಧ್ಯ : ಪ್ರಧಾನಿ ಮೋದಿ
 • ಒಕ್ಕಲಿಗರು ಅಧಿಕಾರಕ್ಕೆ ಬರುವುದನ್ನು, ಹೋರಾಟ ಮಾಡುವುದನ್ನು ಬಿಜೆಪಿ ಸಹಿಸುವುದಿಲ್ಲ: ಕುಮಾರಸ್ವಾಮಿ ತಿರುಗೇಟು
 • ಸಂವಿಧಾನ ಅಪಾಯದ ಅಂಚಿನಲ್ಲಿದೆ : ಡಾ ಜಿ ಪರಮೇಶ್ವರ
 • ಕರೋನಾ ವೈರಸ್‌ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಕಾರ್ಯವ್ಯವಸ್ಥೆ
 • ರೈಲು ಅಪಘಾತ: ಪಂಜಾಬ್‍ ನಲ್ಲಿ ಜಮ್ಮು- ತಾವಿ ಎಕ್ಸ್‌ಪ್ರೆಸ್‌ನ ಎಂಜಿನ್ ಬೇರ್ಪಟ್ಟು ಒಬ್ಬ ವ್ಯಕ್ತಿ ಸಾವು
 • 'ಅಂಬಿಕಾತನಯದತ್ತ’ ರಾಷ್ಟ್ರೀಯ ಪ್ರಶಸ್ತಿಗೆ ಎಸ್‍ ಎಲ್‍ ಭೈರಪ್ಪ ಆಯ್ಕೆ
 • ಮಾಜಿ ಕ್ರಿಕೆಟಿಗ ವಸಂತ್‌ಗೆ 100ರ ಸಂಭ್ರಮ : ಶುಭಾಶಯ ಕೋರಿದ ಕ್ರಿಕೆಟ್ ದಂತಕತೆ
 • ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದ ಬೌಲಿಂಗ್ ವಿಭಾಗವನ್ನು ಕೊಂಡಾಡಿದ ಕೊಹ್ಲಿ
 • ಗಣರಾಜ್ಯೋತ್ಸವದಂದು ಪ್ರಧಾನಿಗೆ ಸಂವಿಧಾನದ ಪ್ರತಿ ರವಾನಿಸಿದ ಕಾಂಗ್ರೆಸ್
 • ಮತ್ತೆ ಸಿಡಿದ ಕನ್ನಡಿಗ ರಾಹುಲ್ : ನ್ಯೂಜಿಲೆಂಡ್ ಎದುರು ಭಾರತಕ್ಕೆ ಎರಡನೇ ಜಯ
 • 100 ಪದವಿ ಪೂರ್ವ ವಸತಿ ಕಾಲೇಜುಗಳ‌ ಸ್ಥಾಪನೆ: ಗೋವಿಂದ ‌ಕಾರಜೋಳ
Parliament Share

ಕೇಂದ್ರ ಸಚಿವ ಬಲಿಯಾನ್ ಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಎಚ್ಚರಿಕೆ

ಕೇಂದ್ರ ಸಚಿವ ಬಲಿಯಾನ್ ಗೆ  ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಎಚ್ಚರಿಕೆ
ಕೇಂದ್ರ ಸಚಿವ ಬಲಿಯಾನ್ ಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಎಚ್ಚರಿಕೆ

ನವದೆಹಲಿ, ಜುಲೈ 19( ಯುಎನ್ಐ) ಸಂಸತ್ತಿನ ಕಲಾಪದಲ್ಲಿ ಹಾಜರಾಗದೆ ಸಮಯ ವ್ಯರ್ಥ ಗೊಳಿಸಿದ್ದಕ್ಕಾಗಿ ಕೇಂದ್ರ ಪಶುಸಂಗೋಪನಾ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸಂಜೀವ್ ಕುಮಾರ್ ಬಲಿಯಾನ್ ವಿರುದ್ಧ ಉಪರಾಷ್ಟ್ರಪತಿಯೂ ಆಗಿರುವ ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯನಾಯ್ಡು ಶುಕ್ರವಾರ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಮ್ಮೆ, ಇಂತಹ ತಪ್ಪು ಆಗಬಾರದು ಎಂದು ಎಚ್ಚರಿಕೆ ನೀಡಿದರು. ಬುಧವಾರ ರಾಜ್ಯಸಭೆಯ ಕಾರ್ಯಸೂಚಿಯಲ್ಲಿ ಸಚಿವ ಬಲಿಯಾನ್ ಅವರ ಹೆಸರಿದ್ದರೂ ಅಂದು ಅವರು ಸದನಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಭಾಪತಿ ವೆಂಕಯ್ಯನಾಯ್ಡು, ಸಚಿವರನ್ನು ಉದ್ದೇಶಿಸಿ, ಸಚಿವರೇ ಬುಧವಾರದ ಕಾರ್ಯಸೂಚಿಯಲ್ಲಿ ನಿಮ್ಮ ಹೆಸರಿತ್ತು, ಆದರೆ ನೀವು ಹಾಜರಿರಲಿಲ್ಲ, ಇನ್ನೂ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು. ಸಚಿವ ಬಲಿಯಾನ್ ತಮ್ಮ ಗೈರುಹಾಜರಿಗೆ ವಿಷಾದ ವ್ಯಕ್ತಪಡಿಸಿ, ಇನ್ನೂಮುಂದೆ ಈ ರೀತಿ ಆಗುವುದಿಲ್ಲ ಎಂದು ಭರವಸೆ ನೀಡಿದರು.

ಸಂಸತ್ ಅಧಿವೇಶನಗಳಿಗೆ ಗೈರಾಗುವ ಸಚಿವರು, ಸಂಸದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಯುಎನ್ಐ ಕೆವಿಆರ್ ಎಸ್ ಎಲ್ ಎಸ್ 2016