Monday, Sep 21 2020 | Time 12:48 Hrs(IST)
 • ವಾಷಿಂಗ್ಟನ್‌ ಸುಂದರ್‌ಗೆ ಆರಂಭಿಕ ಸ್ಥಾನ ನೀಡುವಂತೆ ಗೌತಮ್‌ ಗಂಭೀರ್‌ ಸಲಹೆ
 • ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ; ಹಾರಂಗಿ ಜಲಾಶಯದ ನೀರಿನ ಮಟ್ಟ ಏರಿಕೆ
 • ಕೊರೊನಾ ಆತಂಕದ ಮಧ್ಯೆ ವಿಧಾನಮಂಡಲ ಅಧಿವೇಶನ4 ಆರಂಭ: ಇತ್ತೀಚೆಗೆ ಮೃತರಾದ ಗಣ್ಯರಿಗೆ ಸಂತಾಪ
 • ಎತ್ತಿನ ಬಂಡಿ ಸಮೇತ ಇಬ್ಬರು ಯುವಕರು ನದಿ ಪಾಲು: ಮುಂದುವರೆದ ಶೋಧ ಕಾರ್ಯ
 • ಸಚಿವ ಸಂಪುಟ ವಿಸ್ತರಣೆಗಾಗಿ ವರಿಷ್ಠರ ಸಂದೇಶಕ್ಕಾಗಿ ಕಾಯುತ್ತಿದ್ದೇನೆ: ಯಡಿಯೂರಪ್ಪ
 • ಕೊರೋನಾ ಆರ್ಭಟ, 24 ಗಂಟೆಯಲ್ಲಿ 1,130 ಮಂದಿ ಸಾವು
 • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
 • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
 • ಕೊವಿಡ್‍-19: ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ 1,36,895 ಕ್ಕೆ ಏರಿಕೆ
 • ಬ್ರೆಜಿಲ್‌ನಲ್ಲಿ ಹೆದ್ದಾರಿ ಅಪಘಾತ: 12 ಮಂದಿ ಸಾವು
 • ಪ್ರೇಮಸೌಧ, ತಾಜ್ ಮಹಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ
 • ಭಾರತ- ಚೀನಾ ನಡುವೆ ಇಂದು ಸೇನಾ ಮಟ್ಟದ ಮಾತುಕತೆ
 • ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು
National Share

ಕೇರಳದಲ್ಲಿ ಭಾರೀ ಭೂಕುಸಿತ: 10 ಮಂದಿ ಸಾವು, 85 ಮಂದಿ ನಾಪತ್ತೆ

ಕೇರಳದಲ್ಲಿ ಭಾರೀ ಭೂಕುಸಿತ: 10 ಮಂದಿ ಸಾವು, 85 ಮಂದಿ ನಾಪತ್ತೆ
ಕೇರಳದಲ್ಲಿ ಭಾರೀ ಭೂಕುಸಿತ: 10 ಮಂದಿ ಸಾವು, 85 ಮಂದಿ ನಾಪತ್ತೆ

ಇಡುಕ್ಕಿ, ಕೇರಳ ಆ 7 (ಯುಎನ್‌ಐ)- ಜಿಲ್ಲೆಯ ರಾಜಮಾಲಾದ ಪೆಟ್ಟಿಮುಡಿಯಲ್ಲಿ ಶುಕ್ರವಾರ ಭಾರಿ ಮಳೆಯಿಂದಾಗಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 85 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಗುರುವಾರ ರಾತ್ರಿಯಿಂದ ಈ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಮುನ್ನಾರ್ ಗ್ರಾಮ ಪಂಚಾಯಿತಿಯ ರಾಜಮಳದ ಪೆಟ್ಟಿಮುಡಿಯಲ್ಲಿ ಸಂಭವಿಸಿದ ಭೂಕುಸಿತದ ಸ್ಥಳದಿಂದ ಹತ್ತು ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಭೂಕುಸಿದ ದುರಂತದಲ್ಲಿ 16 ಜನರನ್ನು ರಕ್ಷಿಸಲಾಗಿದ್ದು, ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ರಕ್ಷಿಸದವರನ್ನು ಇಲ್ಲಿನ ಕಣ್ಣನ್ ದೇವನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ಮುಂಜಾನೆ 4 ಗಂಟೆಗೆ ಸಂಭವಿಸಿದ್ದು, ಸಂವಹನ ಕೊರತೆಯಿಂದಾಗಿ ಘಟನೆ ಇಂದು ಬೆಳಿಗ್ಗೆಯಷ್ಟೇ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಹವಾಮಾನ ಪೂರಕವಾಗಿದ್ದರೆ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಜನರನ್ನು ವೈಮಾನಿಕ ಮೂಲಕ ಸ್ಥಳಾಂತರಿಸುವುದಕ್ಕೆ ಚಿಂತಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಯುಎನ್‌ಐಗೆ ತಿಳಿಸಿದ್ದಾರೆ.

ಯಾವುದೇ ತುರ್ತು ಪರಿಸ್ಥಿತಿಗೆ ಸನ್ನದ್ಧರಾಗಿರುವಂತೆ ನೆರೆಯ ಜಿಲ್ಲೆಯ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ.

ನಿನ್ನೆ ರಾತ್ರಿ ಪ್ರವಾಹದಿಂದ ಪೆರಿಯವರಂ ಸೇತುವೆ ನಾಶವಾಗಿದ್ದರಿಂದ ತಕ್ಷಣವೇ ಪೊಲೀಸ್ ಇಲ್ಲವೇ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ತಲುಪಲು ಸಾಧ್ಯವಾಗಿರಲಿಲ್ಲ.

ಮುನ್ನಾರ್‌ನಿಂದ ಸುಮಾರು 30 ಕಿ.ಮೀ ದೂರದಲ್ಲಿ ಭೂಕುಸಿತ ಸಂಭವಿಸಿದೆ. ಈ ಪ್ರದೇಶವು ಎರವಿಕುಲಂ ರಾಷ್ಟ್ರೀಯ ಉದ್ಯಾನದ ಭಾಗವಾಗಿರುವ ಕಾರಣ ರಕ್ಷಣಾ ಕಾರ್ಯಾಚರಣೆಗೆ ವಿಳಂಬವಾಗಿತ್ತು.

ಕಣ್ಣನ್ ದೇವನ್ ಚಹಾ ತೋಟದಲ್ಲಿನ 20 ಮನೆಗಳಲ್ಲಿ ವಾಸಿಸುತ್ತಿದ್ದ ಜನರು ಭೂಕುಸಿತದಿಂದ ಸಮಾಧಿಯಾಗಿರುವ ಶಂಕೆ ಇದೆ.

uni sls 1543