Wednesday, Feb 19 2020 | Time 12:54 Hrs(IST)
 • ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟಿದ್ದ ಬೈಕ್ ಕಳ್ಳನ ಬಂಧನ
 • ಮಲೆಮಹಾದೇಶ್ವರ ಬೆಟ್ಟದ ಸೋಲಾರ್ ಸಮಸ್ಯೆ: ಅಧಿಕಾರಿಗಳ ತಂಡ‌ ರವಾನೆಗೆ ಕೋಟಾ ಶ್ರೀನಿವಾಸ ಪೂಜಾರಿ ಸೂಚನೆ
 • ಚಿತ್ರರಂಗಕ್ಕೆ ಬಂದು 34 ವರ್ಷ: ಶಿವಣ್ಣ ಟ್ವೀಟ್
 • ಚಿನ್ನಾಭರಣ ಸಮೇತ ಓಮ್ನಿ ಕಳವು: ಸಿಸಿಟಿವಿಯಲ್ಲಿ ಸೆರೆ
 • ವಿಚ್ಛೇದನ ಪ್ರಕರಣಗಳಲ್ಲಿ ತೀವ್ರ ಸಂಕಷ್ಟ ಅನುಭವಿಸುವರು ಮಕ್ಕಳು ಮಾತ್ರ ಸುಪ್ರೀಂ ಕೋರ್ಟ್
 • ಅಶೋಕ್ ಪುತ್ರ ಅಪಘಾತ ನ್ಯಾಯಾಂಗ ತನಿಖೆ ಆಗಲಿ; ಪರಿಷತ್‌ನಲ್ಲಿ ಜಯಮಾಲಾ ಒತ್ತಾಯ
 • ಹರಿದ್ವಾರದ ಬ್ರಹ್ಮಕುಂಡದಿಂದ ಹರಿದುಬಂತು 40 ಸಾವಿರ ಲೀಟರ್ ಗಂಗಾಜಲ: ಶಿವರಾತ್ರಿ ಹಬ್ಬದಂದು ಕೃಷ್ಣಯ್ಯ ಶೆಟ್ಟಿ ಸಾರಥ್ಯದಲ್ಲಿ ಗಂಗಾಜಲ ವಿತರಣೆಗೆ ವ್ಯಾಪಕ ಸಿದ್ಥತೆ
 • ಟ್ರಂಪ್ ಬೇಟಿ ಹಿನ್ನಲೆ: ಯುಮುನಾ ನದಿಗೆ ನೀರು ಬಿಡುಗಡೆ
 • ಆಸ್ಟ್ರೇಲಿಯಾದಲ್ಲಿ ವಿಮಾನಗಳ ಡಿಕ್ಕಿ: ನಾಲ್ವರು ಸಾವು
 • ಆಸ್ಟ್ರೇಲಿಯಾ ಎ ತಂಡದಿಂದ ಮಾರ್ಕಸ್ ಸ್ಟೋಯಿನಿಸ್ ಔಟ್
 • ಯ ಟಿ ಖಾದರ್ ಮೇಲೆ ದೇಶದ್ರೋಹ ಪ್ರಕರಣ: ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ
 • ಜಸ್ಪ್ರಿತ್ ಬುಮ್ರಾ ನ್ಯೂಜಿಲೆಂಡ್ ಗೆ ಆಘಾತ ನೀಡಬಲ್ಲರು: ರಾಸ್ ಟೇಲರ್
 • ದೆಹಲಿಯಲ್ಲಿ ಹೆಚ್ಚುತ್ತಿರುವ ಹನುಮಂತನ ಆರಾಧನೆ ; ಆಪ್ ಶಾಸಕರ ನೇತೃತ್ವದಲ್ಲಿ ಸುಂದರಕಾಂಡ ಪಾರಾಯಣ ಕೈಂಕರ್ಯ !!
 • ಕೊರೊನವೈರಸ್ ಪೀಡಿತ ಕ್ರೂಸ್ ಹಡಗಿನಿಂದ ಪ್ರಯಾಣಿಕರು ಇಂದು ಹೊರಕ್ಕೆ
 • ಸಚಿವರ ಗೈರು ಹಾಜರಿ: ಸಿದ್ದರಾಮಯ್ಯ ಆಕ್ಷೇಪ
Karnataka Share

ಕೆಲಸ ಸರಿಯಾಗಿ ನಿರ್ವಹಿಸಲಾಗದಿದ್ದರೆ, ಬೇರೆಡೆಗೆ ವರ್ಗ ಮಾಡಿಸಿಕೊಳ್ಳಿ ; ಇಂಜಿನಿಯರ್ ಗಳಿಗೆ ಮೇಯರ್ ತರಾಟೆ

ಬೆಂಗಳೂರು, ಆ 21 (ಯುಎನ್ಐ) ರಸ್ತೆ ಗುಂಡಿ ಸಮಸ್ಯೆ ಸರಿಯಾಗಿ ನಿರ್ವಹಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ನಿಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸಲಾಗದಿದ್ದರೆ, ಕಷ್ಟವೆನಿಸಿದರೆ ವರ್ಗಾವಣೆ ಮಾಡಿಕೊಂಡು ಬೇರೆ ಕಡೆ ಹೋಗಿಬಿಡಿ ಎಂದು ತರಾಟೆಗೆ ತೆಗೆದುಕೊಂಡರು.

