Monday, Jul 22 2019 | Time 07:10 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Sports Share

ಕ್ರಿಕೆಟಿಗ ಸಾವು : ಜಮ್ಮು ಮತ್ತು ಕಾಶ್ಮೀರ ಸರ್ಕಾರದಿಂದ 5 ಲಕ್ಷ ಪರಿಹಾರ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) ಜು 12 (ಯುಎನ್ಐ) ಕ್ರಿಕೆಟ್‌ ಪಂದ್ಯವಾಳಿ ವೇಳೆ ಚೆಂಡು ತಾಗಿ ಮೃತಪಟ್ಟಿದ್ದ ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟಿಗ ಜಹಾಂಗೀರ್‌ ಅಹಮದ್‌ ವಾರ್ ಅವರಿಗೆ ಶುಕ್ರವಾರ ರಾಜ್ಯಪಾಲ ಸತ್ಯ ಪಾಲ್‌ ಮಲಿಕ್‌ 5 ಲಕ್ಷ ಪರಿಹಾರವನ್ನು ನೀಡಿದ್ದಾರೆ.
ಗುರುವಾರ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬಾರಮುಲ್ಲಾ ಹಾಗೂ ಬದ್ಗಾಮ್‌ ಜಿಲ್ಲೆಗಳ ನಡುವೆ ಕ್ರಿಕೆಟ್‌ ಪಂದ್ಯವಾಳಿ ಅನಂತ್‌ನಾಗ್‌ನಲ್ಲಿ ಆಯೋಜಿಸಿತ್ತು.
ಈ ವೇಳೆ ಬ್ಯಾಟಿಂಗ್‌ ಮಾಡುತ್ತಿದ್ದ ಜಹಾಂಗೀರ್‌ಗೆ ಬೌನ್ಸರ್‌ ಎಸೆತದಲ್ಲಿ ಚೆಂಡು ತಲೆ ಹಾಗೂ ಕೊರಳಿನ ನಡುವೆ ತಾಗಿತ್ತು. ಈ ವೇಳೆ ನೆಲಕ್ಕೆ ಉರುಳಿದ ಜಹಾಂಗೀರ್‌ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ದೇಹವನ್ನು ತಪಾಸಣೆ ನಡೆಸಿದ ವೈದ್ಯರು ಮಾರ್ಗದ ಮಧ್ಯೆಯ ಜಹಾಂಗೀರ್‌ ನಿಧನರಾಗಿದ್ದಾರೆ ಎಂದು ತಿಳಿಸಿದರು.

ಯುಎನ್‌ಐ ಆರ್‌ಕೆ ಎಎಚ್‌ 1107