Friday, Dec 13 2019 | Time 11:29 Hrs(IST)
  • ಡಾರ್ಕ್ ವೆಬ್‌ಸೈಟ್ ಮೂಲಕ ನೆದರ್ಲಾಂಡ್‌ನಿಂದ ಮಾದಕ ವಸ್ತು ತರಿಸುತ್ತಿದ್ದ ಮೂವರ ಬಂಧನ: 20 ಲಕ್ಷ ರೂ ಮೌಲ್ಯದ ಗಾಂಜಾ ವಶ
  • 2023ರ ಫಿಫಾ ಮಹಿಳಾ ವಿಶ್ವಕಪ್‌ಗೆ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಜಂಟಿ ಬಿಡ್‌ ಸಲ್ಲಿಕೆ
  • ಭಾರತ, ಚೀನಾ, ಇರಾನ್ ಹಾಗೂ ಇಥಿಯೋಪಿಯಾ ದೇಶಗಳಲ್ಲಿ ಅಂತರ್ಜಾಲ ಸ್ಥಗಿತ ಪ್ರವೃತ್ತಿ ಹೆಚ್ಚು; ಸಮೀಕ್ಷೆ
  • ಡಯಾಲಿಸಿಸ್ ಉತ್ಪನ್ನ ಪೂರೈಕೆ: ಮೆಡಿಕಾಬಜಾರ್ - ಪ್ರೋ ಮೆಡಿಕಲ್ ಇಂಡಿಯಾ ಒಪ್ಪಂದ
  • ಪೌರತ್ವ ಮಸೂದೆ, ಕೇಂದ್ರದ ವಿರುದ್ಧ ಕೇರಳ, ಪಂಜಾಬ್ ಬಹಿರಂಗ ಸೆಡ್ಡು
  • ಪ್ರಧಾನಿ ಜಾನ್ಸನ್‌ಗೆ 'ದೊಡ್ಡ ಜಯ': ಟ್ರಂಪ್
  • ಚುನಾವಣಾ ಕಣದಲ್ಲಿ ಕ್ರಿಮಿನಲ್ ಗಳು , ಕೋಟ್ಯಾಧಿಪತಿಗಳು
  • ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ 19ರಂದು ದೇಶಾದ್ಯಂತ ಪ್ರತಿಭಟನೆಗೆ ಎಡ ಪಕ್ಷಗಳ ಕರೆ
  • ಫಿಲಿಪೈನ್ಸ್‌ನಲ್ಲಿ ರಸ್ತೆ ಅಪಘಾತ: ಕನಿಷ್ಠ 6 ಸಾವು
  • ಕನ್ಸರ್ವೇಟಿವ್ ಪಕ್ಷಕ್ಕೆ ವಿಜಯ : ಎಕ್ಸಿಟ್ ಪೋಲ್ ಸಮೀಕ್ಷೆ
Karnataka Share

ಕುರುಬ ಸಮುದಾಯದ ಕ್ಷಮೆಯಾಚಿಸದ ಮಾಧುಸ್ವಾಮಿ; ಮಾಧ್ಯಮದವರ ಮೇಲೆ ಈಶ್ವರಪ್ಪ ಕಿಡಿ!

