Friday, Oct 30 2020 | Time 07:44 Hrs(IST)
National Share

ಕೃಷಿ ಕ್ಷೇತ್ರದ ಮಸೂದೆಗಳ ಅಂಗೀಕಾರಕ್ಕೆ ಅಮಿತ್‍ ಶಾ ಸ್ವಾಗತ: ಎಂಎಸ್‍ಪಿ ಮುಂವರಿಯಲಿದೆ ಎಂದು ಸ್ಪಷ್ಟನೆ

ನವದೆಹಲಿ, ಸೆ 20 (ಯುಎನ್‌ಐ) ಕೃಷಿ ಸುಧಾರಣೆಗಳ ಕುರಿತ ಎರಡು ನಿರ್ಣಾಯಕ ಮಸೂದೆಗಳನ್ನು ಸಂಸತ್‍ ಭಾನುವಾರ ಅಂಗೀಕರಿಸಿರುವುದನ್ನು ಸ್ವಾಗತಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವ ವ್ಯವಸ್ಥೆಯು ಜಾರಿಯಲ್ಲಿದ್ದು, ಸರ್ಕಾರದಿಂದ ಖರೀದಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
‘ಈ ಮಸೂದೆಗಳ ಅಂಗೀಕಾರವು ದೇಶದ ರೈತರ ಒಟ್ಟಾರೆ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರವನ್ನು ಬಲಪಡಿಸುವ ಕಡೆಗೆ ಪ್ರಧಾನಿ ಮೋದಿಯವರ ಅಚಲವಾದ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ಇದು ಭಾರತದ ಕೃಷಿ ಕ್ಷೇತ್ರದಲ್ಲಿ ಅಭೂತಪೂರ್ವ ಅಭಿವೃದ್ಧಿಯ ಯುಗಕ್ಕೆ ನಾಂದಿ ಹಾಡಲಿದೆ.’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ ಅಮಿತ್‍ ಶಾ, ‘ವೋಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಮೂಲಕ ರೈತರನ್ನು ದಶಕಗಳಿಂದ ಕತ್ತಲೆಯಲ್ಲಿ ಮತ್ತು ಬಡತನದಲ್ಲಿರಿಸಿಕೊಂಡ ಜನರು ಇಂದು ಮತ್ತೆ ಮೋದಿ ಸರ್ಕಾರ ತೆಗೆದುಕೊಂಡ ಈ ಐತಿಹಾಸಿಕ ನಿರ್ಧಾರವನ್ನು ವಿರೋಧಿಸುವ ಮೂಲಕ ಅವರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ರೈತರ ಬಗ್ಗೆ ಕಾಳಜಿ ವಹಿಸಿರುವವರೆಂದರೆ ಅದು ನಿಜವಾಗಿ ನರೇಂದ್ರಮೋದಿ ಎಂದು ಹೇಳಲು ಬಯಸುತ್ತೇನೆ.’ ಎಂದು ಹೇಳಿದ್ದಾರೆ.
ಮೋದಿ ಸರ್ಕಾರದ ಈ ಕೃಷಿ ಸುಧಾರಣೆಗಳು ದೇಶದ ರೈತ ಸಹೋದರರನ್ನು ಮಧ್ಯವರ್ತಿಗಳ ಹಿಡಿತದಿಂದ ಮುಕ್ತಗೊಳಿಸುತ್ತವೆ. ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಿ ಸೂಕ್ತ ಬೆಲೆ ಪಡೆಯಲು ಸಾಧ್ಯವಾಗಲಿದೆ. ಇದರಿಂದ ಅವರ ಆದಾಯವೂ ಹೆಚ್ಚಲಿದೆ ಎಂದು ಅಮಿತ್‍ ಶಾ ಹೇಳಿದ್ದಾರೆ.
ಯುಎನ್‍ಐ ಎಸ್‍ಎಲ್‍ಎಸ್ 2209
More News
ಮಹಾಮೈತ್ರಿ ಮಾತ್ರ ಬಿಹಾರದ ಜನತೆಗೆ ಉತ್ತಮ ಭವಿಷ್ಯ ನೀಡಬಲ್ಲದು; ರಾಹುಲ್‌

ಮಹಾಮೈತ್ರಿ ಮಾತ್ರ ಬಿಹಾರದ ಜನತೆಗೆ ಉತ್ತಮ ಭವಿಷ್ಯ ನೀಡಬಲ್ಲದು; ರಾಹುಲ್‌

29 Oct 2020 | 8:43 PM

ನವದೆಹಲಿ, ಅ 29 (ಯುಎನ್ಐ) ಬಿಹಾರದ ಜನತೆಗೆ ಬದಲಾವಣೆ ಬೇಕು ಮತ್ತು ಮಹಾಮೈತ್ರಿ ಮಾತ್ರ ರಾಜ್ಯದ ಜನತೆಗೆ ಉತ್ತಮ ಭವಿಷ್ಯ ಖಾತರಿಪಡಿಸುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗುರುವಾರ ಹೇಳಿದ್ದಾರೆ.

 Sharesee more..
ಪರಿಸರಸ್ನೇಹಿ ಕಟ್ಟಡಗಳ ನಿರ್ಮಾಣಕ್ಕಿದು ಸುಸಮಯ: ಉಪ ರಾಷ್ಟ್ರಪತಿ

ಪರಿಸರಸ್ನೇಹಿ ಕಟ್ಟಡಗಳ ನಿರ್ಮಾಣಕ್ಕಿದು ಸುಸಮಯ: ಉಪ ರಾಷ್ಟ್ರಪತಿ

29 Oct 2020 | 5:57 PM

ನವದೆಹಲಿ, ಅ 29 (ಯುಎನ್ಐ) ದೇಶದಲ್ಲಿ ಇನ್ನು ಮುಂದೆ ನಿರ್ಮಾಣವಾಗು ಹೊಸ ಕಟ್ಟಡಗಳನ್ನು ಕಡ್ಡಾಯವಾಗಿ ಹಸಿರು ಮತ್ತು ಪರಿಸರ ಸ್ನೇಹಿಯಾಗಿಸುವ ಸಮಯ ಬಂದಿದೆ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಹೇಳಿದ್ದಾರೆ.

 Sharesee more..

ಒಂದು ಕೆಜಿ ಅಸ್ಸಾಂ ಚಹಾ 75,000 ರೂ ಗೆ ಮಾರಾಟ !

29 Oct 2020 | 5:51 PM

 Sharesee more..