Friday, Oct 30 2020 | Time 07:40 Hrs(IST)
Sports Share

ಕ್ಯಾಪಿಟಲ್ಸ್ ಗೆ ಸೂಪರ್ ಜಯ, ಕಿಂಗ್ಸ್ ಗೆ ಸೋಲಿನ ಆಘಾತ

ದುಬೈ, ಸೆ. 20 (ಯುಎನ್ಐ)- ರೋಚಕತೆ ಹುಟ್ಟಿಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ದೆಹಲಿ ಕ್ಯಾಪಿಟಲ್ಸ್ ನಡುವಣ 13ನೇ ಆವೃತ್ತಿಯ ಎರಡನೇ ಪಂದ್ಯವನ್ನು ಶ್ರೇಯಸ್ ಅಯ್ಯರ್ ಪಡೆ ಗೆದ್ದು ಬೀಗಿತು.

ಟಾಸ್ ಗೆದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲಿಂಗ್ ಮಾಡಲು ಮುಂದಾಯಿತು. ಮೊದಲು ಬ್ಯಾಟ್ ಮಾಡಿದ ದೆಹಲಿ 20 ಓವರ್ ಗಳಲ್ಲಿ 8 ವಿಕೆಟ್ ಗೆ 157 ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 8 ವಿಕೆಟ್ ಗೆ 157 ಸಿಡಿಸಿತು. ಪ್ರಸಕ್ತ ಋತುವಿನ ಮೊದಲ ಸೂಪರ್ ಓವರ್ ನಲ್ಲಿ ದೆಹಲಿ ಜಯ ಸಾಧಿಸಿ, ಗೆಲುವಿನ ಆರಂಭ ಮಾಡಿತು.

ಸೂಪರ್ ಓವರ್ ನಲ್ಲಿ ದೆಹಲಿ ತಂಡದ ಸ್ಟಾರ್ ವೇಗದ ಬೌಲರ್ ರಬಾಡ ಬಿಗುವಿನ ದಾಳಿ ನಡೆಸಿದರು. ಇವರ ಶಿಸ್ತು ಬದ್ಧ ದಾಳಿಯ ಪರಿಣಾಮ, ಕಿಂಗ್ಸ್ 2 ವಿಕೆಟ್ ಕಳೆದುಕೊಂಡು 2 ರನ್ ಸೇರಿಸಿತು. ಪಂಜಾಬ್ ನೀಡಿದ ಅಲ್ಪ ಮೊತ್ತವನ್ನು ಹಿಂಬಾಲಿಸಿದ ದೆಹಲಿ ಸುಲಭವಾಗಿ ಪಂದ್ಯ ಗೆದ್ದು ಬೀಗಿತು.

ಕ್ಯಾಪಿಟಲ್ಸ್ ನೀಡಿದ್ದ ಗುರಿ ಬೆನ್ನಟ್ಟಿದ ಪಂಜಾಬ್ ತಂಡದ ಆರಂಭ ಸಾಧಾರಣವಾಗಿತ್ತು. ರಾಹುಲ್, ಮಯಾಂಕ್ ತಂಡಕ್ಕೆ 30 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ನಾಯಕ ರಾಹುಲ್ 21 ರನ್ ಬಾರಿಸಿ ಔಟ್ ಆದರು.

ಉಳಿದಂತೆ ಮಧ್ಯಮ ಕ್ರಮಾಂಕದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಕರುಣ್ ನಾಯರ್, ನಿಕೋಲಸ್ ಪೊರನ್, ಸರ್ಫಾರಜ್ ಖಾನ್ ರನ್ ಬರ ಅನುಭವಿಸಿದರು. ಆರನೇ ವಿಕೆಟ್ ಗೆ ಮಯಾಂಕ್, ಗೌತಮ್ ಉತ್ತಮ ಜೊತೆಯಾಟದ ಭರವಸೆ ಮೂಡಿಸಿತು. ಈ ಜೋಡಿ ದೆಹಲಿ ತಂಡಕ್ಕೆ ಕೊಂಚ ಕಾಟ ನೀಡಿತು. ಈ ಜೋಡಿ 46 ರನ್ ಸೇರಿಸಿತು. ಗೌತಮ್ 20 ರನ್ ಬಾರಿಸಿ ಮುನ್ನುಗುತ್ತಿದ್ದಾಗ ರಬಾಡ ಎಸೆತದಲ್ಲಿ ಪಂತ್ ಗೆ ಕ್ಯಾಚ್ ನೀಡಿದರು.