ಪೂರ್ವ ವಲಯದ ಜಂಟಿ ಆಯುಕ್ತರ ಕಚೇರಿಯಲ್ಲಿ ರಸ್ತೆ ಗುಂಡಿಗಳು, ಮಣ್ಣು ರಾಶಿ(ಡೆಬ್ರಿಸ್), ಪಾದಚಾರಿ ಮಾರ್ಗ ಒತ್ತುವರಿ ವಿಚಾರಣೆಗೆ ಸಂಬಂಧಿಸಿದಂತೆ ಸಭೆ ನಡೆಸಿದ ಅವರು, ಪ್ರತಿಯೊಬ್ಬ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳು ಒಂದೊಂದು ವಾರ್ಡ್ ಗಳನ್ನು ಪ್ರತಿನಿಧಿಸುತ್ತೀರಾ. ಅಲ್ಲಿ ಯಾವ ಸಮಸ್ಯೆಗಳಿಗೆ ಎಂಬುದು ನಿಮಗೆ ತಿಳಿದಿರುತ್ತದೆ. ಅದನ್ನು ಪಟ್ಟಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಮಾಹಿತಿ ನೀಡಿ ತ್ವರಿತಗತಿಯಲ್ಲಿ ಇರುವ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬೇಕು. ಯಾವುದೇ ಸಬೂಬು ನೀಡದೆ ತಮ್ಮ ಜವಾಬ್ದಾರಿಯನ್ನು ಶಿಸ್ತಿನಿಂದ ನಿರ್ವಹಿಸಬೇಕು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಬೇಜವಾಬ್ದಾರಿತನದಿಂದ ಕೆಲಸ ಮಾಡಬೇಡಿ. ಪಾಲಿಕೆಗೆ ಒಳ್ಳೆಯ ಹೆಸರು ತರಲು ಎಲ್ಲರೂ ಶ್ರಮವಹಿಸಿ ಕೆಲಸಮಾಡಿ. ಇಲ್ಲವಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು‌ ಎಚ್ಚರಿಕೆ ನೀಡಿದರು.

ಉಪಮಹಾಪೌರ ಭದ್ರೇಗೌಡ ಮಾತನಾಡಿ, ರಸ್ತೆಗಳಲ್ಲಿ ಕಾಮಗಾರಿ ನಡೆಯುವ ವೇಳೆ ಬ್ಯಾರಿಕೇಡ್ ಗಳನ್ನು ಅಳವಡಿಸದೇ ಇದ್ದರೆ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ಕಡ್ಡಾಯವಾಗಿ ಬ್ಯಾರಿಕೇಡ್ ಗಳನ್ನು ಅಳವಡಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು. ಗುತ್ತಿಗೆದಾರರು ಬ್ಯಾರಿಕೇಡ್ ಅಳವಡಿಸದೆ ಕಾಮಗಾರಿ ನಡೆಸುತ್ತಿದ್ದರೆ ಅವರಿಗೆ ತಕ್ಷಣ ಬ್ಯಾರಿಕೇಡ್ ಅಳವಡಿಸುವಂತೆ ಸೂಚಿಸಿದರು.

ಮುಖ್ಯರಸ್ತೆಗಳಲ್ಲಿ‌ ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನಿಂತಿರುವ ನೀರು‌ ಸರಾಗವಾಗಿ ಅರಿಯಲು ಬೇಕಾದ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಪಾದಚಾರಿ ಮಾರ್ಗದ ಮೇಲೆ ಅಳವಡಿಸಿರುವ ಸ್ಲ್ಯಾಬ್ ಆಳಾಗಿದ್ದರೆ ಅದನ್ನು ಕೂಡಲೆ ಸರಿಪಡಿಸಬೇಕು ಎಂದು ನಿರ್ದೇಶಿಸಿದರು.

ಪಾಲಿಕೆ ಪ್ರಧಾನ ಅಭಿಯಂತರರಾದ ಎಂ.ಆರ್.ವೆಂಕಟೇಶ್ ಮಾತನಾಡಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳು ವಾರ್ಡ್ ಗಳಲ್ಲಿ ತೆಗೆದುಕೊಂಡಿರುವ ಕ್ರಮಗಳ ಕುರಿತು ಪ್ರತಿ ತಿಂಗಳು ಹೈಕೊರ್ಟ್ ಗೆ ವರದಿ ಸಲ್ಲಿಸಬೇಕು. ಆದ್ದರಿಂದ ಎಲ್ಲರೂ ತಮ್ಮ ಕೆಲಸವನ್ನು ಚಾಚು ತಪ್ಪದೆ ನಿರ್ವಹಿಸಲೇಬೇಕು ಎಂದು ತಿಳಿಸಿದರು‌.

ಸಭೆಯಲ್ಲಿ ಆಡಳಿತ ಮತ್ತು ಜೆಡಿಎಸ್ ಪಕ್ಷದ ನಾಯಕರು, ಪಾಲಿಕೆ ಪ್ರಧಾನ ಅಭಿಯಂತರರು, ಪೂರ್ವ ವಲಯ ರಸ್ತೆ ವಿಭಾಗದ ಮುಖ್ಯ ಇಂಜಿನಿಯರ್ ಪ್ರಸಾದ್ , ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಸಹಾಯಕ ಇಂಜಿನಿಯರ್ ಗಳು ಉಪಸ್ಥಿತರಿದ್ದರು.

ಯುಎನ್ಐ ಎಸ್ಎಚ್ ಎಸ್ಎ 2022
More News