Monday, Sep 21 2020 | Time 11:35 Hrs(IST)
  • ಸಚಿವ ಸಂಪುಟ ವಿಸ್ತರಣೆಗಾಗಿ ವರಿಷ್ಠರ ಸಂದೇಶಕ್ಕಾಗಿ ಕಾಯುತ್ತಿದ್ದೇನೆ: ಯಡಿಯೂರಪ್ಪ
  • ಕೊರೋನಾ ಆರ್ಭಟ, 24 ಗಂಟೆಯಲ್ಲಿ 1,130 ಮಂದಿ ಸಾವು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ಕೊವಿಡ್‍-19: ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ 1,36,895 ಕ್ಕೆ ಏರಿಕೆ
  • ಬ್ರೆಜಿಲ್‌ನಲ್ಲಿ ಹೆದ್ದಾರಿ ಅಪಘಾತ: 12 ಮಂದಿ ಸಾವು
  • ಪ್ರೇಮಸೌಧ, ತಾಜ್ ಮಹಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ
  • ಭಾರತ- ಚೀನಾ ನಡುವೆ ಇಂದು ಸೇನಾ ಮಟ್ಟದ ಮಾತುಕತೆ
  • ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು
Special Share

ಕೋವಿಡ್-19: ದೇಶದಲ್ಲಿ 13.78 ಲಕ್ಷ ರೋಗಿಗಳ ಚೇತರಿಕೆ, ಆರು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣ

ನವದೆಹಲಿ, ಆ.7 (ಯುಎನ್ಐ)- ಕಳೆದ ಒಂಬತ್ತು ದಿನಗಳಿಂದ ದೇಶದಲ್ಲಿ ದಿನಂಪ್ರತಿ 50 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕುಗಳು ವರದಿಯಾಗುತ್ತಿದ್ದು, ಈ ಕಾಯಿಲೆಯಿಂದ ಚೇತರಿಸಿಕೊಳ್ಳುವರ ಸಂಖ್ಯೆಯೂ ಹೆಚ್ಚುತ್ತಿದೆ ಮತ್ತು ಇಲ್ಲಿಯವರೆಗೆ 13.78 ಲಕ್ಷ ಜನರು ಈ ಕಾಯಿಲೆಯಿಂದ ಹೊರಬಂದಿದ್ದಾರೆ. ಸದ್ಯ ಭಾರತದಲ್ಲಿ ಆರು ಲಕ್ಷಕ್ಕೂ ಹೆಚ್ಚು ಹೆಚ್ಚು ಸಕ್ರಿಯ ಪ್ರಕರಣಗಳಿವೆ.

ಕೊರೊನಾ ವೈರಸ್ ಪೀಡಿತ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಮತ್ತು ದೇಶದ ಪರಿಸ್ಥಿತಿ ಹೆಚ್ಚು ಆತಂಕಕಾರಿಯಾಗುತ್ತಿದೆ.

ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 62,538 ಹೊಸ ಪ್ರಕರಣಗಳು ದಾಖಲಾದ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ 20,27,075 ಕ್ಕೆ ಏರಿದೆ. ಪ್ರಸ್ತುತ 6,07,384 ಸಕ್ರಿಯ ಪ್ರಕರಣಗಳಿವೆ ಮತ್ತು 13,78,105 ಜನರು ಈವರೆಗೆ ಮಹಾಮಾರಿ ವಿರುದ್ಧ ಹೋರಾಡುವಲ್ಲಿ ಸಫಲರಾಗಿದ್ದಾರೆ. ಅದೇ ಅವಧಿಯಲ್ಲಿ, 49,769 ರೋಗಿಗಳ ಸಂಪೂರ್ಣ ಚೇತರಿಕೆಯ ನಂತರ, ಆರೋಗ್ಯವಂತ ಜನರ ಸಂಖ್ಯೆ 13,78,105 ತಲುಪಿದೆ. ಆದಾಗ್ಯೂ, ಈ ಅವಧಿಯಲ್ಲಿ, 886 ಸೋಂಕಿತ ರೋಗಿಗಳು ಸಹ ಸಾವನ್ನಪ್ಪಿದ್ದು, ಮೃತ ಪಟ್ಟವರ ಸಂಖ್ಯೆ 41,585 ಕ್ಕೆ ತಲುಪಿದೆ.

ಯುಎನ್ಐ ವಿಎನ್ಎಲ್ 2203
More News

ಭಾರತ- ಚೀನಾ ನಡುವೆ ಇಂದು ಸೇನಾ ಮಟ್ಟದ ಮಾತುಕತೆ

21 Sep 2020 | 8:48 AM

 Sharesee more..

ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು

21 Sep 2020 | 8:00 AM

 Sharesee more..
ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ, ಕೃಷಿ ಉತ್ಪನ್ನಗಳ  ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ: ಪ್ರಧಾನಿ ಮೋದಿ  ರೈತರಿಗೆ ಭರವಸೆ

ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ, ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ: ಪ್ರಧಾನಿ ಮೋದಿ ರೈತರಿಗೆ ಭರವಸೆ

20 Sep 2020 | 8:02 PM

ನವದೆಹಲಿ, ಸೆ 20(ಯುಎನ್ಐ) ಕೃಷಿ ವಲಯದ ಸುಧಾರಣೆಗಳಿಗೆ ಸಂಬಂಧಿಸಿದ ಎರಡು ಮಹತ್ವದ ವಿಧೇಯಕಗಳು ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ರೈತರನ್ನು ಅಭಿನಂದಿಸಿದ್ದಾರೆ.

 Sharesee more..