Thursday, Aug 22 2019 | Time 00:00 Hrs(IST)
National Share

ಕೇಂದ್ರ ಸರ್ಕಾರದ 50 ದಿನಗಳ ಸಾಧನಾ ವರದಿ ಬಿಡುಗಡೆ; ಮೂಲಸೌಕರ್ಯ, ಶಿಕ್ಷಣಕ್ಕೆ ಆದ್ಯತೆ

ಕೇಂದ್ರ ಸರ್ಕಾರದ 50 ದಿನಗಳ ಸಾಧನಾ ವರದಿ ಬಿಡುಗಡೆ; ಮೂಲಸೌಕರ್ಯ, ಶಿಕ್ಷಣಕ್ಕೆ ಆದ್ಯತೆ
ಕೇಂದ್ರ ಸರ್ಕಾರದ 50 ದಿನಗಳ ಸಾಧನಾ ವರದಿ ಬಿಡುಗಡೆ; ಮೂಲಸೌಕರ್ಯ, ಶಿಕ್ಷಣಕ್ಕೆ ಆದ್ಯತೆ

ನವದೆಹಲಿ, ಜು 22 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಮೊದಲ 50 ದಿನಗಳಲ್ಲಿ 'ಸಬ್‍ ಕಾ ಸಾಥ್, ಸಬ್‍ ಕಾ ವಿಕಾಸ್, ಸಬ್‍ ಕಾ ವಿಶ್ವಾಸ್' ಘೋಷಣೆಯ ಜಾರಿಗೆ ಹೆಚ್ಚಿನ ಗಮನ ಹರಿಸಿದ್ದು, ಮೂಲಸೌಕರ್ಯ, ಶಿಕ್ಷಣ ಮತ್ತು ಸಮಾಜದ ಎಲ್ಲಾ ರಂಗಗಳಲ್ಲಿ ತೀವ್ರಗತಿಯ ಅಭಿವೃದ್ಧಿ ಸಾಧಿಸಲು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಸರ್ಕಾರ ಸೋಮವಾರ ಹೇಳಿದೆ.

50 ದಿನಗಳಲ್ಲಿ, ಮೂಲಸೌಕರ್ಯ, ಶಿಕ್ಷಣ, ರೈತರು, ನಿರುದ್ಯೋಗಿ ಯುವಕರು, ಮಧ್ಯಮ ವರ್ಗ, ವ್ಯಾಪಾರಿಗಳು ಮತ್ತು ಸಮಾಜದ ಎಲ್ಲಾ ವರ್ಗದವರ ಅಭಿವೃದ್ಧಿಗೆ ಸರ್ಕಾರ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದ 50 ದಿನಗಳ ಸಾಧನಾ ವರದಿಯನ್ನು ಬಿಡುಗಡೆ ಮಾಡಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಎರಡನೇ ಅವಧಿ ಹೆಚ್ಚು ಪರಿಣಾಮಕಾರಿಯಾಗಲಿದೆ ಮತ್ತು ಎಲ್ಲರಿಗೂ ನ್ಯಾಯ ದೊರಕಲಿದೆ ಎಂಬುದನ್ನು ಈ 50 ದಿನಗಳು ತೋರಿಸುತ್ತವೆ ಎಂದು ಬಣ್ಣಿಸಿದರು.

ಮೋದಿ ಸರ್ಕಾರವು ಪಿಎಂ-ಕಿಸಾನ್ ಯೋಜನೆಯಡಿ ವರ್ಷಕ್ಕೆ 6000 ರೂ.ಗಳ ಲಾಭವನ್ನು ದೇಶದ ಎಲ್ಲಾ ರೈತರಿಗೆ ವಿಸ್ತರಿಸಿದೆ, ಅವರಿಗೆ ಬೆಳೆ ಖರ್ಚಿನ 2-3 ಪಟ್ಟು ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ನೀಡಲಾಗುತ್ತಿದೆ ಎಂದರು.

ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸುರಕ್ಷತೆ ಮತ್ತು ಕಲ್ಯಾಣ ಮತ್ತು ಕೈಗಾರಿಕಾ ಸಂಬಂಧಗಳನ್ನು ನಿಭಾಯಿಸುವ ನಾಲ್ಕು ಕಾನೂನುಗಳ ಅಡಿಯಲ್ಲಿ ಎಲ್ಲಾ ಕಾನೂನುಗಳನ್ನು ವಿಲೀನಗೊಳಿಸುವ ಮೂಲಕ ಹೊಸ ಕಾರ್ಮಿಕ ಶಾಸನವನ್ನು ತರಲು ಸರ್ಕಾರ ಮುಂದಾಗಿದೆ ಎಂದು ಜಾವಡೇಕರ್ ಹೇಳಿದರು.