ಬೆಂಗಳೂರು,ನ 20(ಯುಎನ್ಐ) ಹುಳಿಯಾರ್ ಕುರುಬ ಸಮುದಾಯದ ಶಾಖಾ ಮಠದ ಸ್ವಾಮೀಜಿ ವಿಚಾರದಲ್ಲಿ ಕೊನೆಗೂ ಸಚಿವ ಜೆ.ಸಿ‌.ಮಾಧುಸ್ವಾಮಿ ಕುರುಬ ಸಮುದಾಯದ ಕ್ಷಮೆಯಾಚಿಸಿಲ್ಲ. ಈ ಬೆಳವಣಿಗೆಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಮಾಧ್ಯಮಗಳ ಮೇಲೆ ಹರಿಹಾಯ್ದು ತಮ್ಮ ಕೋಪ ತೀರಿಸಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಾಧುಸ್ವಾಮಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಘಟನೆ ಬಗ್ಗೆ ಕ್ಷಮೆ ಯಾಚಿಸುವ ಪರಿಸ್ಥಿತಿ ನಿರ್ಮಾಣ ಆಗಿದ್ದರೆ, ನಾನು ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಹುಳಿಯಾರ್ ಕುರುಬ ಸಮುದಾಯದ ಶಾಖಾ ಮಠದ ಸ್ವಾಮೀಜಿ ವಿಚಾರದಲ್ಲಿ ಸಚಿವ ಮಾಧುಸ್ವಾಮಿ ಒರಟಾಗಿ ವರ್ತಿಸಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಇಂದು ಕುರುಬ ಸಮುದಾಯದ ಕ್ಷಮೆ‌ಯಾಚಿಸಿದ್ದರು. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ ಮುಖ್ಯಮಂತ್ರಿಗಳಿಗೆ ಕ್ಷಮೆ ಕೇಳುವಷ್ಟು ನೋವಾಗಿದ್ದರೆ ವಿಷಾದಿಸುತ್ತೇನೆ ಎಂದಷ್ಟೇ ತಿಳಿಸಿದರು. ಆದರೆ ಅಸಂಖ್ಯಾತ ಕುರುಬ ಸಮದಾಯದ ಕ್ಷಮೆ ಕೋರಲು ಅವರು ಸ್ಪಷ್ಟವಾಗಿ ನಿರಾಕರಿಸಿದರು.
ಸಚಿವ ಮಾಧುಸ್ವಾಮಿ ಅವರನ್ನು ಸಮರ್ಥನೆ ಮಾಡಿಕೊಳ್ಳಲು ಹೋಗಿ ಮಾಧ್ಯಮಗಳನ್ನೇ ಸಚಿವ ಕೆ.ಎಸ್.ಈಶ್ವರಪ್ಪ ವ್ಯಭಿಚಾರಕ್ಕೆ ಹೋಲಿಸಿದರು.
ಮಾಧ್ಯಮಗಳೇ ಈ ವಿಚಾರವಾಗಿ ರಾಜಕಾರಣ ಮಾಡುತ್ತಿವೆ. ಮಾಧುಸ್ವಾಮಿ ತುಂಬಾ ಸ್ಪಷ್ಟವಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ನೀವು ಮಾಡಿದ ವ್ಯಭಿಚಾರಕ್ಕೆ ಇಷ್ಟೆಲ್ಲ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆವರೆಗೆ ಮಾತ್ರ ನೀವು ಈ ಪ್ರಕರಣವನ್ನು ಬೆಳೆಸುತ್ತೀರಿ. ಅಲ್ಲಿಯವರೆಗೆ ನಿಮಗೆ ಹೇಗೆ ಬೇಕೋ ಹಾಗೆ ನೀವು ಮುಂದುವರಿಸಿ ಎಂದು‌ ಮಾಧ್ಯಮಗಳ ಮೇಲೆಯೇ ಈಶ್ವರಪ್ಪ ಗೂಬೆ ಕೂರಿಸಿದರು.
ಯುಎನ್ಐ ಎಸ್ಎಂಆರ್ ವಿಎನ್ 1555
More News
ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಚೇತರಿಕೆ : ಮುಖ್ಯಮಂತ್ರಿ,ಸಚಿವರು ಹಾಗೂ ಕೈ ನಾಯಕರಿಂದ ಆರೋಗ್ಯ ವಿಚಾರಣೆ

ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಚೇತರಿಕೆ : ಮುಖ್ಯಮಂತ್ರಿ,ಸಚಿವರು ಹಾಗೂ ಕೈ ನಾಯಕರಿಂದ ಆರೋಗ್ಯ ವಿಚಾರಣೆ

12 Dec 2019 | 10:14 PM

ಬೆಂಗಳೂರು,ಡಿ 12(ಯುಎನ್ಐ) ಆಂಜಿಯೋಪ್ಲಾಸ್ಟ್ ಚಿಕಿತ್ಸೆ ಪಡೆದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಇಂದು ಅವರ ಆರೋಗ್ಯ ವಿಚಾರಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ,ಕೆ.ಎಸ್.ಈಶ್ವರಪ್ಪ ಸೇರಿದಂತೆ ಕಾಂಗ್ರೆಸ್ ನಾಯಕರು ಖಾಸಗಿ ಆಸ್ಪತ್ರೆಗೆ ಬೇಟಿ ನೀಡಿ ಬೇಗ ಗುಣಮುಖರಾಗ ವಂತೆ ಹಾರೈಸಿದರು.

 Sharesee more..