Friday, Aug 7 2020 | Time 17:57 Hrs(IST)
 • ಲಾಕ್ ಡೌನ್ ಬಳಿಕ ಮೊದಲ ಬಾರಿ ಅಭ್ಯಾಸಕ್ಕಿಳಿದ ಸಿಂಧೂ
 • ಗಡಿಭಾಗದ ನೀರಿನ ಸಮಸ್ಯೆ ಪರಿಹರಿಸಲು ಆಂಧ್ರಪ್ರದೇಶದೊಂದಿಗೆ ನೀರು ಹಂಚಿಕೆ: ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್
 • ರಾಜ್ಯದಲ್ಲಿ ವರುಣನ ಆರ್ಭಟ: ಆರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ, ರೆಡ್ ಅಲರ್ಟ್ ಘೋಷಣೆ
 • ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡುವ ವಿಶ್ವಾಸ ಹೊರಹಾಕಿದ ಮಿಶ್ರಾ
 • ಕ್ವಾರಂಟೈನ್‌ ನಿಯಮ ಉಲ್ಲಂಘನೆ; ಪ್ರತಿ ಸಾವಿರ ವ್ಯಕ್ತಿಗೆ ಇಬ್ಬರ ಮೇಲೆ ಎಫ್‌ಐಆರ್‌ ದಾಖಲು
 • ಕಾಂಗ್ರೆಸ್‌-ಚೀನಾ ಸರ್ಕಾರದ ಒಡಂಬಡಿಕೆ ಸುಪ್ರೀಂಕೋರ್ಟ್‌ಗೆ ಕೂಡ ಅಚ್ಚರಿ ತಂದಿದೆ; ನಡ್ಡಾ
 • ಡಾ ಕೆ ಕಸ್ತೂರಿರಂಗನ್ ವಿವಾದಾತೀತರು: ತಪಸ್ಸಿನಂತೆ ನೂತನ ಶಿಕ್ಷಣ ನೀತಿ ರೂಪಿಸಿದ್ದಾರೆ: ಪ್ರಧಾನಿ ನರೇಂದ್ರ ಮೋದಿ
 • ಕೊಂಕಣ ರೈಲ್ವೆಯಿಂದ ರೈಲುಗಳ ಮಾರ್ಗ ಬದಲಾವಣೆ
 • ಕೇರಳದಲ್ಲಿ ಭಾರೀ ಭೂಕುಸಿತ: 10 ಮಂದಿ ಸಾವು, 85 ಮಂದಿ ನಾಪತ್ತೆ
 • ಕೊವಿಡ್‍: ದೇಶದಲ್ಲಿ ಚೇತರಿಕೆ ಪ್ರಮಾಣ ಶೇ 68ಕ್ಕೆ ಏರಿಕೆ: ಸಾವಿನ ಪ್ರಮಾಣ ಶೇ2 05ಕ್ಕೆ ಇಳಿಕೆ
 • ಕೊಡಗು ಜಿಲ್ಲೆಯಲ್ಲಿ ಕೊರೊನಾಗೆ ಮಹಿಳೆ ಬಲಿ: ಸಾವಿನ ಸಂಖ್ಯೆ 11ಕ್ಕೇರಿಕೆ
 • ಗಾಂಜಾ ಮಾರಾಟ ಯತ್ನ: ಒಡಿಶಾ ಮೂಲದ ವ್ಯಕ್ತಿ ಬಂಧನ
 • ಧಾರವಾಡ: ನೀರಿನಲ್ಲಿ ಕೊಚ್ಚಿ ಹೋದ ಬಾಲಕಿಗಾಗಿ ಶೋಧ ಕಾರ್ಯ ಮುಂದುವರಿಕೆ
 • ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್‍ನಿಂದ ಕದನವಿರಾಮ ಉಲ್ಲಂಘನೆ: ಮೂವರು ನಾಗರಿಕರಿಗೆ ಗಾಯ
 • ಶಬನಮ್ ಡೆವಲಪರ್ಸ್ ನ ಶೂಟ್‍ಔಟ್ ಪ್ರಕರಣ; 13 ವರ್ಷ ಬಳಿಕ ಪ್ರಮುಖ ಆರೋಪಿ ಸೆರೆ
National Share

