Monday, Jun 1 2020 | Time 02:57 Hrs(IST)
Karnataka Share

ಕಾರ್ಮಿಕರ ಕೆಲಸದ ಅವಧಿ ಹೆಚ್ಚಳ ಆದೇಶಕ್ಕೆ ಆಗಸ್ಟ್ 21ರ ವರೆಗೆ ವಿನಾಯಿತಿ ನೀಡಿ ಆದೇಶ

ಬೆಂಗಳೂರು, ಮೇ 23 [ಯುಎನ್ಐ] ಕಾರ್ಮಿಕರು ಮತ್ತು ಕಾರ್ಮಿಕರ ಸಂಘಟನೆಗಳ ತೀವ್ರ ವಿರೊಧದ ನಡುವೆ ಕೈಗಾರಿಕೆಗಳಲ್ಲಿನ ಕಾರ್ಮಿಕರ ಸಾಪ್ತಾಹಿಕ ಹಾಗೂ ದಿನವಹಿ ಕಾರ್ಯಾವಧಿ ನಿಯಮ ಪಾಲನೆಗೆ ಆಗಸ್ಟ್ ೨೧ರವರೆಗೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೈಗಾರಿಕಾ ಕಾಯ್ದೆಯಡಿ ನೋಂದಣಿಯಾಗಿರುವ ಕೈಗಾರಿಕೆಗಳಿಗೆ ಇದು ಅನ್ವಯವಾಗಲಿದೆ. ಮಾರ್ಚ್ ೨೫ ರಿಂದ ಲಾಕ್‌ಡೌನ್ ಜಾರಿಯಲ್ಲಿರುವ ಅವಧಿಯಲ್ಲಿ ಕೈಗಾರಿಕೆಗಳ ಉತ್ಪಾದನೆ ಕುಂಠಿತಗೊಂಡಿದ್ದು, ಈ ನಷ್ಟವನ್ನು ಸರಿದೂಗಿಸಲು ಅವಕಾಶವಾಗುವಂತೆ ಕೆಲಸದ ವೇಳೆ ನಿಯಮದಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುಎನ್ಐ ವಿಎನ್ 1938