Friday, Feb 28 2020 | Time 09:33 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಕೃಷಿ ಉದ್ಯಮದಲ್ಲಿ ಹೆಚ್ಚು ಬಂಡವಾಳ ತೊಡಗಿಸಿ: ಉದ್ಯಮಶೀಲರಿಗೆ ಗಡ್ಕರಿ ಸಲಹೆ

ಕೃಷಿ ಉದ್ಯಮದಲ್ಲಿ ಹೆಚ್ಚು ಬಂಡವಾಳ ತೊಡಗಿಸಿ: ಉದ್ಯಮಶೀಲರಿಗೆ ಗಡ್ಕರಿ ಸಲಹೆ
ಕೃಷಿ ಉದ್ಯಮದಲ್ಲಿ ಹೆಚ್ಚು ಬಂಡವಾಳ ತೊಡಗಿಸಿ: ಉದ್ಯಮಶೀಲರಿಗೆ ಗಡ್ಕರಿ ಸಲಹೆ

ಔರಂಗಾಬಾದ್‍, ಮಹಾರಾಷ್ಟ್ರ, ಜ 12 (ಯುಎನ್‍ಐ)- ಕೃಷಿ ಉದ್ಯಮದಲ್ಲಿ ಹೆಚ್ಚು ಬಂಡವಾಳ ತೊಡಗಿಸುವಂತೆ ಉದ್ಯಮಶೀಲರಿಗೆ ಕೇಂದ್ರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ(ಎಂಎಸ್‍ ಎಂಇ) ಸಚಿವ ಗಡ್ಕರಿ ಸಲಹೆ ನೀಡಿದ್ದಾರೆ.ನಗರದಲ್ಲಿ ಭಾನುವಾರ ಎಂಎಸ್‍ ಎಂಇ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಾಠವಾಡ ಪ್ರಾಂತ್ಯದಲ್ಲಿ ಕೃಷಿ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸುವ ತುರ್ತು ಅಗತ್ಯವಿದೆ ಎಂದು ಹೇಳಿದ್ದಾರೆ.ಖಾದಿ, ರೇಷ್ಮೆ, ಪೀಠೋಪಕರಣ, ಬಿದಿರು ಕೈಗಾರಿಕೆಗಳಿಗೆ ಒತ್ತು ನೀಡುವಂತೆ ಉದ್ಯಮಶೀಲರಿಗೆ ಕರೆ ನೀಡಿದ ಗಡ್ಕರಿ, ಎಂಎಸ್‍ಎಂಇ ವಲಯದ ಅನೇಕ ವಿಷಯಗಳನ್ನು ಪ್ರತಿನಿಧಿಗಳೊಂದಿಗೆ ಚರ್ಚಿಸಿದರು. ಎಂಎಸ್‍ಎಂಇ ಕ್ಷೇತ್ರದಲ್ಲಿನ ಉದ್ಯಮಿಗಳ ಸಮಸ್ಯೆಗಳನ್ನು ಬಗೆಹರಿಸುವುದಾಗಿಯೂ ಅವರು ಈ ಸಂದರ್ಭದಲ್ಲಿ ಹೇಳಿದರು.

ಬ್ಯಾಂಕ್‍ ಗಳಲ್ಲಿ ಬಂಡವಾಳ ಹೂಡುವುದಕ್ಕಿಂತ ಷೇರು ಮಾರುಕಟ್ಟೆಗಳಲ್ಲಿ ಬಂಡವಾಳ ಹೂಡುವಂತೆ ಸಲಹೆ ನೀಡಿದ ಗಡ್ಕರಿ, ಕೈಗಾರಿಕೆಗಳಲ್ಲಿ ಆವಿಷ್ಕಾರಕ್ಕೆ ಒತ್ತು ನೀಡಬೇಕು. ರಸ್ತೆಗಳ ಅಭಿವೃದ್ಧಿಯಿಂದ ಆಯಾ ಪ್ರದೇಶಗಳು ಅಭಿವೃದ್ಧಿಯಾಗುತ್ತವೆ ಎಂದು ಹೇಳಿದ್ದಾರೆ.ಈ ಸಭೆಯಲ್ಲಿ ಮಹಾರಾಷ್ಟ್ರ ವಿಧಾನಸಭೆ ಮಾಜಿ ಸ್ಪೀಕರ್‍ ಹರಿಭಾವ್‍ ಬಗ್ಡೆ, ಮಾಜಿ ಸಚಿವ ಸಾಂಬಾಜಿ ಪಾಟೀಲ್‍ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.ಯುಎನ್‍ಐ ಎಸ್‍ಎಲ್‍ಎಸ್ 2003