ನರೇಂದ್ರ ಮೋದಿ ಸರ್ಕಾರವು ತನ್ನ ಎರಡನೆಯ ಅಧಿಕಾರಾವಧಿಯ ಮೊದಲ ನಿರ್ಧಾರದಲ್ಲಿ 'ಪ್ರಧಾನ ಮಂತ್ರಿಗಳ ವಿದ್ಯಾರ್ಥಿವೇತನ ಯೋಜನೆಯ' ಭಾಗವಾಗಿ ಪಾವತಿಸಬೇಕಾದ ಮೊತ್ತವನ್ನು ಹೆಚ್ಚಿಸಿದೆ ಮತ್ತು ಭಯೋತ್ಪಾದನೆ ಅಥವಾ ಮಾವೋವಾದಿ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.

ಇದೇ ಮೊದಲ ಬಾರಿಗೆ ವ್ಯಾಪಾರಿಗಳಿಗೂ ಪಿಂಚಣೆ ಸೌಲಭ್ಯವನ್ನು ಆರಂಭಿಸಲಾಗುತ್ತಿದೆ ಎಂದರು.

ಎಲ್ಲರಿಗೂ ಕೈಗೆಟಕುವ ದರದಲ್ಲಿ ಮನೆಗಳನ್ನು ಒದಗಿಸಿಕೊಡಲು ಕಡಿಮೆ ಬಡ್ಡಿಯ ಸಾಲ ಸೌಲಭ್ಯವನ್ನು ಸರ್ಕಾರ ಒದಗಿಸಲಿದೆ ಎಂದು ಅವರು ಮಾಹಿತಿ ನೀಡಿದರು.

2024 ರ ವೇಳೆಗೆ ಭಾರತವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಮತ್ತು ನಾಗರಿಕರಲ್ಲಿ ಬೆಳವಣಿಗೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸುವ ಕ್ಷೇತ್ರಗಳಿಗೆ ಸರಿಯಾದ ಮಾರ್ಗಸೂಚಿಯನ್ನು ತಯಾರಿಸಿದೆ ಎಂದು ಸಚಿವರು ಹೇಳಿದರು.

ಸರ್ಕಾರದ ಇತರ ನಿರ್ಧಾರಗಳು ಮತ್ತು ಕ್ರಮಗಳನ್ನು ವಿವರಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರು, ಉದ್ಯಮಿಗಳನ್ನು ಉತ್ತೇಜಿಸಲು, ನವೋದ್ಯಮಿಗಳಿಗಾಗಿ ವಾಹಿನಿಯೊಂದನ್ನು ತರಲಾಗುತ್ತಿದೆ ಮತ್ತು ದೇಶದಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಇತರ ಯೋಜನೆಗಳಿಗೆ ಅವಕಾಶ ನೀಡುವುದಾಗಿ ಹೇಳಿದರು.

ಸರ್ಕಾರವು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಿದೆ, ಅದು ವಿವಿಧ ಸಚಿವಾಲಯಗಳು ನೀಡುತ್ತಿರುವ ಸಂಶೋಧನಾ ಅನುದಾನವನ್ನು ಸಂಯೋಜಿಸಲಿದೆ ಎಂದು ಹೇಳಿದರು.

ಮೂಲಸೌಕರ್ಯಕ್ಕಾಗಿ 100 ಲಕ್ಷ ಕೋಟಿ ರೂ., ಮೂರನೇ ಹಂತದ ಗ್ರಾಮೀಣ ಸಡಕ್ ಯೋಜನೆ ಮತ್ತು ಮುಚ್ಚಿದ ಬಾಟಲಿಯಲ್ಲಿ ಕುಡಿಯುವ ನೀರನ್ನು ಒದಗಿಸಲು ನೀರಿನ ನಿರ್ವಹಣೆ ಮುಂತಾದವು ದೇಶಕ್ಕಾಗಿ ಸರ್ಕಾರ ಯೋಜಿಸಿರುವ ಕೆಲವು ಯೋಜನೆಗಳಾಗಿವೆ ಎಂದು ಜಾವಡೇಕರ್ ಹೇಳಿದರು.

