Wednesday, Jan 29 2020 | Time 01:27 Hrs(IST)
  • ಬತ್ತ, ತೊಗರಿಗೆ ಬೆಂಬಲ ಬೆಲೆ ಸಹಿತ ಪ್ರೋತ್ಸಾಹ ಧನ ಘೋಷಣೆ
  • ನಾನು ಸನ್ಯಾಸಿ ಅಲ್ಲ, ನನಗೂ ಸಹಜವಾಗಿ ರಾಜಕೀಯ ಅಪೇಕ್ಷೆಗಳಿವೆ: ಡಿಸಿಎಂ ಲಕ್ಷ್ಮಣ್ ಸವದಿ
Special Share

ಕ್ರಿಮಿನಲ್‌ಗಳ ವಿರುದ್ಧ ಹೈದರಾಬಾದ್ ಪೊಲೀಸರ ಕಾರ್ಯಚರಣೆ ವಿಭಿನ್ನ: ರಾಬ್ರಿದೇವಿ

ಪಾಟ್ನಾ, ಡಿ ೦೬ (ಯುಎನ್‌ಐ) ಪಶುವೈದ್ಯೆಯ ಮೇಲಿನ ಅತ್ಯಾಚಾರ, ಹತ್ಯೆಯ ಆರೋಪಿಗಳ ಎನ್‌ಕೌಂಟರ್ ಕ್ರಮವನ್ನು ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿದೇವಿ ಸ್ವಾಗತಿಸಿದ್ದು, ಕ್ರಿಮಿನಲ್‌ಗಳ ವಿರುದ್ಧ ಹೈದರಾಬಾದ್ ಪೊಲೀಸರ ಕಾರ್ಯಾಚರಣೆ ವಿಭಿನ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎನ್‌ಕೌಂಟರ್ ಕುರಿತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡ ರಾಬ್ರಿ ದೇವಿ, ತಾನು ರಾಜಕೀಯ ನಾಯಕಿಗಿಂತ ಮೊದಲು “ತಾಯಿ” ಎಂದು ಹೇಳಿದರು.
ಎನ್ಕೌಂಟರ್ ಅನ್ನು ಸ್ವಾಗತಿಸಿದ ಅವರು, ಬಿಹಾರದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ. ಇಲ್ಲಿನ ರಾಜ್ಯ ಸರ್ಕಾರವು ಕಾನೂನು ಬಿಗಿಗೊಳಿಸಿಲ್ಲ ಎಂದರು.
ಅತ್ಯಾಚಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಬಿಹಾರ ಸರ್ಕಾರ ವಿಫಲವಾಗಿದೆ ಎಂದು ರಾಬ್ರಿದೇವಿ ಆರೋಪಿಸಿದರು.
ಯುಎನ್‌ಐ ಎಸ್‌ಎ ವಿಎನ ೧೯೫೨