Friday, Oct 30 2020 | Time 07:35 Hrs(IST)
National Share

ಕೊವಿಡ್‍-19 ಹರಡುವಿಕೆ ತಗ್ಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲ-ಶಶಿ ತರೂರ್ ಆರೋಪ

ಕೊವಿಡ್‍-19 ಹರಡುವಿಕೆ ತಗ್ಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲ-ಶಶಿ ತರೂರ್ ಆರೋಪ
ಕೊವಿಡ್‍-19 ಹರಡುವಿಕೆ ತಗ್ಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲ-ಶಶಿ ತರೂರ್ ಆರೋಪ

ನವದೆಹಲಿ, ಸೆ 20(ಯುಎನ್‍ಐ)- ದೇಶದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ತಗ್ಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಸದಸ್ಯ ಶಶಿ ತರೂರ್ ಲೋಕಸಭೆಯಲ್ಲಿ ಭಾನುವಾರ ಆರೋಪಿಸಿದ್ದಾರೆ.

ಸದನದಲ್ಲಿ ನಿಯಮ 193ರಡಿ ದೇಶದಲ್ಲಿ ಕೊವಿಡ್‍ -19 ಸಾಂಕ್ರಾಮಿಕ ರೋಗ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಶಿ ತರೂರ್, ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ದೈನಂದಿನ ಕೊವಿಡ್‍ ಪ್ರಕರಣಗಳು ಮತ್ತು ಸಾವುಗಳು ವರದಿಯಾಗುತ್ತಿವೆ. ಎಂದು ವಿಶ್ವ ಆರೋಗ್ಯಸಂಸ್ಥೆಯ ಅಂಕಿ-ಅಂಶಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.

‘ನಿನ್ನೆ ಕೊವಿಡ್‍ ನ 93,000 ಕ್ಕೂ ಹೆಚ್ಚು ಪ್ರಕರಣಗಳು ಮತ್ತು 2,000 ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. ಈ ಮೂಲಕ ಜಾಗತಿಕವಾಗಿ ಅತಿ ಹೆಚ್ಚು ದೈನಂದಿನ ಪ್ರಕರಣಗಳು ಮತ್ತು ಸಾವುಗಳು ಸಂಭವಿಸಿರುವ ದೇಶವೆನಿಸಿದೆ" ಎಂದು ಅವರು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ಎಚ್ಚರಿಕೆಯನ್ನು ಸರ್ಕಾರ ಕೇಳಲಿಲ್ಲ. ಬದಲಾಗಿ, ಮಧ್ಯಪ್ರದೇಶದಲ್ಲಿ ಸರ್ಕಾರವನ್ನು ಉರುಳಿಸಲು ಸರ್ಕಾರ ಹೆಚ್ಚು ಆಸಕ್ತಿ ವಹಿಸಿತ್ತು ಎಂದು ತರೂರ್ ಆರೋಪಿಸಿದರು.

ನಾವು ಎರಡೂ ರಂಗಗಳಲ್ಲಿ ವೈಫಲ್ಯವನ್ನು ಕಂಡಿದ್ದೇವೆ. ವೈರಸ್ ಹರಡುವಿಕೆ ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಅಥವಾ ಆರ್ಥಿಕತೆಯನ್ನು ಸರಿದಾರಿಗೆ ತರುವಲ್ಲಿ ಕಾರ್ಯನಿರ್ವಹಿಸಿಲ್ಲ. ಜಿಡಿಪಿ, 41 ವರ್ಷಗಳಲ್ಲಿ ಮೊದಲ ಬಾರಿಗೆ ವಾಸ್ತವವಾಗಿ ಕುಗ್ಗಲಿದೆ ಎಂದು ಅವರು ತರೂರ್‍ ಹೇಳಿದ್ದಾರೆ. ಯುಎನ್‍ಐ ಎಸ್‍ಎಲ್ಎಸ್ 2008

More News
ಮಹಾಮೈತ್ರಿ ಮಾತ್ರ ಬಿಹಾರದ ಜನತೆಗೆ ಉತ್ತಮ ಭವಿಷ್ಯ ನೀಡಬಲ್ಲದು; ರಾಹುಲ್‌

ಮಹಾಮೈತ್ರಿ ಮಾತ್ರ ಬಿಹಾರದ ಜನತೆಗೆ ಉತ್ತಮ ಭವಿಷ್ಯ ನೀಡಬಲ್ಲದು; ರಾಹುಲ್‌

29 Oct 2020 | 8:43 PM

ನವದೆಹಲಿ, ಅ 29 (ಯುಎನ್ಐ) ಬಿಹಾರದ ಜನತೆಗೆ ಬದಲಾವಣೆ ಬೇಕು ಮತ್ತು ಮಹಾಮೈತ್ರಿ ಮಾತ್ರ ರಾಜ್ಯದ ಜನತೆಗೆ ಉತ್ತಮ ಭವಿಷ್ಯ ಖಾತರಿಪಡಿಸುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗುರುವಾರ ಹೇಳಿದ್ದಾರೆ.

 Sharesee more..
ಪರಿಸರಸ್ನೇಹಿ ಕಟ್ಟಡಗಳ ನಿರ್ಮಾಣಕ್ಕಿದು ಸುಸಮಯ: ಉಪ ರಾಷ್ಟ್ರಪತಿ

ಪರಿಸರಸ್ನೇಹಿ ಕಟ್ಟಡಗಳ ನಿರ್ಮಾಣಕ್ಕಿದು ಸುಸಮಯ: ಉಪ ರಾಷ್ಟ್ರಪತಿ

29 Oct 2020 | 5:57 PM

ನವದೆಹಲಿ, ಅ 29 (ಯುಎನ್ಐ) ದೇಶದಲ್ಲಿ ಇನ್ನು ಮುಂದೆ ನಿರ್ಮಾಣವಾಗು ಹೊಸ ಕಟ್ಟಡಗಳನ್ನು ಕಡ್ಡಾಯವಾಗಿ ಹಸಿರು ಮತ್ತು ಪರಿಸರ ಸ್ನೇಹಿಯಾಗಿಸುವ ಸಮಯ ಬಂದಿದೆ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಹೇಳಿದ್ದಾರೆ.

 Sharesee more..

ಒಂದು ಕೆಜಿ ಅಸ್ಸಾಂ ಚಹಾ 75,000 ರೂ ಗೆ ಮಾರಾಟ !

29 Oct 2020 | 5:51 PM

 Sharesee more..