ಒಂದು ತುದಿಯಲ್ಲಿ ವಿಕೆಟ್ ಗಳು ಪಟಪಟನೇ ಬೀಳುತ್ತಾ ಇದ್ದರೂ, ಧೃತಿ ಗೆಡದೆ ಬ್ಯಾಟ್ ಮಾಡಿದ ಕನ್ನಡಿಗ ಮಯಾಂಕ್ ಮನಮೋಹಕ ಬ್ಯಾಟಿಂಗ್ ನಡೆಸಿದರು. ಇವರು ಐಪಿಎಲ್ ನಲ್ಲಿ ವೈಯಕ್ತಿಕ ಗರಿಷ್ಠ ರನ್ ದಾಖಲಿಸಿದರು. 60 ಎಸೆತಗಳಲ್ಲಿ 89 ರನ್ ಬಾರಿಸಿ ಮಯಾಂಕ್ ಅಬ್ಬರಿಸಿದರು. ಇವರ ಮನಮೋಹಕ ಇನ್ನಿಂಗ್ಸ್ ನಲ್ಲಿ 7 ಬೌಂಡರಿ, 4 ಸಿಕ್ಸರ್ ಸೇರಿವೆ.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಕ್ಯಾಪಿಟಲ್ಸ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಅವರು ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಲಿಲ್ಲ. ವಿಂಡೀಸ್ ತಂಡದ ಸ್ಟಾರ್ ಆಟಗಾರ ಶಿಮ್ರೋನ್ ಹೆಟ್ಮೆಯರ್ ಸಹ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದರು.

13 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ತಂಡಕ್ಕೆ ಆಧಾರವಾಯಿತು. ಈ ಜೋಡಿ ತಂಡ ಸ್ಪರ್ಧಾತ್ಮಕ ಮೊತ್ತ ಸೇರಿಸುವಲ್ಲಿ ಶ್ರಮಿಸಿತು. ಈ ಜೋಡಿ ಸರಿಯಾಗಿ 10 ಓವರ್ ಬ್ಯಾಟಿಂಗ್ ನಡೆಸಿ, 73 ರನ್ ಸೇರಿಸಿತು. ಪಂತ್ 31 ರನ್ ಬಾರಿಸಿದ್ದಾಗ ರವಿ ಬಿಷ್ಣೋಯಿ ಅವರ ಎಸೆತವನ್ನು ಕೆಣಕಿ ಔಟ್ ಆದರು.

ನಾಯಕ ಶ್ರೇಯಸ್ ಅಯ್ಯರ್ 32 ಎಸೆತಗಳಲ್ಲಿ 3 ಸಿಕ್ಸರ್ ನೆರವಿನಿಂದ 39 ರನ್ ಬಾರಿಸಿ ಶಮಿ ಎಸೆತದಲ್ಲಿ ಔಟ್ ಆದರು. ಅಕ್ಷರ್ ಪಟೇಲ್ ನಿರಾಸೆ ಅನುಭವಿಸಿದರು.

ಅನುಭವಿ ಮಾರ್ಕಸ್ ಸ್ಟೋಯ್ನಿಸ್ ತಮ್ಮ ಅನುಭವ ಧಾರೆ ಎರೆದು ಬ್ಯಾಟಿಂಗ್ ನಡೆಸಿದರು. 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಸ್ಟೋಯ್ನಿಸ್ ಅಬ್ಬರಿಸಿದರು. ಇವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ದೆಹಲಿ ಕ್ಯಾಪಿಟಲ್ಸ್ ಉತ್ತಮ ಮೊತ್ತ ಕಲೆ ಹಾಕಿತು.
ಯುಎನ್ಐ ವಿಎನ್ಎಲ್ 0004
More News

ಡಿಡಿಸಿಎ ಸಭೆ ಡಿಸೆಂಬರ್ ವರೆಗೆ ಮುಂದೂಡಿಕೆ

29 Oct 2020 | 10:50 PM

 Sharesee more..
ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಸಿಬಿ ಸೋಲಿಗೆ ಕಾರಣ ಕೊಟ್ಟ ಕ್ಯಾಪ್ಟನ್ ಕೊಹ್ಲಿ

ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಸಿಬಿ ಸೋಲಿಗೆ ಕಾರಣ ಕೊಟ್ಟ ಕ್ಯಾಪ್ಟನ್ ಕೊಹ್ಲಿ

29 Oct 2020 | 9:06 PM

ಅಬುಧಾಬಿ, ಅ 29 (ಯುಎನ್‌ಐ) ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್ ಸೋಲು ಅನುಭವಿಸಿದ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಎದುರಾಳಿ ಬೌಲರ್‌ಗಳನ್ನು ಹೊಗಳಿದ್ದಾರೆ.

 Sharesee more..