Saturday, Aug 8 2020 | Time 05:44 Hrs(IST)
Karnataka Share

ಕೋವಿಡ್‌-19: ಹಾಸನದಲ್ಲಿ ಮತ್ತೊಂದು ಸಾವು; ಮೃತರ ಸಂಖ್ಯೆ 8ಕ್ಕೆ ಏರಿಕೆ

ಹಾಸನ, ಜು 5 (ಯುಎನ್ಐ) ಜಿಲ್ಲೆಯಲ್ಲಿ ಮತ್ತೊಬ್ಬರು ಕೋವಿಡ್‌-19ನಿಂದ ಸಾವನ್ನಪ್ಪಿದ್ದಾರೆ. ಅರಸೀಕೆರೆಯ 77 ವರ್ಷದ ವೃದ್ಧರೊಬ್ಬರು ಕಳೆದ ರಾತ್ರಿ 11:45ಕ್ಕೆ ಕೊನೆಯುಸಿರೆಳೆದಿದ್ದಾರೆ.
ನ್ಯುಮೊನಿಯಾ ಹಾಗೂ ರಕ್ತದ ಒತ್ತಡ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿದ್ದ ಸೋಂಕಿತರನ್ನು ಹಾಸನದ ಕೋವಿಡ್‌ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಚಿಕಿತ್ಸೆ ‌ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ ಕೃಷ್ಣಮೂರ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸತೀಶ್ ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸಾವಿನ‌ ಸಂಖ್ಯೆ 8ಕ್ಕೆ‌ ಏರಿಕೆಯಾಗಿದೆ.
ಯುಎನ್ಐ ಎಎಚ್ 1022