Wednesday, Feb 26 2020 | Time 10:39 Hrs(IST)
  • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
  • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
  • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
  • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
  • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
  • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
  • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
National Share

ಕಾಶ್ಮೀರ ವಿಷಯದಲ್ಲಿ ಭಾರತದ ನೀತಿ ಬಗ್ಗೆ ರಷ್ಯಾ ಎಂದಿಗೂ ಸಂದೇಹ ಪಡುವುದಿಲ್ಲ-ರಷ್ಯಾ ರಾಯಭಾರಿ

ನವದೆಹಲಿ, ಜ 17(ಯುಎನ್‍ಐ)- ಕಾಶ್ಮೀರ ಕುರಿತ ವಿಷಯದಲ್ಲಿ ಭಾರತದ ನೀತಿಯ ಬಗ್ಗೆ ತಾನು ಎಂದೂ ಸಂದೇಹ ಪಡುವುದಿಲ್ಲ ಎಂದು ರಷ್ಯಾ ಶುಕ್ರವಾರ ಹೇಳುವುದರೊಂದಿಗೆ ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸುವುದಕ್ಕೆ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡ ಹೊಸ ಕ್ರಮಗಳಿಗೆ ಮಹತ್ವದ ರಾಜತಾಂತ್ರಿಕ ಜಯ ಸಿಕ್ಕಿದೆ.
‘ಕಾಶ್ಮೀರ ಕುರಿತು ಭಾರತದ ನೀತಿಯ ಬಗ್ಗೆ ಸಂದೇಹ ಪಡುವವರು, ಭಾರತದ ನೀತಿಗಳ ಬಗ್ಗೆ ಸಂದೇಹ ಪಡುವವರು ತಾವಾಗಿಯೇ ಅಲ್ಲಿಗೆ ಹೋಗಿ ಅಲ್ಲಿನ ಸ್ಥಿತಿ ನೋಡಬೇಕು. ಆದರೆ, ನಾವು ಎಂದೂ ಸಂದೇಹ ಪಡುವುದಿಲ್ಲ.’ ಎಂದು ಭಾರತದಲ್ಲಿನ ರಷ್ಯಾ ರಾಯಭಾರಿ ನಿಕೊಲೆ ಕುಡಶೆವ್ ಸುದ್ದಿಗಾರರಿಗೆ ಇಲ್ಲಿ ತಿಳಿಸಿದ್ದಾರೆ.
ಕಾಶ್ಮೀರ ವಿಷಯ ಭಾರತದ ಆಂತರಿಕ ವಿಷಯವಾಗಿದೆ. ಅಲ್ಲದೆ, ರಷ್ಯಾ ಪ್ರದೇಶಕ್ಕೂ ಅದು ಒಳಪಡುವುದಿಲ್ಲ. ಆದ್ದರಿಂದ ಭಾರತದ ಆಂತರಿಕ ವಿಷಯಗಳ ಬಗ್ಗೆ ಸಂದೇಹ ಪಡುವುದಿಲ್ಲ ಎಂದು ಅವರು ಹೇಳಿದ್ದಾರೆ.
‘2020ನೇ ವರ್ಷ ಭಾರತ-ರಷ್ಯಾ ನಡುವಿನ ಹೊಸ ಒಪ್ಪಂದಗಳ ಮತ್ತು ಯೋಜನೆಗಳ ಅನುಷ್ಠಾನದ ವರ್ಷವಾಗಲಿದೆ. ರಷ್ಯಾ ಮತ್ತು ಭಾರತ ನಡುವಿನ ಕಾರ್ಯತಂತ್ರ ಪಾಲುದಾರಿಕೆಯ 20ನೇ ವರ್ಷವೂ ಇದಾಗಿದೆ. ಭಾರತ ಪ್ರಧಾನಿ ನರೇಂದ್ರಮೋದಿ ಹೇಳಿರುವಂತೆ, ಈ ವರ್ಷ ರಷ್ಯಾ-ಭಾರತ ನಡುವಿನ ಒಪ್ಪಂದಗಳು ಮತ್ತು ಯೋಜನೆಗಳ ಅನುಷ್ಠಾನ ವರ್ಷವಾಗಲಿದೆ.’ ಎಂದು ಕುಡಶೆವ್ ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಕಾಶ್ಮೀರಕ್ಕೆ ತಾವು ಏಕೆ ತೆರಳಬೇಕು ಎಂದು ತಮಗೆ ಅನಿಸುತ್ತಿಲ್ಲ. ಜಮ್ಮು-ಕಾಶ್ಮೀರ ಕುರಿತು ಹೇಳುವುದಾದರೆ ತೀರ್ಮಾನಗಳು ಭಾರತದ ಸಂವಿಧಾನದಂತೆ ಆಂತರಿಕ ವಿಷಯವಾಗಿವೆ.’ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಇದುವರೆಗೆ ರಷ್ಯಾ ರಕ್ಷಣಾ ಪಡೆಗಳಿಗೆ ಮಾತ್ರ ಲಭ್ಯವಿದ್ದ ಐದು ಎಸ್-400 ವೈಮಾನಿಕ ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು 2025ರ ವೇಳೆಗೆ ಭಾರತಕ್ಕೆ ಪೂರೈಸಲಾಗುವುದು ಎಂದು ರಷ್ಯಾ ಹೇಳಿದೆ.
ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಪ್ರಧಾನಿ ಮೋದಿ ಅವರು ಮೇ ತಿಂಗಳಲ್ಲಿ ರಷ್ಯಾಗೆ ಭೇಟಿ ನೀಡುವ ಸಾಧ್ಯತೆ ಇದೆ.
ಯುಎನ್‍ಐ ಎಸ್ ಎಲ್‍ಎಸ್ 1258