Wednesday, Feb 26 2020 | Time 10:45 Hrs(IST)
  • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
  • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
  • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
  • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
  • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
  • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
  • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
National Share

ಕಾಮನ್ ವೆಲ್ತ್ ಸ್ಪೀಕರ್ ಗಳ ಸಮಾವೇಶ: ಭಾರತೀಯ ಸಂಸದೀಯ ನಿಯೋಗಕ್ಕೆ ಸ್ಪೀಕರ್ ಓಂ ಬಿರ್ಲಾ ನೇತೃತ್ವ

ಕಾಮನ್ ವೆಲ್ತ್ ಸ್ಪೀಕರ್ ಗಳ ಸಮಾವೇಶ: ಭಾರತೀಯ ಸಂಸದೀಯ ನಿಯೋಗಕ್ಕೆ ಸ್ಪೀಕರ್ ಓಂ ಬಿರ್ಲಾ ನೇತೃತ್ವ
ಕಾಮನ್ ವೆಲ್ತ್ ಸ್ಪೀಕರ್ ಗಳ ಸಮಾವೇಶ: ಭಾರತೀಯ ಸಂಸದೀಯ ನಿಯೋಗಕ್ಕೆ ಸ್ಪೀಕರ್ ಓಂ ಬಿರ್ಲಾ

ನವದೆಹಲಿ, ಜ5(ಯುಎನ್‍ಐ)- ಕೆನಡಾದ ಒಟ್ಟಾವದಲ್ಲಿ ನಡೆಯುವ ಕಾಮನ್ ವೆಲ್ತ್ ದೇಶಗಳ 25ನೇ ಸ್ಪೀಕರ್ ಗಳ ಸಮಾವೇಶ (ಸಿಎಸ್ ಪಿಒಸಿ)ದಲ್ಲಿ ಪಾಲ್ಗೊಳ್ಳಲು ರಾಜ್ಯಸಭೆ ಉಪಸಭಾಪತಿ ಹರಿವಂಶ್ ಅವರನ್ನೊಳಗೊಂಡ ಭಾರತದ ಸಂಸದೀಯ ನಿಯೋಗದ ನೇತೃತ್ವವನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಹಿಸಲಿದ್ದಾರೆ.

ಇದೇ ಜ 7ರಂದು ಮಂಗಳವಾರ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜ 11ರವರೆಗೆ ಸಮ್ಮೇಳನ ಮುಂದುವರೆಯಲಿದೆ. ಸಮ್ಮೇಳನದಲ್ಲಿ ನಾಲ್ಕು ಕಾರ್ಯಾಗಾರ ಅಧಿವೇಶನಗಳು ಮತ್ತು ಒಂದು ವಿಶೇಷ ಪೂರ್ಣಾಧಿವೇಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸಂಸದೀಯ ಕಾರ್ಯಕಲಾಪಗಳು, ಪಾರದರ್ಶಕತೆ, ಸವಾಲುಗಳು ಮತ್ತು ಅವಕಾಶಗಳು, ವಿವಿಧ ದೇಶಗಳ ಅತ್ಯುತ್ತಮ ಸಂಸತ್ ಅಧಿವೇಶನಗಳು ಸೇರಿದಂತೆ ವಿವಿಧ ಸಂಸದೀಯ ವಿಷಯಗಳ ಕುರಿತು ಕಾರ್ಯಾಗಾರಗಳು ನಡೆಯಲಿವೆ.

ಬದಲಾಗುತ್ತಿರುವ ಸಂಸತ್‍ನ ಚಿತ್ರಣ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಹೊಸದಾಗಿ ಹೊರಹೊಮ್ಮುತ್ತಿರುವ ನಡಾವಳಿಗಳು ಮತ್ತು ಕಾರ್ಯವಿಧಾನಗಳಲ್ಲಿ ಸ್ಪೀಕರ್ ಪಾತ್ರ ಕುರಿತು ವಿಶೇಷ ಪೂರ್ಣಾಧಿವೇಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸಂಸದೀಯ ಸನ್ನಿವೇಶ ಮತ್ತು ಅದರ ಆಚೆ ವೈಯಕ್ತಿಕ ಭದ್ರತೆ ಕುರಿತ ವಿಷಯವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕಾರ್ಯಾಗಾರದಲ್ಲಿ ಮಾತನಾಡಲಿದ್ದಾರೆ.

ಜ 6ರಂದು ನಡೆಯುವ ಸಿಎಸ್ ಪಿಒಸಿ ಸ್ಥಾಯಿ ಸಮಿತಿಯ ಸಭೆಯಲ್ಲಿ ಓಂ ಬಿರ್ಲಾ ಪಾಲ್ಗೊಳ್ಳಲಿದ್ದಾರೆ.

ಕೆನಡಾ ಭೇಟಿಯ ವೇಳೆ ಓಂ ಬಿರ್ಲಾ ಅವರು ಅಲ್ಲಿನ ಸಂಸತ್ ಸ್ಪೀಕರ್ ಮತ್ತು ಇತರ ಗಣ್ಯರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.

ಭಾರತೀಯ ಸಂಸದೀಯ ನಿಯೋಗ ಒಟ್ಟಾವ ಮತ್ತು ಟೊರಂಟೋದಲ್ಲಿನ ಭಾರತೀಯ ಸಮುದಾಯಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಯುಎನ್‍ಐ ಎಸ್‍ಎಲ್‍ಎಸ್ 1852