Saturday, Nov 28 2020 | Time 16:54 Hrs(IST)
  • ಭಾರತ್ ಬಯೋಟೆಕ್ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಅಭಿನಂದನೆ
  • ಬಿಬಿಐಎಲ್‌: ಕೋವ್ಯಾಕ್ಸಿನ್‌ ಪ್ರಗತಿಗೆ ವಿಜ್ಞಾನಿಗಳಿಗೆ ಮೋದಿ ಅಭಿನಂದನೆ
  • ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ನಿಗ್ರಹ ಸುಗ್ರೀವಾಜ್ಞೆ ಇಂದಿನಿಂದ ಜಾರಿ
  • ಇಂದು ಪುಣೆ ತಲುಪಲಿರುವ ಪ್ರಧಾನಿ ಮೋದಿ
  • ಪಾಕ್ ನಿಂದ ಕಾಂಬೋಡಿಯಾಗೆ ವಿಮಾನದಲ್ಲಿ 10 ಗಂಟೆ ಪ್ರಯಾಣಿಸಲಿರುವ ಆನೆ !
  • ಜೈಡಸ್ ಕ್ಯಾಡಿಲಾ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ: ಪ್ರಧಾನಿ ಮೋದಿ
  • ಬಿ ಐ ಎಸ್ ದೃಢೀಕೃತ ಹೆಲ್ಮಟ್ ಮಾತ್ರ ಧರಿಸಬೇಕು ತಪ್ಪಿದರೆ ಶಿಕ್ಷೆ ನಿಶ್ಚಿತ !
  • ಗುರುಗ್ರಾಮದಲ್ಲಿ ಡಿ 18ಕ್ಕೆ ಬಾಕ್ಸಿಂಗ್ ಸಂಸ್ಥೆಯ ಚುನಾವಣೆ
  • ಹೈದ್ರಾಬಾದ್ ; ‘ಕೋವಾಕ್ಸಿನ್’ ಲಸಿಕೆ ಅಭಿವೃದ್ದಿ ಪರಿಶೀಲಿಸುತ್ತಿರುವ ಪ್ರಧಾನಿ ಮೋದಿ
  • ಪುಟಿದೇಳುವ ನಿರೀಕ್ಷೆಯಲ್ಲಿ ಒಡಿಶಾ, ಜಮ್ ಶೆಡ್ಪುರ
  • ಮತ್ತೆ ಮಿಂಚುವ ಬಗ್ಗೆ ಭರವಸೆ ನೀಡಿದ ರಾಬ್ಬೀ ಫ್ಲವರ್
  • ಸರಣಿ ಜೀವಂತಕ್ಕೆ ಟೀಮ್ ಇಂಡಿಯಾ ಹಂಬಲ
  • ದೇಶದಲ್ಲಿ ಕೋವಿಡ್‍-19ನ 41,322 ಹೊಸ ಪ್ರಕರಣಗಳು ವರದಿ: ಒಟ್ಟು ಸಂಖ್ಯೆ 93,51,110ಕ್ಕೆ ಏರಿಕೆ
  • ಭಾರತ-ಹವಾಮಾನ ಬದಲಾವಣೆ ಜ್ಞಾನ ಪೋರ್ಟಲ್ ಗೆ ಪ್ರಕಾಶ್ ಜಾವಡೇಕರ್ ಚಾಲನೆ
  • ಚಂಡಮಾರುತದಿಂದ ಉಂಟಾದ ಪರಿಸ್ಥಿತಿ ಕುರಿತು ತಮಿಳುನಾಡು ಮುಖ್ಯಮಂತ್ರಿಯೊಂದಿಗೆ ಪ್ರಧಾನಿ ಚರ್ಚೆ
Sports Share

ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಆಟಗಾರರ ವೇತನ ವಿವಾದಕ್ಕೆ ತೆರೆ

ನವದೆಹಲಿ, ಜುಲೈ 4 (ಯುಎನ್ಐ)- ಕೊರೊನಾ ವೈರಸ್ (ಕೋವಿಡ್-19) ಸಾಂಕ್ರಾಮಿಕದಿಂದ ಉಂಟಾದ ಹಾನಿಯ ಆದಾಯ ಮೌಲ್ಯಮಾಪನವನ್ನು ಮುಂದೂಡಲು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಮತ್ತು ಆಸ್ಟ್ರೇಲಿಯನ್ ಕ್ರಿಕೆಟಿಗರ ಸಂಘ (ಎಸಿಎ) ಪರಸ್ಪರ ಒಪ್ಪಿಕೊಂಡಿವೆ, ನಂತರ ಎರಡು ಕಡೆಯವರು ವೇತನದ ಬಗ್ಗೆ ನಡೆಯುತ್ತಿರುವ ವಿವಾದಕ್ಕೆ ತೆರೆ ಏಳೆದಿದೆ.

ಕೊರೊನಾ ವೈರಸ್‌ನಿಂದ ಉಂಟಾಗುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಟಗಾರರಿಗೆ ಪಾವತಿಸಿದ ಹಣವನ್ನು ಕಡಿತಗೊಳಿಸಿದ ಬಗ್ಗೆ ಸಿಎ ಮಾತನಾಡಿದ ನಂತರ ಎಸಿಎಯೊಂದಿಗಿನ ಅವರ ವಿವಾದ ಪ್ರಾರಂಭವಾಯಿತು.

ಆದಾಯ ಅಂದಾಜುಗಳನ್ನು ಮುಂದೂಡಲು ಸಿಎ ಮತ್ತು ಎಸಿಎ ಶನಿವಾರ ಒಪ್ಪಿಕೊಂಡಿವೆ. ಸಿಎ ವಕ್ತಾರರು, "ಕೊರೊನಾ ವೈರಸ್ ಸಾಂಕ್ರಾಮಿಕವು ಆರ್ಥಿಕ ಪರಿಸ್ಥಿತಿಯ ಮೇಲಿನ ಪರಿಣಾಮವನ್ನು ಬೀರಿದ್ದು, ಇದನ್ನು ನಿಭಾಯಿಸಲು ಎರಡೂ ಕಡೆಯವರು (ಸಿಎ ಮತ್ತು ಎಸಿಎ) ಒಪ್ಪಿಕೊಂಡಿದ್ದಾರೆ" ಎಂದು ಹೇಳಿದರು.

ಎಸಿಎ ಕಳೆದ ತಿಂಗಳು ಸಲ್ಲಿಸಿದ ವಿವಾದಕ್ಕೆ ಸಂಬಂಧಿಸಿದ ನೋಟಿಸ್ ಅನ್ನು ಹಿಂತೆಗೆದುಕೊಂಡಿದೆ ಎಂದು ಅವರು ಹೇಳಿದರು. ಚರ್ಚೆಯಲ್ಲಿ ರಚನಾತ್ಮಕವಾಗಿ ಭಾಗವಹಿಸಿದ್ದಕ್ಕಾಗಿ ನಾವು ಎಸಿಎಗೆ ಧನ್ಯವಾದ ಹೇಳಲು ಬಯಸುತ್ತೇವೆ

"ಇಂತಹ ಸಾಂಕ್ರಾಮಿಕ ಸಮಯದಲ್ಲಿ, 12 ತಿಂಗಳ ಮುಂಚಿತವಾಗಿ ಆದಾಯದ ಮೌಲ್ಯಮಾಪನವನ್ನು ಸವಾಲುಗಳಿಲ್ಲದೆ ಪೂರ್ಣಗೊಳಿಸಲಾಗುವುದಿಲ್ಲ ಆದರೆ ನಾವು ಎಲ್ಲರಿಗೂ ಪ್ರಕರಣದ ಬಗ್ಗೆ ಹೆಚ್ಚಿನ ಖಚಿತತೆಯನ್ನು ನೀಡುವ ವಿಶ್ವಾಸವಿದೆ" ಎಂದು ಹೇಳಿದರು.

ಯುಎನ್ಐ ವಿಎನ್ಎಲ್ 1735