Monday, Jun 1 2020 | Time 02:47 Hrs(IST)
National Share

ಕೊವಿಡ್‍-19 ವೇಳೆ ಚುಚ್ಚುಮದ್ದು ನೀಡಲು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾರ್ಗದರ್ಶನ ಟಿಪ್ಪಣಿ ಪ್ರಕಟ

ನವದೆಹಲಿ, ಮೇ 22(ಯುಎನ್‍ಐ)-ಕೊವಿಡ್-19 ಸೋಂಕಿನ ಸಂದರ್ಭದಲ್ಲಿ ಮತ್ತು ಆನಂತರದ ದಿನಗಳಲ್ಲಿ ರೋಗನಿರೋಧಕ ಚುಚ್ಚುಮದ್ದು ಸೇವೆಗಳಿಗೆ ಆರೋಗ್ಯ ಸಚಿವಾಲಯ ಮಾರ್ಗದರ್ಶನ ಟಿಪ್ಪಣಿ ಹೊರಡಿಸಿದೆ..

ಕೊವಿಡ್‍-19 ಸೋಂಕಿನ ಹಿನ್ನೆಲೆಯಲ್ಲಿ ವಲಯಗಳ ವರ್ಗೀಕರಣ ಹೊರತಾಗಿಯೂ ಆರೋಗ್ಯ ಸೌಲಭ್ಯಗಳಲ್ಲಿ ಆಗಷ್ಟೇ ಹುಟ್ಟಿದ ಶಿಶುವಿಗೆ ಚುಚ್ಚುಮದ್ದು ಹಾಕುವುದು ಮುಂದುವರಿಯುತ್ತದೆ ಎಂದು ಮಾರ್ಗದರ್ಶನ ಟಿಪ್ಪಣಿಯಲ್ಲಿ ಸಚಿವಾಲಯ ಹೇಳಿದೆ.

ಕಂಟೈನ್‍ಮೆಂಟ್‍ ಇಲ್ಲವೇ ವಲಯ ವರ್ಗದಿಂದ ಹೊರಬರುವ ಪ್ರದೇಶಗಳಲ್ಲಿ ಕನಿಷ್ಟ 14 ದಿನಗಳ ನಂತರವಷ್ಟೇ ಸೌಲಭ್ಯ ಆಧಾರಿತ ರೋಗನಿರೋಧಕ ಚುಚ್ಚುಮದ್ದು ಹಾಕುವ ಚಟುವಟಿಕೆಗಳನ್ನು ಆರಂಭಿಸಬಹುದಾಗಿದೆ. ಚುಚ್ಚುಮದ್ದು ಹಾಕುವ ಸೇವೆಗಳನ್ನು ಕಂಟೈನ್‍ಮೆಂಟ್‍ ಮತ್ತು ಬಫರ್‍ ವಲಯ ಹಾಗೂ ಬಫರ್‍ ಮತ್ತು ಹಸಿರುವ ವಲಯಗಳೆಂದು ವರ್ಗೀಕರಿಸಲಾಗಿದೆ.
ಕೊವಿಡ್‍-19 ಸಂದರ್ಭದಲ್ಲಿ, ವಿವಿಧ ವಲಯಗಳಲ್ಲಿ ಚುಚ್ಚುಮದ್ದು ಸೇವೆಗಳು ಕೊವಿಡ್‍-19ಕ್ಕೆ ಸಂಬಂಧಿಸಿದ ಗೃಹ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸಲಿವೆ. ಯಾವುದೇ ರಾಜ್ಯ ಮಾರ್ಗದರ್ಶನವನ್ನು

ಯಾವುದೇ ವಲಯಗಳಲ್ಲಿ ಚುಚ್ಚುಮದ್ದು ಹಾಕುವ ಚಟುವಟಿಕೆಗಳ ವೇಳೆ ಸಾಮಾಜಿಕ ಅಂತರ, ಕೈ ತೊಳೆಯುವುದು ಮತ್ತು ಉಸಿರಾಟದ ನೈರ್ಮಲ್ಯದ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.
ಚುಚ್ಚುಮದ್ದು ಹಾಕುವ ವೇಳೆ ಸ್ಥಳದಲ್ಲಿ ಐದಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ವ್ಯಕ್ತಿಗತ ಅಂತರ ಕನಿಷ್ಟ ಒಂದು ಮೀಟರ್‍ ಕಾಪಾಡಿಕೊಳ್ಳಬೇಕಾಗುತ್ತದೆ.

ರೋಗನಿರೋಧಕ ಅಧಿವೇಶನದಲ್ಲಿ ಯಾವುದೇ ಸಮಯದಲ್ಲಿ, ಪ್ರತಿಯೊಬ್ಬರ ನಡುವೆ ಕನಿಷ್ಠ ಒಂದು ಮೀಟರ್ ಅಂತರವನ್ನು ಹೊಂದಿರುವ ಸ್ಥಳದಲ್ಲಿ ಐದು ಜನರಿಗಿಂತ ಹೆಚ್ಚು ಜನರು ಇರಬಾರದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಯುಎನ್‍ಐ ಎಸ್‍ಎಲ್‍ಎಸ್ 2130
More News
ಜೂನ್ 3ರ ವೇಳೆಗೆ ಗುಜರಾತ್,ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಬೀಸುವ ಸಾಧ್ಯತೆ:ಹವಾಮಾನ ಇಲಾಖೆ ಎಚ್ಚರಿಕೆ

ಜೂನ್ 3ರ ವೇಳೆಗೆ ಗುಜರಾತ್,ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಬೀಸುವ ಸಾಧ್ಯತೆ:ಹವಾಮಾನ ಇಲಾಖೆ ಎಚ್ಚರಿಕೆ

31 May 2020 | 9:35 PM

ನವದೆಹಲಿ, ಮೇ 31 (ಯುಎನ್‌ಐ) ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪಗಳ ಮೇಲೆ ರೂಪುಗೊಂಡ ಕಡಿಮೆ ಒತ್ತಡ ಪ್ರದೇಶವು ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಜೂನ್ 3 ರೊಳಗೆ ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗುಜರಾತ್ ಗೆ ಬೀಸುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.

 Sharesee more..
ದೇಶದಲ್ಲಿ ಒಂದೇ ದಿನ 8380 ಕೊರೋನಾ ಸೋಂಕು ಪತ್ತೆ: ಸಾವಿನ ಸಂಖ್ಯೆ 5164ಕ್ಕೆ ಏರಿಕೆ

ದೇಶದಲ್ಲಿ ಒಂದೇ ದಿನ 8380 ಕೊರೋನಾ ಸೋಂಕು ಪತ್ತೆ: ಸಾವಿನ ಸಂಖ್ಯೆ 5164ಕ್ಕೆ ಏರಿಕೆ

31 May 2020 | 9:26 PM

ನವದೆಹಲಿ, ಮೇ 31 (ಯುಎನ್ಐ) ರಾಷ್ಟ್ರವ್ಯಾಪಿ ಲಾಕ್‌ಡೌನ್ 4.0 ಭಾನುವಾರ ಮುಕ್ತಾಯಗೊಳ್ಳುತ್ತಿದ್ದಂತೆ, ದೇಶದಲ್ಲಿ ಒಂದೇ ದಿನ ಕೊರೋನಾ ಸೋಂಕು 8380 ಜನರಲ್ಲಿ ಕಂಡುಬಂದಿದೆ.

 Sharesee more..