Sunday, Mar 29 2020 | Time 00:22 Hrs(IST)
Sports Share

ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ ಜೊಕೊವಿಚ್

ದುಬೈ, ಫೆ.27 (ಯುಎನ್ಐ)- ವಿಶ್ವದ ನಂಬರ್ ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ 6-3, 6-1ರಿಂದ ಜರ್ಮನಿಯ ಫಿಲಿಪ್ ಕೋಲ್ಸ್‌ಕ್ರೈಬರ್ ಅವರನ್ನು ಸೋಲಿಸಿ ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್ಸ್ಗೆ ಪ್ರವೇಶಿಸಿದ್ದಾರೆ.

ಐದನೇ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿರುವ ಸರ್ಬಿಯಾದ ಸ್ಟಾರ್ ಆಟಗಾರ ಜೊಕೊವಿಚ್, ಪ್ರಿ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಏಕಪಕ್ಷಿಯವಾಗಿ ಪಂದ್ಯ ಗೆದ್ದು ಬೀಗಿದರು. 36 ವರ್ಷದ ಜರ್ಮನ್ ಆಟಗಾರನ ವಿರುದ್ಧದ ಪಂದ್ಯವನ್ನು ಕೇವಲ 59 ನಿಮಿಷಗಳಲ್ಲಿ ಗೆಲುವು ಸಾಧಿಸಿ ಮುನ್ನಡೆದರು.

ಕ್ವಾರ್ಟರ್‌ ಫೈನಲ್ಸ್ನಲ್ಲಿ 32 ವರ್ಷದ ಜೊಕೊವಿಚ್ ಏಳನೇ ಶ್ರೇಯಾಂಕದ ರಷ್ಯಾದ ಆಟಗಾರ ಕರೆನ್ ಖಚಾನೋವ್ ಅವರನ್ನು ಎದುರಿಸಲಿದ್ದಾರೆ, ಅವರು ಆಸ್ಟ್ರಿಯನ್ ಅರ್ಹತಾ ಆಟಗಾರ ಡೆನಿಸ್ ನೊವಾಕ್ ಅವರನ್ನು 6-3, 6-4ರಿಂದ ಒಂದು ಗಂಟೆ 14 ನಿಮಿಷಗಳಲ್ಲಿ ಸೋಲಿಸಿದರು.

ಮೂರನೇ ಶ್ರೇಯಾಂಕಿತ ಫ್ರಾನ್ಸ್‌ನ ಗೇಲ್ ಮೊನ್‌ಫಿಲ್ಸ್ 66 ನಿಮಿಷಗಳಲ್ಲಿ 6–1, 6–2ರಲ್ಲಿ ಕ್ವಾಲಿಫೈಯರ್ ಯಸುಟಕಾ ಉಚಿಯಾಮಾ ಅವರನ್ನು ಸೋಲಿಸಿ ಎಂಟರ ಘಟ್ಟ ತಲುಪಿದರು.

ಯುಎನ್ಐ ವಿಎನ್ಎಲ್ 1907
More News

ಮಾಧ್ಯಮದ ಮೇಲೆ ಧೋನಿ ಪತ್ನಿ ಆಕ್ರೋಶ

28 Mar 2020 | 9:55 PM

 Sharesee more..

ತುರ್ತು ಯೋಜನೆಯ ಕೆಲಸ: ಐಸಿಸಿ

28 Mar 2020 | 9:45 PM

 Sharesee more..
ಸಂಸದ ನಿಧಿಯಿಂದ ಒಂದು ಕೋಟಿ ರೂಪಾಯಿ ನೀಡಿದ ರಿಜಿಜು

ಸಂಸದ ನಿಧಿಯಿಂದ ಒಂದು ಕೋಟಿ ರೂಪಾಯಿ ನೀಡಿದ ರಿಜಿಜು

28 Mar 2020 | 9:32 PM

ನವದೆಹಲಿ, ಮಾ.28 (ಯುಎನ್ಐ)- ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಅವರು ಕೊರೊನಾ ವೈರಸ್ ಪೀಡಿತರಿಗೆ ಸಹಾಯ ಮಾಡಲು ತಮ್ಮ ಎಂಪಿ ನಿಧಿಯಿಂದ 1 ಕೋಟಿ ರೂ.ಗಳ ಅನುದಾನವನ್ನು ಶನಿವಾರ ಪ್ರಕಟಿಸಿದ್ದಾರೆ.

 Sharesee more..