Sunday, Sep 27 2020 | Time 03:18 Hrs(IST)
Entertainment Share

ಕ್ರಿಕೆಟ್ ತಾರೆ ಮಿಥಾಲಿಯಾಗಿ ತಾಪ್ಸಿ

ಮುಂಬೈ,ಡಿ 4 (ಯುಎನ್ಐ) ಬಾಲಿವುಡ್ ನಲ್ಲಿ ಸದ್ಯ ಜೀವನಾಧಾರಿತ ಚಿತ್ರಗಳು ಸಖತ್ ಹವಾ ಮಾಡುತ್ತಿರುವಾಗಲೇ ಮತ್ತೊಂದು ಜೀವನ ಚರಿತ್ರೆ ಆಧರಿಸಿದ ಚಿತ್ರದಲ್ಲಿ ಅಭಿನಯಿಸಲು ನಟಿ ತಾಪ್ಸಿ ಪನ್ನು ಸಜ್ಜಾಗಿದ್ದಾರೆ.
'ಸಾಂಡ್ ಕೀ ಆಂಖೇ' ಜೀವನಾಧಾರಿತ ಚಿತ್ರದಲ್ಲಿ ನಟಿಸಿದ್ದರು.
ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಜೀವನಾಧಾರಿತ ಚಿತ್ರ ಹೊರಬರುತ್ತಿದ್ದು, ಮಿಥಾಲಿ ಆಗಿ ತಾಪ್ಸಿ, ತಂಡದ ನಾಯಕಿಯ ಹೊಣೆ ಹೊರಲಿದ್ದಾರೆ.
'ಶಭಾಷ್ ಮಿಟ್ಟು' ಎಂದು ಈ ಚಿತ್ರಕ್ಕೆ ಹೆಸರಿಡಲಾಗಿದ್ದು, ಬಾಲಿವುಡ್ ನಿರ್ದೇಶಕ ರಾಹುಲ್ ಢೋಲಕಿಯಾ ಈ ಚಿತ್ರ ನಿರ್ದೇಶಿಸಿದ್ದಾರೆ.
ಚಿತ್ರದ ಕುರಿತು ಮಾತನಾಡಿದ ತಾಪ್ಸಿ, ಭಾರತೀಯ ಕ್ರಿಕೆಟ್ ತಂಡದ ನಾಯಕಿಯ ಪಾತ್ರ ನಿರ್ವಹಿಸುವುದು ಅತ್ಯಂತ ಗೌರವಯುತವಾಗಿದೆ. ಈಗಾಗಲೇ ಈ ಪಾತ್ರ ನಿಭಾಯಿಸಲು ನನಗೆ ಸ್ವಲ್ಪ ಒತ್ತಡ ಎಂದೆನಿಸುತ್ತಿದೆ. ಆದರೂ, ಈ ಪಾತ್ರವನ್ನು ಬೇರೆಯವರೆಗೆ ಬಿಟ್ಟು ಕೊಡುವುದಿಲ್ಲ‌ ಎಂದರು.
'ಸುರ್ಮಾ' ಚಿತ್ರದಲ್ಲಿ ಹಾಕಿ ಆಟಗಾರ್ತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದ ತಾಪ್ಸಿ, ಚಿಕ್ಕಂದಿನಿಂದಲೂ ಹಲವು ಆಟಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೇ, ಬ್ಯಾಡ್ಮಿಂಟನ್ ಎಂದರೆ ತಾಪ್ಸಿ ಅವರಿಗೆ ಬಲು ಇಷ್ಟವಂತೆ.
ಯುಎನ್ಐ ಪಿಕೆ ವಿಎನ್ 2011
More News
‘ಕಸ್ತೂರಿ ಮಹಲ್’ ಒಡತಿಯಾಗಿ ಶಾನ್ವಿ ಶ್ರೀವಾಸ್ತವ್

‘ಕಸ್ತೂರಿ ಮಹಲ್’ ಒಡತಿಯಾಗಿ ಶಾನ್ವಿ ಶ್ರೀವಾಸ್ತವ್

26 Sep 2020 | 8:33 PM

ಬೆಂಗಳೂರು, ಸೆ 26 (ಯುಎನ್‍ಐ) ಕಸ್ತೂರಿ ಮಹಲ್ ಚಿತ್ರಕ್ಕೆ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್ ಆಯ್ಕೆಯಾಗಿದ್ದಾರೆ.

 Sharesee more..

ಹೊಟ್ಟೆನೋವು : ನಟ ಶರಣ್ ಆಸ್ಪತ್ರೆಗೆ ದಾಖಲು

26 Sep 2020 | 4:07 PM

 Sharesee more..

ಗಾನ ಸರಸ್ವತಿಯ ಮಡಿಲು ಸೇರಿದ ಸ್ವರ ಮಾಂತ್ರಿಕ

26 Sep 2020 | 12:47 PM

 Sharesee more..