Monday, Jun 1 2020 | Time 00:15 Hrs(IST)
Flash Share

ಕೋವಿಡ್ -19: ರಷ್ಯಾದಲ್ಲಿ 10,581 ಹೊಸ ಪ್ರಕರಣಗಳು ಪತ್ತೆ

ಮಾಸ್ಕೋ, ಮೇ 4 (ಯುಎನ್‌ಐ) ರಷ್ಯಾದಲ್ಲಿ ಕಳೆದ 24 ತಾಸಿನಲ್ಲಿ 10,581 ಹೊಸ ಕೊವಿಡ್‍-19 ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ ಒಟ್ಟು 145,268 ಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಕರೋನವೈರಸ್ ಸ್ಪಂದನೆ ಕೇಂದ್ರ ಸೋಮವಾರ ತಿಳಿಸಿದೆ.
ರಷ್ಯಾದಲ್ಲಿ ಭಾನುವಾರ 10,633 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಒಂದು ದಿನದಲ್ಲಿ ಅತಿ ಹೆಚ್ಚಿನ ಏರಿಕೆಯಾಗಿದೆ.
‘ಕಳೆದ 24 ತಾಸಿನಲ್ಲಿ ದೇಶದ 82 ಪ್ರಾಂತ್ಯಗಳಲ್ಲಿ ಕೊವಿಡ್‍-19 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 5,352 ಪ್ರಕರಣಗಳು ಸಕ್ರಿಯವಾಗಿ ಪತ್ತೆಯಾಗಿವೆ ಎಂದು ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.
ಇದರೊಂದಿಗೆ ರಷ್ಯಾದಾದ್ಯಂತ 85 ಪ್ರಾಂತ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 145,268 ಕ್ಕೆ ತಲುಪಿದೆ.
ಹೊಸ ಪ್ರಕರಣಗಳ ಪೈಕಿ ಮಾಸ್ಕೋದಲ್ಲಿ 5,795, ಮಾಸ್ಕೋ ಹೊರ ಪ್ರದೇಶದಲ್ಲಿ 803, ಮತ್ತು ಸೇಂಟ್ ಪೀಟರ್ಸ್‍ ಬರ್ಗ್‍ ನಲ್ಲಿ 317 ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದ ದೇಶದಲ್ಲಿ ಸಾವಿನ ಸಂಖ್ಯೆ 1,356 ಕ್ಕೆ ಏರಿದೆ.
ಕಳೆದ 24 ತಾಸಿನಲ್ಲಿ ಒಟ್ಟು 1,456 ರೋಗಿಗಳು ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆ 18,095 ಕ್ಕೆ ತಲುಪಿದೆ ಎಂದು ಕೇಂದ್ರ ತಿಳಿಸಿದೆ.
ಯುಎನ್‍ಐ ಎಸ್ಎಲ್ಎಸ್‍ 1401
There is no row at position 0.