Sunday, Mar 29 2020 | Time 00:51 Hrs(IST)
National Share

ಕಿರಣ್ ಮಜುಂದಾರ್‌ಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ

ಕಿರಣ್ ಮಜುಂದಾರ್‌ಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಕಿರಣ್ ಮಜುಂದಾರ್‌ಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ

ನವದೆಹಲಿ, ಜ. 18 (ಯುಎನ್‌ಐ) ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಖ್ಯಾತ ಉದ್ಯಮಿ ಕಿರಣ್ ಮಜುಂದಾರ್-ಶಾ ಅವರು ಭಾಜನರಾಗಿದ್ದಾರೆ.

ಸಾಮಾನ್ಯ ವಿಭಾಗದಲ್ಲಿ ಆರ್ಡರ್ ಆಫ್ ಆಸ್ಟ್ರೇಲಿಯಾದ ಗೌರವ ಸದಸ್ಯ ( ಹಾನರರಿ ಮೆಂಬರ್ ವಿಥಿನ್ ಆರ್ಡರ್‌ ಆಫ್ ಆಸ್ಟ್ರೇಲಿಯಾ ಇನ್‌ ದಿ ಜನರಲ್ ಡಿವಿಷನ್) ಎಂಬ ಪ್ರಶಸ್ತಿಯನ್ನು ಆಸ್ಟ್ರೇಲಿಯಾದಲ್ಲಿ ಭಾರತದ ಹೈ ಕಮಿಷನರ್ ಹರಿಂದರ್ ಸಿಧು ಅವರ ಮೂಲಕ ಕಿರಣ್ ಮಜುಂದಾರ್ ಅವರಿಗೆ ಪ್ರದಾನ ಮಾಡಲಾಗಿದೆ.

ಆಸ್ಟ್ರೇಲಿಯಾವು ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವಲ್ಲಿ ನೀಡಿದ ಅಪಾರ ಕೊಡುಗೆಗಾಗಿ ಡಾ. ಕಿರಣ್ ಮಜುಂದಾರ್-ಶಾ ಅವರಿಗೆ ಈ ಗೌರವವನ್ನು ಆಸ್ಟ್ರೇಲಿಯಾ ಸರ್ಕಾರ ಪ್ರದಾನ ಮಾಡಿದೆ ಎಂದು ಎಂ.ಎಸ್. ಸಿಧು ಹೇಳಿದರು.

ಶುಕ್ರವಾರ ನಡೆದ ಸಮಾರಂಭದಲ್ಲಿ ಭಾರತೀಯ ಮತ್ತು ಆಸ್ಟ್ರೇಲಿಯಾದ ವ್ಯಾಪಾರ, ರಾಜತಾಂತ್ರಿಕ ಪ್ರತಿನಿಧಿಗಳು ಮತ್ತು ಡಾ. ಮಜುಂದಾರ್-ಶಾ ಅವರ ಕುಟುಂಬ, ಸ್ನೇಹಿತರು ಮತ್ತು ಗೆಳೆಯರು ಭಾಗವಹಿಸಿದ್ದರು.

ಫೆಡರೇಶನ್ ಯೂನಿವರ್ಸಿಟಿ ಆಸ್ಟ್ರೇಲಿಯಾದ ಹಳೆಯ ವಿದ್ಯಾರ್ಥಿಯಾಗಿರುವ ಡಾ. ಮಜುಂದಾರ್-ಶಾ ಅವರು ಬಯೋಕಾನ್ ಸ್ಥಾಪಕರಾಗಿದ್ದಾರೆ. ಇದು ಭಾರತದ ಅತಿದೊಡ್ಡ ಜೈವಿಕ ಔಷಧೀಯ ಕಂಪನಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಲಿಂಗ ಸಮಾನತೆಗೆ ಅವರ ದೀರ್ಘಕಾಲದ ಬದ್ಧತೆಯ ಭಾಗವಾಗಿ, ಆಸ್ಟ್ರೇಲಿಯಾದ ಬಯೋಕಾನ್ ಮತ್ತು ಡೀಕಿನ್ ವಿಶ್ವವಿದ್ಯಾಲಯದ ನಡುವೆ ಅಭಿವೃದ್ಧಿಪಡಿಸಿದ ಜಂಟಿ ಸಂಶೋಧನಾ ಕಾರ್ಯಕ್ರಮಗಳ ಮೂಲಕ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಎಸ್‌ಟಿಇಎಂ) ಕ್ಷೇತ್ರಗಳಲ್ಲಿ ಮಹಿಳೆಯರನ್ನು ಉತ್ತೇಜಿಸಲು ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಆಸ್ಟ್ರೇಲಿಯಾದ ಜಾಗತಿಕ ಹಳೆಯ ವಿದ್ಯಾರ್ಥಿಗಳ ರಾಯಭಾರಿಯಾಗಿದ್ದ ಡಾ. ಮಜುಂದಾರ್-ಶಾ ಅವರು ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಉದ್ಯಮ ಅಕಾಡೆಮಿ ಸಹಯೋಗಕ್ಕೆ ನಿರಂತರ ಮತ್ತು ಮಹತ್ವದ ಕೊಡುಗೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎಸ್. ಸಿಧು, ಡಾ. ಮಜುಂದಾರ್-ಶಾ ನಮ್ಮ ಉಭಯ ದೇಶಗಳ ನಡುವಿನ ವಾಣಿಜ್ಯ, ಶೈಕ್ಷಣಿಕ ಮತ್ತು ಜನರ- ಜನರ ನಡುವಿನ ಸಂಪರ್ಕದ ದಣಿವರಿಯದ ಚಾಂಪಿಯನ್ ಆಗಿದ್ದಾರೆ. ಈ ಪ್ರಶಸ್ತಿ ಆಸ್ಟ್ರೇಲಿಯಾ-ಭಾರತ ಸಹಭಾಗಿತ್ವವನ್ನು ಸಾಧಿಸುವ ಅವರ ಬದ್ಧತೆಯನ್ನು ಗುರುತಿಸುತ್ತದೆ ಎಂದು ಬಣ್ಣಿಸಿದರು.

ಆಸ್ಟ್ರೇಲಿಯಾ ಅಥವಾ ಮಾನವೀಯತೆಗೆ ಮಹತ್ತರ ಕೊಡುಗೆ ನೀಡಿದ ವಿದೇಶಿ ಪ್ರಜೆಗಳಿಗೆ ಆರ್ಡರ್ ಆಫ್ ಆಸ್ಟ್ರೇಲಿಯಾ ಗೌರವ ಪ್ರಶಸ್ತಿಯನ್ನು ನೀಡುತ್ತದೆ.

ಡಾ. ಮಜುಂದಾರ್-ಶಾ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಗೌರವವನ್ನು ಪಡೆದ ನಾಲ್ಕನೇ ಭಾರತೀಯ ನಾಗರಿಕರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2012 ರಲ್ಲಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, 2006 ರಲ್ಲಿ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಬ್ಜಿ ಮತ್ತು 1982 ರಲ್ಲಿ ಮದರ್ ತೆರೇಸಾ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದರು.

ಯುಎನ್ಐ ಎಎಚ್ 2141

More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..