Wednesday, Aug 12 2020 | Time 01:07 Hrs(IST)
  • ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿಯೊಬ್ಬರಿಂದ ಕೋಮು ಪ್ರಚೋದಿತ ಪೋಸ್ಟ್,ಠಾಣೆಗೆ ಹೆಚ್ಚಿ ಬೆಂಕಿ ಹಚ್ಚಿ ಗಲಾಟೆ
business economy Share

ಕೊರೊನಾ ಸಂಕಷ್ಟ; ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ಕಾರ್ಯಕ್ರಮ

ಬೆಂಗಳೂರು, ಮೇ 15 (ಯುಎನ್ಐ) ಹೆಸರಾಂತ ಕಾರು ತಯಾರಕ ಸಂಸ್ಥೆಯ ಎಂಜಿ ಮೋಟಾರ್ ಇಂಡಿಯಾ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡುವ ಉದ್ದೇಶದಿಂದ ‘ಎಂಜಿ ನರ್ಚರ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಸುಮಾರು 200 ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ಒದಗಿಸಲಾಗುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಹಾಗು ನಿದ್ಯಾರ್ಥಿನಿಯರ ಸಂಖ್ಯೆಯು ಸಮಬಲವಾಗಿರುತ್ತದೆ.
ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಆಯ್ಕೆಯನ್ನು ‘ರೋಬೋಟ್ ಆಯ್ಕೆ ಪ್ರಕ್ರಿಯೆ’ ಮೂಲಕ ಮಾಡಲಾಗುವುದು. ಇದಕ್ಕಾಗಿ ಈವ್ಮಿ ಹೆಸಿರಿನ ನವೋದ್ಯಮದ ಸಹಕಾರ ಇದೆ. ಆಯ್ಕೆ ಪ್ರಕ್ರಿಯೆಯಲ್ಲಿ ಕಾಲೇಜ್ ದೇಕೋ ಕೂಡ ಸಹಾಯ ಒದಗಿಸಲಿದೆ. ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ಸಹ ಈ ಕಾರ್ಯಕ್ರಮ ಒಳಗೊಂಡಿದೆ.
“ಎಂಜಿ ನರ್ಚರ್ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ತಲುಪಲು ಮತ್ತು ಮಾರುಕಟ್ಟೆಗೆ ಭವಿಷ್ಯದಲ್ಲಿ ಸಿದ್ಧರಾಗಿರಲು ಅವರನ್ನು ಸಶಕ್ತಗೊಳಿಸಲು ಅನುವು ಮಾಡಿಕೊಡುತ್ತದೆ. ಈ ಕಾರ್ಯಕ್ರಮವು ಜೂನ್‌ನಿಂದ ಎಂಟು ವಾರಗಳವರೆಗೆ ಪ್ರಾರಂಭವಾಗಲಿದೆ. ವಿದ್ಯಾರ್ಥಿಗಳಿಗೆ ಕಲಿಕೆಯ ಅನುಭವವನ್ನು ನೀಡಲು ಮತ್ತು ನಮ್ಮ ದೇಶದಲ್ಲಿ ಪ್ರತಿಭಾ ಸಮೂಹ ರಚಿಸಲು ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ” ಎಂದು ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾಬಾ ಹೇಳಿದರು.
ಬ್ರಿಟನ್ ಮತ್ತು ಭಾರತದ ನಡುವಿನ ದ್ವಿಮುಖ ಅಡ್ಡ-ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ಸಹ ಎಂಜಿ ಮೋಟಾರ್ ಪ್ರಾರಂಭಿಸಿದೆ. ಕಂಪನಿಯು ಇತ್ತೀಚೆಗೆ ‘ಡ್ರೈವ್ ಹರ್ ಬ್ಯಾಕ್ ಎಂಬ ಅನನ್ಯ ಕಾರ್ಯಕ್ರಮವನ್ನು ಘೋಷಿಸಿತು. ಅನುಭವಿ ಮತ್ತು ಅರ್ಹ ಮಹಿಳೆಯರಿಗೆ ಘನತೆ ಮತ್ತು ಹೆಮ್ಮೆಯಿಂದ ಕೆಲಸದ ಸ್ಥಳಕ್ಕೆ ಮರಳಲು ಅನುವು ಮಾಡುವ ಕಾರ್ಯಕ್ರಮ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
ಯುಎನ್ಐ ಎಎಚ್ 1507
More News
ಸೆನ್ಸೆಕ್ಸ್ 141 51 ಅಂಕ ಏರಿಕೆ

ಸೆನ್ಸೆಕ್ಸ್ 141 51 ಅಂಕ ಏರಿಕೆ

10 Aug 2020 | 6:22 PM

ಮುಂಬೈ ಆ 10(ಯುಎನ್ಐ) ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 141.51 ಅಂಕ ಏರಿಕೆ ಕಂಡು 38,182.08ಕ್ಕೆ ತಲುಪಿದೆ.

 Sharesee more..
ಶೀಘ್ರದಲ್ಲೇ ರೈಲ್ವೆ ಖರೀದಿ ಪ್ರಕ್ರಿಯೆಗಳು ಜಿಇಎಂ ನೊಂದಿಗೆ ಸಂಯೋಜನೆ- ಪಿಯೂಷ್‍ ಗೋಯಲ್‌

ಶೀಘ್ರದಲ್ಲೇ ರೈಲ್ವೆ ಖರೀದಿ ಪ್ರಕ್ರಿಯೆಗಳು ಜಿಇಎಂ ನೊಂದಿಗೆ ಸಂಯೋಜನೆ- ಪಿಯೂಷ್‍ ಗೋಯಲ್‌

09 Aug 2020 | 6:19 PM

ನವದೆಹಲಿ, ಆ 9 (ಯುಎನ್‌ಐ) ರೈಲ್ವೆ ಖರೀದಿ ಪ್ರಕ್ರಿಯೆಯನ್ನು ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (ಜಿಇಎಂ)ನೊಂದಿಗೆ ಸಂಯೋಜಿಲು ಎರಡೂ ಇಲಾಖೆಗಳು ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿವೆ ಎಂದು ರೈಲ್ವೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭಾನುವಾರ ತಿಳಿಸಿದ್ದಾರೆ.

 Sharesee more..