Monday, Jun 1 2020 | Time 01:31 Hrs(IST)
business economy Share

ಕೊವಿಡ್‍-19 ಆರ್ಥಿಕ ಬಿಕ್ಕಟ್ಟು ನಿರ್ವಹಣೆಗೆ ಆರ್‌ಬಿಐ ನೀತಿ ಪ್ರಕಟಣೆ ಸಮಯೋಚಿತ-: ಎಸ್‌ಬಿಐ ಅಧ್ಯಕ್ಷ ರಜನೀಶ್‍ ಕುಮಾರ್‍

ಕೋಲ್ಕತಾ, ಮೇ 22 (ಯುಎನ್‌ಐ) ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ನಿರ್ವಹಣೆಗೆ ರಿಸರ್ವ್‍ ಬ್ಯಾಂಕ್‍ ಪ್ರಕಟಿಸಿರುವ ನೀತಿ ಸಮಯೋಚಿತವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ರಜನೀಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ.

2021ನೇ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ನಕಾರಾತ್ಮಕವಾಗಿರಲಿದೆ ಎಂಬ ಊಹೆಯ ನಡುವೆ ರಿಸರ್ವ್‍ ಬ್ಯಾಂಕ್‍, ರೆಪೊ ದರ( ರಿಸರ್ವ್‍ ಬ್ಯಾಂಕ್‍ ಬ್ಯಾಂಕ್‍ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ)ವನ್ನು 40 ಮೂಲಾಂಕಗಳಷ್ಟು ಕಡಿತಗೊಳಿಸಿರುವ ನಿರ್ಧಾರವು ಆರ್ಥಿಕ ಚಟುವಟಿಕೆಗಳ ಪ್ರೋತ್ಸಾಹಕ್ಕೆ ಸೂಕ್ತ ಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ

ಸಾಂಕ್ರಾಮಿಕ ರೋಗದಿಂದ ಎದುರಾಗಿರುವ ಅನಿಶ್ಚಿತತೆ, ಆರ್ಥಿಕ ಚಟುವಟಿಕೆಗಳು ಸಾಮಾನ್ಯಸ್ಥಿತಿಗೆ ಮತ್ತು ಸಾಮಾಜಿಕ ಅಂತರ ಕಾಪಾಡುವಲ್ಲಿ ವಿನಾಯಿತಿಗಳ ನಡುವೆ ರಿಸರ್ವ್‍ ಬ್ಯಾಂಕ್‍ನ ಕ್ರಮವು ಉತ್ತೇಜನಕಾರಿಯಾಗಿದೆ ಎಂದು ರಜನೀಶ್‍ ಕುಮಾರ್ ಹೇಳಿದ್ದಾರೆ.

ಈ ಸನ್ನಿವೇಶದಲ್ಲಿ ಸಾಲಗಳ ಮರುಪಾವತಿಗೆ ಆಗಸ್ಟ್‍ 31ರವರೆಗೆ ಅವಕಾಶ ನೀಡಿರುವುದು, ಸಾಲ ಮರುಪಾತಿಯ ಕಾರ್ಯಚೌಕಟ್ಟು ವಿಸ್ತಾರಗೊಳಿಸಿರುವುದು ಸ್ವಾಗತಾರ್ಹ ಕ್ರಮಗಳಾಗಿವೆ ಎಂದು ಅವರು ಹೇಳಿದ್ದಾರೆ.

ಯುಎನ್‍ಐ ಎಸ್ಎಲ್ಎಸ್ 2048

More News
ರಿಲಯನ್ಸ್‌ನಿಂದ ಭಾರತದಲ್ಲಿಯೇ ಪಿಪಿಇ ತಯಾರಿಕೆ: ಬೆಲೆಯಲ್ಲಿ ಭಾರಿ ಕಡಿತ

ರಿಲಯನ್ಸ್‌ನಿಂದ ಭಾರತದಲ್ಲಿಯೇ ಪಿಪಿಇ ತಯಾರಿಕೆ: ಬೆಲೆಯಲ್ಲಿ ಭಾರಿ ಕಡಿತ

31 May 2020 | 5:40 PM

ನವದೆಹಲಿ, ಮೇ 31 (ಯುಎನ್ಐ) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ ಐಎಲ್) ಭಾರತದ ಹೂಮ್ಯಾನಿಟೇರಿಯನ್ (ಮಾನವೀಯ) ರಪ್ತುನ ಮುಂಚೂಣಿಯನ್ನು ವಹಿಸಿಕೊಳ್ಳಲಿದ್ದು, ಇದಕ್ಕಾಗಿ ಹೊಸದಾಗಿ ಸ್ವಾಧೀನಪಡಿಸಿಕೊಂಡಿರುವ ಅಲೋಕ್ ಇಂಡಸ್ಟ್ರೀಸ್ ಅನ್ನು "ಸಂಪೂರ್ಣವಾಗಿ" ಪಿಪಿಇ ಉತ್ಪಾದನೆಗೆ ಮೀಸಲು ಇಡಲಿದೆ.

 Sharesee more..