Wednesday, Sep 23 2020 | Time 01:49 Hrs(IST)
National Share

ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್‍ನಿಂದ ಕದನವಿರಾಮ ಉಲ್ಲಂಘನೆ: ಮೂವರು ನಾಗರಿಕರಿಗೆ ಗಾಯ

ಶ್ರೀನಗರ, ಆ 7 (ಯುಎನ್‌ಐ) ಉತ್ತರ ಕಾಶ್ಮೀರದ ಗಡಿ ನಿಯಂತ್ರಣಾ ರೇಖೆ (ಎಲ್‌ಒಸಿ)ಯಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ಭಾರೀ ಶೆಲ್ ದಾಳಿ ಮತ್ತು ಗುಂಡಿನ ದಾಳಿ ನಡೆಸುವ ಮೂಲಕ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದ್ದು, ಘಟನೆಯಲ್ಲಿ ಮೂವರು ನಾಗರಿಕರು ಗಾಯಗೊಂಡಿದ್ದಾರೆ.
2003 ರ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿರುವ ಪಾಕಿಸ್ತಾನ ಸೈನಿಕರು ಶುಕ್ರವಾರ ಬೆಳಿಗ್ಗೆ ಬಾರಾಮುಲ್ಲಾದ ಉರಿ ಸೆಕ್ಟರ್‍ ಮತ್ತು ಕುಪ್ವಾರದ ಕರಾನ್‍ ಹಾಗೂ ತಂಗ್‍ದಾರ್ ಸೆಕ್ಟರ್‍ ಗಳಲ್ಲಿ ನಾಗರಿಕರ ಪ್ರದೇಶಗಳು ಮತ್ತು ಭಾರತೀಯ ಸೇನೆಯ ಮುನ್ನೆಲೆ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಮೋರ್ಟರ್ ಶೆಲ್‍ಗಳನ್ನು ಸಿಡಿಸಿದ್ದು,ನಂತರ ಭಾರೀ ಗುಂಡಿನ ದಾಳಿಯನ್ನೂ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ಯುಎನ್‌ಐಗೆ ತಿಳಿಸಿವೆ.
ಭಾರತೀಯ ಪಡೆಗಳು ಈ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದ್ದು, ಪರಸ್ಪರ ಗುಂಡಿನ ಚಕಮಕಿ ಒಂದು ತಾಸಿಗೂ ಹೆಚ್ಚು ಕಾಲ ನಡೆದಿದೆ. ಕದನ ವಿರಾಮ ಉಲ್ಲಂಘನೆಯಲ್ಲಿ ಭಾರತದ ಕಡೆ ಮೂವರು ನಾಗರಿಕರು ಗಾಯಗೊಂಡಿದ್ದಾರೆ"ಎಂದು ಅವರು ಹೇಳಿದ್ದಾರೆ.
ಕದನ ವಿರಾಮ ಉಲ್ಲಂಘನೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಗಡಿ ಪ್ರದೇಶಗಳಲ್ಲಿ ವಾಸಿಸುವ ಗ್ರಾಮಸ್ಥರು, ಕೋವಿಡ್‍ ನ ಸಂದರ್ಭದಲ್ಲಿ ಗಡಿ ನಿಯಂತ್ರಣಾ ರೇಖೆಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸದಂತೆ ಉಭಯ ರಾಷ್ಟ್ರಗಳನ್ನು ಒತ್ತಾಯಿಸಿದ್ದಾರೆ. ‘ಗಡಿ ನಿಯಂತ್ರಣಾ ರೇಖೆಯಲ್ಲಿ ಶೆಲ್ ದಾಳಿ ನಡೆದಾಗ ನಮ್ಮನ್ನು ಬಂಕರ್‌ಗಳಿಗೆ ಬಲವಂತವಾಗಿ ಸ್ಥಳಾಂತರಿಸಲಾಗುತ್ತದೆ. ಆದರೆ, ಅಲ್ಲಿ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಕೊರೊನಾವೈರಸ್‌ ತುತ್ತಾಗುವ ಅಪಾಯವಿದೆ. ನಾವು ಶಾಂತಿಯಿಂದ ಬದುಕಲು ಉದ್ವಿಗ್ನತೆಯನ್ನು ಕಡಿಮೆ ಮಾಡುವಂತೆ ಎರಡೂ ರಾಷ್ಟ್ರಗಳನ್ನು ವಿನಂತಿಸುತ್ತೇವೆ.’ಎಂದು ಗಡಿ ಗ್ರಾಮದ ನಿವಾಸಿಯೊಬ್ಬರು ಯುಎನ್‌ಐಗೆ ತಿಳಿಸಿದ್ದಾರೆ.
ಯುಎನ್‍ಐ ಎಸ್ಎಲ್ಎಸ್ 1426
More News
ಸಂಸತ್ತಿನಲ್ಲಿ ವಿಪಕ್ಷ ಸದಸ್ಯರ ದಾಳಿಗೆ ಖಂಡನೆ: ಒಂದು ದಿನದ ನಿರಶನ ಘೋಷಿಸಿದ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್

ಸಂಸತ್ತಿನಲ್ಲಿ ವಿಪಕ್ಷ ಸದಸ್ಯರ ದಾಳಿಗೆ ಖಂಡನೆ: ಒಂದು ದಿನದ ನಿರಶನ ಘೋಷಿಸಿದ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್

22 Sep 2020 | 3:37 PM

ನವದೆಹಲಿ, ಸೆ 22 (ಯುಎನ್‍ಐ) ಸಂಸತ್ತಿನಲ್ಲಿ ವಿಪಕ್ಷ ಸದಸ್ಯರು ನಡೆಸಿದ ದಾಳಿಗೆ ಬೇಸರ ವ್ಯಕ್ತಪಡಿಸಲು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಒಂದು ದಿನದ ನಿರಶನ ಘೋಷಿಸಿದ್ದಾರೆ.

 Sharesee more..