ಕೊರೊನಾ ಬಿಕ್ಕಟ್ಟು : ಪ್ರವಾಸಿಗರಿಗೆ ಜುಲೈ 31 ರವರೆಗೆ ತೆರೆಯದು ಜಲಿಯನ್ ವಾಲಾಭಾಗ್ ಸ್ಮಾರಕ

ನವದೆಹಲಿ, ಜೂನ್ 20 (ಸ್ಫುಟ್ನಿಕ್) ಕೊರೊನಾ ಬಿಕ್ಕಟ್ಟಿನಿಂದಾಗಿ ಸ್ಥಗಿತಗೊಂಡಿದ್ದ ಕಾರ್ಯಚಟುವಟಿಕೆಗಳು ಹಂತಹಂತವಾಗಿ ಆರಂಭವಾಗುತ್ತಿದ್ದರೂ ಸರ್ಕಾರ ಪ್ರವಾಸೋದ್ಯಮಕ್ಕೆ ಅನುಮತಿ ನೀಡದ್ದರೂ ಜಲಿಯನ್ ವಾಲಾಬಾಗ್ ಸ್ಮಾರಕಕ್ಕೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಜುಲೈ 31 ರವರೆಗೆ ಮುಂದುರಿಯಲಿದೆ ಎಂದು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.

ಜಲಿಯನ್ ವಾಲಾಬಾಗ್ ಹತ್ಯಾಕಾಂಡವಾಗಿ ನೂರು ವರ್ಷಗಳಾಗಿದ್ದು ಶತಮಾನೋತ್ಸವ ಆಚರಣೆ ಕಳೆದ ವರ್ಷದ ಏಪ್ರಿಲ್ 13 ರಿಂದ ಈ ವರ್ಷದ ಏಪ್ರಿಲ್ 13 ರ ವರೆಗೆ ನಡೆಯಿತು. ಸದ್ಯ ಸ್ಮಾರಕವನ್ನು ನವೀಕರಿಸಲಾಗುತ್ತಿದ್ದು ಸ್ಥಳದಲ್ಲಿ ಧ್ವನಿ ಮತ್ತು ಬೆಳಕಿನ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

ಈ ವರ್ಷದ ಮಾರ್ಚ್ ವೇಳೆಗೆ ನವೀಕರಣ ಕಾರ್ಯ ಪೂರ್ಣಗೊಳಿಸಿ ಏಪ್ರಿಲ್ 13 ರಂದು ಭವ್ಯ ಸಮಾರಂಭದ ಮೂಲಕ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿತ್ತು. ಹೀಗಾಗಿ ಕಾಮಗಾರಿ ಭರದಿಂದ ಸಾಗಿತ್ತು. ಜನರು ಭೇಟಿ ನೀಡುತ್ತಿದ್ದರೆ ನವೀಕರಣ ಕಾರ್ಯ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲು ಸಾಧ್ಯವಿಲ್ಲವೆಂದು ಈ ವರ್ಷದ ಫೆಬ್ರವರಿ 15 ರಿಂದ ಏಪ್ರಿಲ್ 12 ರವರೆಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ ವಿಧಿಸಲಾಗಿತ್ತು.

ಕೊರೊನಾ ಬಿಕ್ಕಟ್ಟಿನಿಂದಾಗಿ ನವೀಕರಣ ಕಾರ್ಯಕ್ಕೆ ಅಡ್ಡಿಯಾಗಿದ್ದು ಇದೀಗ ಪ್ರವಾಸಿಗರ ಭೇಟಿ ನಿರ್ಬಂಧ ವಿಸ್ತರಿಸಲಾಗಿದೆ.

ಯುಎನ್ಐ ಜಿಎಸ್ಆರ್ 0754