Sunday, Aug 9 2020 | Time 14:08 Hrs(IST)
  • ತಿರುಪತಿ ತಿಮ್ಮಪ್ಪನ ವಾರ್ಷಿಕ ಬಜೆಟ್ ೩,೨೦೦ ಕೋಟಿ
  • ಕೋವಿಡ್‌; ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ರಾಹುಲ್‌ ಗಾಂಧಿ
  • ಕೃಷಿ ವಲಯದ 1 ಲಕ್ಷ ಕೋಟಿ ರೂ ಮೊತ್ತದ ಯೋಜನೆಗೆ ಮೋದಿ ಚಾಲನೆ; ಪಿಎಂ-ಕಿಸಾನ್‌ 6ನೇ ಕಂತಿನ ಬಿಡುಗಡೆ
  • ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಹಣ ಬಿಡುಗಡೆ : ಹಾಸನದ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಜೊತೆ ಪ್ರಧಾನಿ ಸಂವಾದ
  • ಆಯೋಧ್ಯೆ ಮಾದರಿಯಲ್ಲಿ ನೇಪಾಳದಲ್ಲೂ ಶ್ರೀರಾಮ ಮಂದಿರ !
  • ಕೇರಳದ 7 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್ ಘೋಷಣೆ
  • ಮುಖ್ಯಕಾರ್ಯದರ್ಶಿಗೆ ಕರೆ ಮಾಡಿ ಅತಿವೃಷ್ಠಿ,ಪ್ರವಾಹದ ಮಾಹಿತಿ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ
  • ಶ್ರೀಲಂಕಾ ಪ್ರಧಾನಿಯಾಗಿ ಮಹೀಂದ್ರ ರಾಜಪಕ್ಷ ಪ್ರಮಾಣವಚನ ಸ್ವೀಕಾರ
  • ಅಮಿತ್‌ ಶಾ ಕೋವಿಡ್‌ ವರದಿ ನೆಗೆಟೀವ್‌; ಮನೋಜ್ ತಿವಾರಿ ಟ್ವೀಟ್
  • ಕಳೆದ ವರ್ಷದ ಅತಿವೃಷ್ಟಿ ಹಾನಿ, ಪರಿಹಾರದ ವಿವರ ಕೇಳಿದ ಸಿದ್ದರಾಮಯ್ಯ
  • ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ 21 5 ಲಕ್ಷಕ್ಕೆ ಏರಿಕೆ
  • ಉತ್ತರ ಪ್ರದೇಶ ಎಸ್‍ಟಿಎಫ್‍ ಪಡೆಯಿಂದ ಮಾಫಿಯಾ ಶಾರ್ಪ್-ಶೂಟರ್ ನ ಗುಂಡಿಕ್ಕಿ ಹತ್ಯೆ
  • ಕ್ವಿಟ್ ಇಂಡಿಯಾ ಚಳವಳಿ: ಸ್ವಾತಂತ್ರ್ಯ ಹೋರಾಟಗಾರರಿಗೆ ಮುಖ್ಯಮಂತ್ರಿ ಗೌರವ ನಮನ
  • ಟ್ವಿಟರ್‌-ಟಿಕ್‌ಟಾಕ್‌ ವಿಲೀನ?-ಪ್ರಾಥಮಿಕ ಮಾತುಕತೆ ಹಂತದಲ್ಲಿ ಪ್ರಸ್ತಾವನೆ
  • ವಿಜಯವಾಡದ ಕೋವಿಡ್ ಆರೈಕೆ ಕೇಂದ್ರದಲ್ಲಿ ಬೆಂಕಿ ಘಟನೆ: ಶೋಕ ವ್ಯಕ್ತಪಡಿಸಿದ ಪ್ರಧಾನಿ
National Share

