Monday, Sep 21 2020 | Time 12:25 Hrs(IST)
 • ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ; ಹಾರಂಗಿ ಜಲಾಶಯದ ನೀರಿನ ಮಟ್ಟ ಏರಿಕೆ
 • ಕೊರೊನಾ ಆತಂಕದ ಮಧ್ಯೆ ವಿಧಾನಮಂಡಲ ಅಧಿವೇಶನ4 ಆರಂಭ: ಇತ್ತೀಚೆಗೆ ಮೃತರಾದ ಗಣ್ಯರಿಗೆ ಸಂತಾಪ
 • ಎತ್ತಿನ ಬಂಡಿ ಸಮೇತ ಇಬ್ಬರು ಯುವಕರು ನದಿ ಪಾಲು: ಮುಂದುವರೆದ ಶೋಧ ಕಾರ್ಯ
 • ಸಚಿವ ಸಂಪುಟ ವಿಸ್ತರಣೆಗಾಗಿ ವರಿಷ್ಠರ ಸಂದೇಶಕ್ಕಾಗಿ ಕಾಯುತ್ತಿದ್ದೇನೆ: ಯಡಿಯೂರಪ್ಪ
 • ಕೊರೋನಾ ಆರ್ಭಟ, 24 ಗಂಟೆಯಲ್ಲಿ 1,130 ಮಂದಿ ಸಾವು
 • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
 • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
 • ಕೊವಿಡ್‍-19: ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ 1,36,895 ಕ್ಕೆ ಏರಿಕೆ
 • ಬ್ರೆಜಿಲ್‌ನಲ್ಲಿ ಹೆದ್ದಾರಿ ಅಪಘಾತ: 12 ಮಂದಿ ಸಾವು
 • ಪ್ರೇಮಸೌಧ, ತಾಜ್ ಮಹಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ
 • ಭಾರತ- ಚೀನಾ ನಡುವೆ ಇಂದು ಸೇನಾ ಮಟ್ಟದ ಮಾತುಕತೆ
 • ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು
Special Share

ಕ್ಯಾಲಿಕೆಟ್‌ ವಿಮಾನನಿಲ್ದಾಣದ ರನ್‌ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ: ಹಲವರಿಗೆ ಗಾಯ

ಕ್ಯಾಲಿಕೆಟ್‌ ವಿಮಾನನಿಲ್ದಾಣದ ರನ್‌ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ: ಹಲವರಿಗೆ ಗಾಯ
ಕ್ಯಾಲಿಕೆಟ್‌ ವಿಮಾನನಿಲ್ದಾಣದ ರನ್‌ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ: ಹಲವರಿಗೆ ಗಾಯ

ಮಲಪ್ಪುರಂ, ಆಗಸ್ಟ್ 7 (ಯುಎನ್‌ಐ) ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಇಲ್ಲಿನ ಕರಿಪುರದ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಿಂದ ಜಾರಿ ಬಿದ್ದು ಪತನಗೊಂಡಿರುವ ಘಟನೆ ಇಂದು ಸಂಜೆ ನಡೆದಿದೆ.

ಘಟನೆಯ ಸಾವು-ನೋವುಗಳ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಲಪ್ಪುರಂ ಎಸ್‌.ಪಿ.ಅಬ್ದುಲ್ ಕರೀಂ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ರನ್‌ ವೇಯಲ್ಲಿ ವಿಮಾನ ಜಾರಿ ಈ ಅವಘಡ ಸಂಭವಿಸಿದೆ. ವಿಮಾನದ ಮುಂಭಾಗಕ್ಕೆ ಸಂಪೂರ್ಣ ಹಾನಿಯಾಗಿದ್ದು, ಪೈಲಟ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕೆಲವು ವರ್ಷಗಳ ಹಿಂದೆ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅಪಘಾತವನ್ನು ನೆನಪಿಸುವ ರೀತಿಯಲ್ಲಿ ಈ ಘಟನೆ ನಡೆದಿದೆ.

ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿ ಒಟ್ಟು 191 ಮಂದಿ ಪ್ರಯಾಣಿಕರಿದ್ದರು. ವಿಮಾನ ಎರಡು ತುಂಡುಗಳಾಗಿದೆ. ಆದರೆ ಅದೃಷ್ಟವಶಾತ್ ಬೆಂಕಿ ಹೊತ್ತಿಕೊಂಡಿಲ್ಲ. ಹಾಗಾಗಿ ಹೆಚ್ಚಿನ ಸಾವು ಸಂಭವಿಸಿರುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆ ಸ್ಥಗಿತಗೊಂಡಿದೆ. ಆದರೆ ವಿವಿಧ ದೇಶಗಳಲ್ಲಿ ಬಾಕಿಯಾಗಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ವಂದೇಭಾರತ್ ಮಿಷನ್ ಜಾರಿಗೊಳಿಸಿದೆ. ಈ ವಿಮಾನ ಕೂಡ ಅದರ ಭಾಗವಾಗಿದೆ ಎಂದು ತಿಳಿದುಬಂದಿದೆ.

ಯುಎನ್ಐ ಎಎಚ್ 2130

More News

ಭಾರತ- ಚೀನಾ ನಡುವೆ ಇಂದು ಸೇನಾ ಮಟ್ಟದ ಮಾತುಕತೆ

21 Sep 2020 | 8:48 AM

 Sharesee more..

ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು

21 Sep 2020 | 8:00 AM

 Sharesee more..
ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ, ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ: ಪ್ರಧಾನಿ ಮೋದಿ ರೈತರಿಗೆ ಭರವಸೆ

ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ, ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ: ಪ್ರಧಾನಿ ಮೋದಿ ರೈತರಿಗೆ ಭರವಸೆ

20 Sep 2020 | 8:02 PM

ನವದೆಹಲಿ, ಸೆ 20(ಯುಎನ್ಐ) ಕೃಷಿ ವಲಯದ ಸುಧಾರಣೆಗಳಿಗೆ ಸಂಬಂಧಿಸಿದ ಎರಡು ಮಹತ್ವದ ವಿಧೇಯಕಗಳು ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ರೈತರನ್ನು ಅಭಿನಂದಿಸಿದ್ದಾರೆ.

 Sharesee more..