Monday, Jul 22 2019 | Time 07:26 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
National Share

ಕಾಶ್ಮೀರದಲ್ಲಿ ಭಯೋತ್ಪಾದನಾ ದಾಳಿಗೆ ಅಲ್ ಖೈದಾ ಬೆದರಿಕೆ: ಎದುರಿಸಲು ಸಜ್ಜು ಎಂದ ಭಾರತ

ಕಾಶ್ಮೀರದಲ್ಲಿ ಭಯೋತ್ಪಾದನಾ ದಾಳಿಗೆ ಅಲ್ ಖೈದಾ ಬೆದರಿಕೆ: ಎದುರಿಸಲು ಸಜ್ಜು ಎಂದ ಭಾರತ
ಕಾಶ್ಮೀರದಲ್ಲಿ ಭಯೋತ್ಪಾದನಾ ದಾಳಿಗೆ ಅಲ್ ಖೈದಾ ಬೆದರಿಕೆ: ಎದುರಿಸಲು ಸಜ್ಜು ಎಂದ ಭಾರತ

ನವದೆಹಲಿ, ಜುಲೈ 11 (ಯುಎನ್ಐ) ಉಗ್ರ ಸಂಘಟನೆಗಳ ಯಾವುದೇ ಬೆದರಿಕೆಗೆ ಜಗ್ಗುವುದಿಲ್ಲ ದೇಶದ ಪ್ರಾದೇಶಿಕ ಸಮಗ್ರತೆ ಹಾಗೂ ಸಾರ್ವಭೌಮತ್ವ ಕಾಪಾಡಲು ಭಾರತೀಯ ಸೇನೆ ಸಮರ್ಥವಾಗಿದೆ ಎಂದು ಭಾರತ ತಿಳಿಸಿದೆ

ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನಾ ದಾಳಿ ನಡೆಸುವುದಾಗಿ ಅಲ್ ಖೈದಾ ಮುಖ್ಯಸ್ಥ ಅಯ್ಮಾನ್ ಅಲ್ ಜವಾಹಿರಿ ವಿಡಿಯೋ ಬಿಡುಗಡೆ ಮಾಡಿರುವ ಕುರಿತು ಕೇಳಲಾದ ಪ್ರಶ್ನೆಗೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಗುರುವಾರ ಈ ಉತ್ತರ ನೀಡಿದ್ದಾರೆ.

ಈ ಹಿಂದೆಯೂ ಉಗ್ರ ಸಂಘಟನೆಗಳು ನಮ್ಮ ದೇಶಕ್ಕೆ ಇಂತಹ ಬೆದರಿಕೆಗಳನ್ನು ಒಡ್ಡಿವೆ . ಇದನ್ನೆಲ್ಲ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಆದಾಗ್ಯೂ ನಮ್ಮ ದೇಶದ ಸಾರ್ವಭೌಮತ್ವ, ಸಮಗ್ರತೆ ಕಾಪಾಡುವಲ್ಲಿ ಸೇನೆ ಸಮರ್ಥವಾಗಿದೆ. ಅಗತ್ಯ ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ಯುಎನ್ಐ ಎಸ್ಎ ಎಸ್ಎಚ್ 1843