Sunday, Nov 1 2020 | Time 00:23 Hrs(IST)
Entertainment Share

ಕ್ರೀಡೆಯಾಧರಿತ ಚಿತ್ರಕ್ಕೆ ಟೈಗರ್ ಶ್ರಾಫ್ ಪಡೆಯುವ ಸಂಭಾವನೆ ಎಷ್ಟು ಗೊತ್ತ?

ಮುಂಬೈ, ಸೆ.16 (ಯುಎನ್ಐ)- ಬಾಲಿವುಡ್ ನಟ ಟೈಗರ್ ಶ್ರಾಫ್ ತಮ್ಮ ಮುಂಬರುವ ಕ್ರೀಡೆಯಾಧರಿತ ಚಿತ್ರಕ್ಕಾಗಿ 30 ಕೋಟಿ ರೂ.ಶುಲ್ಕ ವಿಧಿಸಬಹುದು.

ಟೈಗರ್ ಶ್ರಾಫ್ ಚಿತ್ರ 'ಗಣಪತ್' ನಲ್ಲಿ ಕೆಲಸ ಮಾಡಲು ಹೊರಟಿದ್ದಾರೆ. ಈ ಚಿತ್ರದಲ್ಲಿ ಟೈಗರ್ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರವನ್ನು ವಿಕಾಸ್ ಬಹ್ಲ್ ನಿರ್ದೇಶಿಸಲಿದ್ದು, ಜಾಕಿ ಭಗ್ನಾನಿ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಇದು ಬಾಕ್ಸಿಂಗ್ ಮತ್ತು ಸಮರ ಕಲೆಗಳ ಸುತ್ತ, ಸುತ್ತುವ ವಿಶಿಷ್ಟ ಚಿತ್ರವಾಗಲಿದೆ. ಕಥೆಯು ತಂದೆ ಮತ್ತು ಮಗನ ನಡುವಿನ ಸಂಬಂಧವನ್ನು ತೋರಿಸುತ್ತದೆ.

ಈ ಕ್ರೀಡಾ ಚಿತ್ರಕ್ಕಾಗಿ ಲಾಕ್ ಡೌನ್ ಸಮಯದಲ್ಲಿ ಟೈಗರ್ ತಯಾರಿ ನಡೆಸಿದ್ದಾರೆ. ಅವರು ಬಾಕ್ಸರ್ ಅನ್ನು ಹೋಲುವ ದೇಹದಾಡ್ಯದ ತರಬೇತಿಯಲ್ಲಿ ನಿರತರಾಗಿದ್ದಾರೆ. ಅನೇಕ ಬಾಕ್ಸಿಂಗ್ ಪಂದ್ಯಗಳನ್ನು ಸಹ ಚಿತ್ರದಲ್ಲಿ ತೋರಿಸಲಾಗುತ್ತದೆ. ಆದ್ದರಿಂದ ಟೈಗರ್ ಬಾಕ್ಸಿಂಗ್ ತಂತ್ರದ ಬಗ್ಗೆಯೂ ಕೆಲಸ ಮಾಡುತ್ತಿದ್ದಾರೆ. ಅವರು ಹಲವಾರು ಬಾಕ್ಸಿಂಗ್ ಪಂದ್ಯಗಳನ್ನು ಸಹ ನೋಡುತ್ತಿದ್ದಾರೆ.

ಯುಎನ್ಐ ವಿಎನ್ಎಲ್ 1448
More News

ನಟ, ನಿರ್ಮಾಪಕ ದಿನೇಶ್ ಗಾಂಧಿ ನಿಧನ

31 Oct 2020 | 1:53 PM

 Sharesee more..

ಕಮಲ ಹಾಸನ್ ಜನ್ಮದಿನದಂದು 232ನೇ ಫಸ್ಟ್ ಲುಕ್

31 Oct 2020 | 12:15 PM

 Sharesee more..

ಡಿ ಬಾಸ್ ರೀತಿ ಹೆಸರು ಮಾಡ್ಬೇಕು : ಅಮೂಲ್ಯ

31 Oct 2020 | 8:32 AM

 Sharesee more..

ಕಾಜಲ್ - ಕಿಚ್ಲು ಕಲ್ಯಾಣ

30 Oct 2020 | 3:03 PM

 Sharesee more..