ಮೋದಿ ಸರ್ಕಾರದ ಮೊದಲ 50 ದಿನಗಳ ಇತರ ಸಾಧನೆಗಳನ್ನು ವಿವರಿಸಿರುವ ಅವರು, ಭ್ರಷ್ಟಾಚಾರದ ವಿರುದ್ಧದ ಹೋರಾಟವು ಭರದಿಂದ ಸಾಗಿದೆ. ಸಾರ್ವಜನಿಕ ಹಣವನ್ನು ಲೂಟಿ ಮಾಡಿದ ನಂತರ ದೇಶದಿಂದ ಪಲಾಯನ ಮಾಡಿದವರನ್ನು ಬಂಧಿಸಲಾಗಿದೆ ಎಂದರು.

ಶಿಕ್ಷಣ, ಮಕ್ಕಳ ಮೇಲಿನ ದೌರ್ಜನ್ಯ, ಬಾಡಿಗೆ ತಾಯಂದಿರು ಮತ್ತು ತೃತೀಯ ಲಿಂಗಿಗಳ ಕ್ಷೇತ್ರದಲ್ಲಿ ಹೊಸ ಕಾನೂನುಗಳನ್ನು ತರಲಾಗುತ್ತಿದೆ ಎಂದರು.

ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ದೇಶದ ಪ್ರಗತಿಗೆ ಸ್ಪಷ್ಟವಾದ ಮಾರ್ಗಸೂಚಿಯನ್ನು ರೂಪಿಸಲಾಗಿದೆ ಎಂದು ಸಚಿವರು ಇಂದು ಬೆಳಿಗ್ಗೆ ಹೇಳಿದರು.

ಬಿಜೆಪಿ 303 ಸ್ಥಾನಗಳನ್ನು ಗೆದ್ದ ನಂತರ ಮೇ 30ರಂದು ನರೇಂದ್ರ ಮೋದಿ, ದೇಶದ ಪ್ರಧಾನಿಯಾಗಿ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದರು. 1971 ರ ನಂತರ ಇದೇ ಮೊದಲ ಬಾರಿಗೆ ಅಧಿಕಾರದಲ್ಲಿರುವ ಸರ್ಕಾರವೊಂದು ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿದೆ.

ಯುಎನ್ಐ ಎಎಚ್ ಪಿಕೆ 1051

More News
ತಂಬಾಕು ಉತ್ಪನ್ನಗಳ ಮೇಲೆ ನಿರ್ದಿಷ್ಟ ಆರೋಗ್ಯದ ಎಚ್ಚರಿಕೆ : ಸೆಪ್ಟೆಂಬರ್ 1 ರಿಂದ ಜಾರಿ

ತಂಬಾಕು ಉತ್ಪನ್ನಗಳ ಮೇಲೆ ನಿರ್ದಿಷ್ಟ ಆರೋಗ್ಯದ ಎಚ್ಚರಿಕೆ : ಸೆಪ್ಟೆಂಬರ್ 1 ರಿಂದ ಜಾರಿ

21 Aug 2019 | 5:36 PM

ನವದೆಹಲಿ, ಆ 21 (ಯುಎನ್ಐ) ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಪೊಟ್ಟಣಗಳ ಮೇಲೆ ನಿರ್ದಿಷ್ಟ ಆರೋಗ್ಯದ ಎಚ್ಚರಿಕೆ ನಿಯಮಾವಳಿಗಳು 2018 ಸೆಪ್ಟೆಂಬರ್ 1 ರಿಂದಲೇ ಅನ್ವಯವಾಗುವಂತೆ ಜಾರಿಗೆ ಬರಲಿದೆ ಎಂದು ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ

 Sharesee more..
ಭಾರತ-ಜಾಂಬಿಯಾ ದ್ವಿಪಕ್ಷೀಯ ಮಾತುಕತೆ

ಭಾರತ-ಜಾಂಬಿಯಾ ದ್ವಿಪಕ್ಷೀಯ ಮಾತುಕತೆ

21 Aug 2019 | 4:14 PM

ನವದೆಹಲಿ, ಆ 21 (ಯುಎನ್ಐ) ಭಾರತ ಮತ್ತು ಜಾಂಬಿಯಾ ನಡುವಿನ ವ್ಯಾಪಾರ ವಹಿವಾಟು, ಹೂಡಿಕೆ, ಅಭಿವೃದ್ಧಿಯಲ್ಲಿನ ಸಹಕಾರ ಮತ್ತು ಸಾಮರ್ಥ್ಯ ವೃದ್ಧಿಗಾಗಿ ದೆಹಲಿಯಲ್ಲಿ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಲಾಗಿದೆ

 Sharesee more..