ಕೊವಿಡ್‍-19 ಲಾಕ್‌ಡೌನ್‌ಗೆ ಪ್ರಧಾನಿಯವರ ಪ್ಯಾಕೇಜ್‍ ಜನರಿಗೆ ಕ್ರೂರ ಅಣಕ-ಸೋನಿಯಾ ಗಾಂಧಿ

ನವದೆಹಲಿ, ಮೇ 22 (ಯುಎನ್‌ಐ) ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸರ್ಕಾರ ಪ್ರಜಾಪ್ರಭುತ್ವಕ್ಕೆ ತಿಲಾಂಜಲಿ ಇಟ್ಟಿದ್ದು, ಎಲ್ಲಾ ಅಧಿಕಾರ ಇದೀಗ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಕೇಂದ್ರೀಕೃತವಾಗಿದೆ ಎಂದು ಆರೋಪಿಸಿದ್ದಾರೆ.
ನಮ್ಮ ಸಂವಿಧಾನದ ಅವಿಭಾಜ್ಯ ಅಂಗವಾಗಿರುವ ಒಕ್ಕೂಟ ವ್ಯವಸ್ಥೆಯ ಮನೋಭಾವವನ್ನು ಸರ್ಕಾರ ಮರೆತಿದೆ. ಸಂಸತ್ತಿನ ಉಭಯ ಸದನಗಳು ಅಥವಾ ಸ್ಥಾಯಿ ಸಮಿತಿಗಳ ಸಭೆ ಕರೆಯುವ ಯಾವುದೇ ಸೂಚನೆಗಳಿಲ್ಲ ಎಂದು ಅವರು ಹೇಳಿದ್ದಾರೆ.
‘ಮಿತ್ರರೇ, ರಚನಾತ್ಮಕ ಟೀಕೆ ಮತ್ತು ಸಲಹೆಗಳನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ. ಜನರ ಧ್ವನಿಯಾಗಿರಿ. ಆ ಉತ್ಸಾಹದಲ್ಲಿಯೇ ನಾವು ಇಂದು ಭೇಟಿಯಾಗುತ್ತಿದ್ದೇವೆ, ‘' ಎಂದು ಸೋನಿಯಾ ಗಾಂಧಿ 22 ಸಮಾನ ಮನಸ್ಕ ಪಕ್ಷಗಳನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಆರಂಭಿಕ ಭಾಷಣ ಮಾಡಿ ಹೇಳಿದ್ದಾರೆ.
ಕೊರೊನಾವೈರಸ್ ಮೊದಲೇ ಭಾರತ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿಯಿಂದ ಜನರು ಹೆಚ್ಚುತೊಂದರೆಗೊಳಾಗಿದ್ದು, ಆರ್ಥಿಕತೆಗೂ ಪೆಟ್ಟು ಬಿದ್ದಿದೆ. ವೈರಸ್ ವಿರುದ್ಧದ ಹೋರಾಟ 21 ದಿನಗಳಲ್ಲಿ ಕೊನೆಗೊಳ್ಳಲಿದೆ ಎಂಬ ಪ್ರಧಾನ ಮಂತ್ರಿಯವರ ಆರಂಭಿಕ ಆಶಾವಾದ ಸುಳ್ಳಾಗಿದೆ ಎಂದು ಸೋನಿಯಾ ಗಾಂಧಿ ಗುಡುಗಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಮಾಯಾವತಿಯವರ ಬಹುಜನ ಸಮಾಜ ಪಕ್ಷ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಗಳು ಸಭೆಯಲ್ಲಿ ಭಾಗವಹಿಸರಿಲಿಲ್ಲ.
ವೈರಸ್‍ ನಿರ್ಮೂಲನೆಗೆ ಲಸಿಕೆ ದೊರೆಯುವವರೆಗೂ ಪೀಡೆ ತೊಲಗುವುದಿಲ್ಲ. ಲಾಕ್‌ಡೌನ್‌ಗಳ ಮಾನದಂಡಗಳ ಬಗ್ಗೆ ಸರ್ಕಾರ ಅನಿಶ್ಚಿತವಾಗಿತ್ತು. ಅಲ್ಲದೆ, ಯಾವುದೇ ಕಾರ್ಯತಂತ್ರವನ್ನೂ ಹೊಂದಿಲ್ಲ. ಪರೀಕ್ಷಾ ಕಾರ್ಯತಂತ್ರ ಮತ್ತು ಪರೀಕ್ಷಾ ಕಿಟ್‌ಗಳ ಆಮದಿನ ಬಗ್ಗೆಯೂ ಸರ್ಕಾರ ಎಡವಿದೆ, ಸಾಂಕ್ರಾಮಿಕ ರೋಗ ಹಾನಿಯನ್ನು ಮುಂದುವರೆಸಿದೆ ಎಂದು ಸೋನಿಯಾಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಎ.ಕೆ.ಆಂಟನಿ, ಗುಲಾಮ್ ನಬೀ ಆಜಾದ್, ಅಧೀರ್ ರಂಜನ್ ಚೌಧರಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಅಹ್ಮದ್ ಪಟೇಲ್ ಎಚ್.ಡಿ.ದೇವೇಗೌಡ (ಜೆಡಿಎಸ್), ಮಮತಾ ಬ್ಯಾನರ್ಜಿ, ಡೆರೆಕ್ ಒ'ಬ್ರಿಯೆನ್ (ಎಐಟಿಸಿ); ಶರದ್ ಪವಾರ್, ಪ್ರಫುಲ್ ಪಟೇಲ್ (ಎನ್‌ಸಿಪಿ); ಸಂಜಯ್ ರಾವತ್‍ (ಶಿವಸೇನೆ); ಸೀತಾರಾಮ್ ಯೆಚೂರಿ (ಸಿಪಿಐ-ಎಂ), ಹೇಮಂತ್ ಸೊರೆನ್ (ಜೆಎಂಎಂ), ಡಿ ರಾಜಾ (ಸಿಪಿಐ) ಮತ್ತು ಎಂ.ಕೆ.ಸ್ಟಾಲಿನ್ (ಡಿಎಂಕೆ) ಸಭೆಯಲ್ಲಿ ಭಾಗವಹಿಸಿದ್ದರು.

ಯುಎನ್‍ಐ ಎಸ್ಎಲ್‍ಎಸ್ 2212