Tuesday, Aug 4 2020 | Time 00:00 Hrs(IST)
Sports Share

ಕೋವಿಡ್-19 ಉಲ್ಬಣ, ಇಂಡಿಯನ್ ಗಾಲ್ಫ್ ರದ್ದು

ನವದೆಹಲಿ, ಜುಲೈ 3 (ಯುಎನ್ಐ)
ಮಾರಣಾಂತಿಕ ಕೋವಿಡ್-19 ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದ ಆತಿಥೇಯಲ್ಲಿ ಆಯೋಜಿಸಲಾಗಿದ್ದ ಅತಿದೊಡ್ಡ ಗಾಲ್ಫ್ ಟೂರ್ನಿ ಇಂಡಿಯನ್ ಓಪನ್ ಶುಕ್ರವಾರ ರದ್ದುಗೊಂಡಿದೆ.
ಯುರೋಪಿಯನ್ ಟೂರ್ ಸಹ ಅನುಮೋದನೆಯ ಈ ಟೂರ್ನಿಯನ್ನು ಕಳೆದ ಮಾರ್ಚ್ 19 ರಿಂದ 22 ರವರೆಗೆ ಗುರುಗ್ರಾಮ್ ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಸೋಂಕಿನಿಂದಾಗಿ ಟೂರ್ನಿಯನ್ನು ಮುಂದೂಡಲಾಗಿತ್ತು. ಸಾಂಕ್ರಾಮಿಕ ರೋಗದಿಂದಾಗಿ ಮಹಿಳಾ ಇಂಡಿಯನ್ ಓಪನ್ ಸಹ ಮಂಗಳವಾರ ರದ್ದಾಗಿದೆ.
"ಎಲ್ಲರ ಆರೋಗ್ಯ ಮತ್ತು ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಗಮನದಲ್ಲಿಟ್ಟುಕೊಂಡು, ಈ ವರ್ಷದ ಇಂಡಿಯನ್ ಓಪನ್ ಅನ್ನು ರದ್ದುಗೊಳಿಸಲು ನಾವು ನಿರ್ಧರಿಸಿದ್ದೇವೆ," ಎಂದು ಭಾರತೀಯ ಗಾಲ್ಫ್ ಯೂನಿಯನ್ (ಐಜಿಯು) ಅಧ್ಯಕ್ಷ ದೇವಾಂಗ್ ಶಾ ತಿಳಿಸಿದ್ದಾರೆ.
" ಇದು ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ, ಆದ್ದರಿಂದ ಯುರೋಪಿಯನ್ ಟೂರ್ ಜತೆ ಸಮಾಲೋಚಿಸಿದ ಬಳಿಕ ಈ ವರ್ಷದ ಟೂರ್ನಿಯನ್ನು ರದ್ದುಪಡಿಸಲು ನಾವು ತೀರ್ಮಾನಿಸಿದ್ದೇವೆ. ಈ ಟೂರ್ನಿಯು 2021 ರಲ್ಲಿ ನಡೆಯಲಿದೆ," ಎಂದು ಶಾ ಮಾಹಿತಿ ನೀಡಿದ್ದಾರೆ.
ಯುಎನ್ಐಆರ್ ಕೆ 1915