Monday, Jun 1 2020 | Time 02:16 Hrs(IST)
Entertainment Share

ಕೊರೊನಾ ಜಾಗೃತಿಗೆ ಸ್ಯಾಂಡಲ್ ವುಡ್ ಸಾಥ್

ಬೆಂಗಳೂರು, ಮೇ 23 (ಯುಎನ್ಐ) ಸ್ಯಾಂಡಲ್​ವುಡ್ ನ ಹಲವು ತಾರೆಯರು ಈಗಾಗಲೇ ಮಾಹಾಮಾರಿ ಕೊರೊನಾ ವಿರುದ್ಧದ ಹೋರಾಟಕ್ಕೆ ಸಾಥ್ ನೀಡಿದ್ದು, ಇದೀಗ ಹಾಡೊಂದರ ಮೂಲಕ ಜಾಗೃತಿ ಮೂಡಿಸಲು ಸಜ್ಜಾಗಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆ ಈ ವಿಡಿಯೋವನ್ನು ನಿರ್ಮಿಸಿದ್ದು, ಸ್ಯಾಂಡಲ್ ವುಡ್ ನಿರ್ದೇಶಕ ಪವನ್​ ಒಡೆಯರು ನಿರ್ದೇಶನ ಮಾಡಿದ್ದು, ಹಾಡಿಗೆ ಪ್ರದ್ಯಮ್ನ ಸಾಹಿತ್ಯ ಬರೆದಿದ್ದಾರೆ.
ವಿ ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದು, ಇಮ್ರಾನ್​ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಿದ್ದಾರೆ.
‘ಬದಲಾಗು ನೀನು… ಬದಲಾಯಿಸು ನೀನು' ಎಂಬ ಹಾಡಿನ ಮೂಲಕ ಕೋವಿಡ್​-19 ವಿರುದ್ಧ ಎಚ್ಚರಿಕೆ ಸಂದೇಶ ನೀಡಲು ಕಲಾವಿದರು ಮುಂದಾಗಿದ್ದಾರೆ.
ಮೇ. 25 ರಂದು ಸಂಜೆ 5 ಗಂಟೆಗೆ ಈ ಹಾಡು ಯೂಟ್ಯೂಬ್​ನಲ್ಲಿ ಡಿಬೀಟ್ಸ್​​ ಚಾನಲ್​​​ನಲ್ಲಿ ಈ ವಿಡಿಯೋ ಬಿಡುಗಡೆಗೊಳ್ಳಲಿದೆ.
ಎಂಟು ನಿಮಿಷಗಳ ಈ ಹಾಡಿನಲ್ಲಿ ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಸೇರಿ ನಟರಾದ ಉಪೇಂದ್ರ, ದರ್ಶನ್, ರವಿಚಂದ್ರನ್, ಗಣೇಶ್, ರಕ್ಷಿತ್ ಶೆಟ್ಟಿ, ರವಿಶಂಕರ್, ರಮೇಶ್ ಅರವಿಂದ್, ವಿಜಯ್ ಪ್ರಕಾಶ್,
ರಾಕ್‌ಲೈನ್ ವೆಂಕಟೇಶ್, ಕ್ರಿಕೆಟಿಗ ಅನಿಲ್ ಕುಂಬ್ಳೆ ಹಾಗೂ ನಟಿಯರಾದ ಸುಮಲತಾ ಅಂಬರೀಶ್, ಶಾನ್ವಿ ಶ್ರೀವಾತ್ಸವ್, ಹರ್ಷಿಕಾ ಪೂಣಾಚ್ಛ, ಆಸಿಕಾ ರಂಗನಾಥ್, ಮುಂತಾದವರು ಅಭಿನಯಿಸಿದ್ದಾರೆ.
ಯುಎನ್ಐ ಪಿಕೆ ಎಎಚ್ 1500