Monday, Jun 1 2020 | Time 02:32 Hrs(IST)
Special Share

ಕೋವಿಡ್ 19 : ಮಾ 31 ರ ವರೆಗೆ ಜಮ್ಮುವಿನಲ್ಲಿ ಚಿತ್ರಮಂದಿರ ಮುಚ್ಚುವಂತೆ ಆದೇಶ

ಜಮ್ಮು, ಮಾ 10 (ಯುಎನ್ಐ) ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಜಮ್ಮು ಕಾಶ್ಮೀರ ಸರ್ಕಾರ ಮಾರ್ಚ್ 31 ರ ವರೆಗೆ ಎಲ್ಲಾ ಚಿತ್ರಮಂದಿರಗಳನ್ನು ಮುಚ್ಚುವಂತೆ ಆದೇಶ ನೀಡಿದೆ.
ಸರ್ಕಾರದ ವಕ್ತಾರ ರಾಜ್ಯ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಲ್ ಮಂಗಳವಾರ ರಾತ್ರಿ ಈ ವಿಷಯ ಟ್ವೀಟ್ ಮಾಡಿದ್ದಾರೆ.
ಜಮ್ಮು ಜಿಲ್ಲೆಯಲ್ಲಿ ಎಲ್ಲಾ ಚಿತ್ರಮಂದಿರಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ 2020 ರ ಮಾರ್ಚ್ 31 ರವರೆಗೆ ಮುಚ್ಚುವಂತೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಮಧ್ಯೆ ಮಂಗಳವಾರ ಮಧ್ಯಾಹ್ನ ಜಮ್ಮುವಿನಲ್ಲಿನ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮಾ 31 ರವರೆಗೆ ಮುಚ್ಚುವಂತೆ ಆದೇಶಿಸಲಾಗಿತ್ತು.
ಯುಎನ್ಐ ಜಿಎಸ್ಆರ್ 2304