Wednesday, Sep 23 2020 | Time 02:17 Hrs(IST)
National Share

ಕೊವಿಡ್‍:ದೆಹಲಿಯಲ್ಲಿ ಸತತ 2ನೇ ದಿನ 1,000ಕ್ಕೂ ಕಡಿಮೆ ಪ್ರಕರಣಗಳು ವರದಿ, ಚೇತರಿಕೆ ಪ್ರಮಾಣ ಶೇ89.72ಕ್ಕೆ ಏರಿಕೆ

ನವದೆಹಲಿ, ಆ 3 (ಯುಎನ್‌ಐ) ರಾಷ್ಟ್ರೀಯ ರಾಜಧಾನಿಯಲ್ಲಿ ಸೋಮವಾರ ಸತತ ಎರಡನೇ ದಿನವೂ ಕೊರೊನಾವೈರಸ್‌ನ 1000 ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿದ್ದು, ಚೇತರಿಕೆ ಪ್ರಮಾಣ ಶೇ 89.72 ಕ್ಕೆ ಏರಿದೆ.
ಕಳೆದ 24 ಗಂಟೆಗಳಲ್ಲಿ 805 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಈ ಅವಧಿಯಲ್ಲಿ 937 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ದೆಹಲಿಯ ಒಟ್ಟಾರೆ ಪ್ರಕರಣಗಳ ಸಂಖ್ಯೆ ಇಲ್ಲಿಯವರೆಗೆ 1,38,482 ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಮಾಹಿತಿ ಸಂಚಿಕೆ ಸೋಮವಾರ ಇಲ್ಲಿ ತಿಳಿಸಿದೆ. ನಗರದಲ್ಲಿ ಗುಣಮುಖರಾದ ರೋಗಿಗಳ ಸಂಖ್ಯೆ 1,24,254 ಕ್ಕೆ ಏರಿದೆ.
ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿದ್ದು, ಸದ್ಯ ಈ ಸಂಖ್ಯೆ 10,207 ರಷ್ಟಿದೆ. ಗೃಹ ಸಂಪರ್ಕದಲ್ಲಿರುವ ರೋಗಿಗಳ ಸಂಖ್ಯೆ 5577ರಷ್ಟಿದೆ.
ಭಾನುವಾರದಿಂದ 17 ಜನರು ವೈರಸ್‌ಗೆ ತುತ್ತಾದ ನಂತರ ರಾಷ್ಟ್ರ ರಾಜಧಾನಿಯಾದ್ಯಂತ ಸಾವಿನ ಸಂಖ್ಯೆ 4021 ಕ್ಕೆ ಏರಿದೆ.
ರಾಷ್ಟ್ರ ರಾಜಧಾನಿಯಲ್ಲಿ ಈವರೆಗೆ ಒಟ್ಟು 10,73,802 ಪರೀಕ್ಷೆಗಳನ್ನು ನಡೆಸಲಾಗಿದೆ.
ನಗರದಾದ್ಯಂತ ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ 496 ಕ್ಕೆ ಇಳಿದಿದೆ ಎಂದು ಮಾಹಿತಿ ಸಂಚಿಕೆ ತಿಳಿಸಿದೆ.
ಯುಎನ್‍ಐ ಎಸ್ಎಲ್ಎಸ್ 2219
More News
ಸಂಸತ್ತಿನಲ್ಲಿ ವಿಪಕ್ಷ ಸದಸ್ಯರ ದಾಳಿಗೆ ಖಂಡನೆ: ಒಂದು ದಿನದ ನಿರಶನ ಘೋಷಿಸಿದ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್

ಸಂಸತ್ತಿನಲ್ಲಿ ವಿಪಕ್ಷ ಸದಸ್ಯರ ದಾಳಿಗೆ ಖಂಡನೆ: ಒಂದು ದಿನದ ನಿರಶನ ಘೋಷಿಸಿದ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್

22 Sep 2020 | 3:37 PM

ನವದೆಹಲಿ, ಸೆ 22 (ಯುಎನ್‍ಐ) ಸಂಸತ್ತಿನಲ್ಲಿ ವಿಪಕ್ಷ ಸದಸ್ಯರು ನಡೆಸಿದ ದಾಳಿಗೆ ಬೇಸರ ವ್ಯಕ್ತಪಡಿಸಲು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಒಂದು ದಿನದ ನಿರಶನ ಘೋಷಿಸಿದ್ದಾರೆ.

 Sharesee more..