Monday, Jun 1 2020 | Time 02:00 Hrs(IST)
Special Share

ಕೋವಿಡ್-19; 15 ಸಾವಿರ ಆಹಾರ ಪೊಟ್ಟಣ ವಿತರಿಸಿದ ಟಿಟಿಡಿ

ಕೋವಿಡ್-19; 15 ಸಾವಿರ ಆಹಾರ ಪೊಟ್ಟಣ ವಿತರಿಸಿದ ಟಿಟಿಡಿ
ಕೋವಿಡ್-19; 15 ಸಾವಿರ ಆಹಾರ ಪೊಟ್ಟಣ ವಿತರಿಸಿದ ಟಿಟಿಡಿ

ತಿರುಪತಿ, ಮಾ 28 (ಯುಎನ್ಐ) ಕೊರೋನಾ ವೈರಸ್ ಸೋಂಕನ್ನು ತಡೆಯಲು ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿರುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ), ವಸತಿರಹಿತರ ನೆರವಿಗೆ 15 ಸಾವಿರ ಪುಳಿಯೋಗರೆ ಪೊಟ್ಟಣಗಳನ್ನು ವಿತರಿಸಿದೆ.

ಜಿಇಒ ಪಿ. ಬಸಂತ್ ಕುಮಾರ್ ನೇತೃತ್ವದ ಟಿಟಿಡಿ ಸಿಬ್ಬಂದಿಯ ಕ್ಯಾಂಟೀನ್ ನಲ್ಲಿ ಅನ್ನಪ್ರಸಾದ ತಯಾಋಿಸಲಾಯಿತು. ನಂತರ ಭಾನುವಾರದ ಮೊದಲಾರ್ಧದಲ್ಲಿ 30 ಸಾವಿರ ಹಾಗೂ ರಾತ್ರಿ ವೇಳೆಗೆ 15 ಸಾವಿರ ಆಹಾರ ಪೊಟ್ಟಣಗಳನ್ನು ವಿತರಿಸಿದೆ. ಪ್ರತಿನಿತ್ಯ ಆಹಾರದ ಪಟ್ಟಿ ಬದಲಾಯಿಸಿ ಮೊಸರನ್ನ, ಚಿತ್ರಾನ್ನ, ತರಕಾರಿ ಅನ್ನ, ಟೊಮ್ಯಾಟೋ ಅನ್ನ,ಬಿಸಿಬೇಳೆ ಬಾತ್ ಮತ್ತು ಪೊಂಗಲ್ ವಿತರಿಸಲಾಗುವುದು ಎಂದು ಟಿಟಿಡಿ ತಿಳಿಸಿದೆ.

ಇಲ್ಲಿನ ವಿಷ್ಣುನಿವಾಸಮ್, ಶ್ರೀನಿವಾಸಮ್, ಮೊದಲ ಹಾಗೂ ಎರಡನೇ ಕಲ್ಯಾಣ ಮಂಟಪ, ಪದ್ಮಾವತಿ ನಿಲಯಗಳಲ್ಲಿ ಆಹಾರ ಪೂರೈಕೆ ಮಾಡಲಾಗುತ್ತಿದೆ.

ಯುಎನ್ಐ ಎಸ್ಎಚ್ 1940