Monday, Jun 1 2020 | Time 02:39 Hrs(IST)
business economy Share

ಕೃಷಿ ಪ್ಯಾಕೇಜ್ ಸ್ವಾಗತಿಸಿದ ಷೇರುಪೇಟೆ ವ್ಯವಹಾರ ಸಂಸ್ಥೆ

ಬೆಂಗಳೂರು, ಮೇ 16 (ಯುಎನ್ಐ) ಹಣಕಾಸು ಮಂತ್ರಿ ಘೋಷಿಸಿದ 3ನೇ ಸುತ್ತಿನ ಉತ್ತೇಜನಕಾರಿ ಪ್ಯಾಕೇಜಿನ ಗಮನವು ಕೃಷಿ, ಸಂಬಂಧಿತ ಚಟುವಟಿಕೆಗಳು ಮತ್ತು ಕೃಷಿ ಉತ್ಪಾದಿತ ಸಂಬಂಧಿತ ಆಡಳಿತ ಸುಧಾರಣೆಗಳ ಮೇಲೆ ಕೇಂದ್ರೀಕರಿಸಿದೆ ಎಂದು ಏಂಜಲ್ ಬ್ರೋಕಿಂಗ್ ಲಿಮಿಟೆಡ್ ಸಂಸ್ಥೆಯ ಹೆಡ್ ಅಡ್ವೆಂಸರಿ ಆಮರ್ ದಿಯೋ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಕೃಷಿ-ಗೇಟ್ ಮೂಲಸೌಕರ್ಯಕ್ಕಾಗಿ ರೂ .1 ಲಕ್ಷ ಕೋಟಿ ಕೃಷಿ ಮೂಲಸೌಕರ್ಯ ನಿಧಿ, ಪಿಎಂಎಂಎಸ್‌ವೈ ಮೂಲಕ ಮೀನುಗಾರರಿಗೆ ರೂ 20,000 ಕೋಟಿ ಪ್ಯಾಕೇಜ್, ಸಮುದ್ರ ಮತ್ತು ಒಳನಾಡಿನ ಮೀನುಗಾರಿಕೆ ಅಭಿವೃದ್ಧಿಗಾಗಿ ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿಯನ್ನು ರೂ .15,000 ಕೋಟಿ ಸ್ವಾಗತಾರ್ಹ ನಡೆಯಾಗಿದೆ.
ಅಗತ್ಯ ಸರಕುಗಳ ಕಾಯ್ದೆಗೆ ರೈತರಿಗೆ ಉತ್ತಮ ಬೆಲೆ ಸಾಕ್ಷಾತ್ಕಾರವನ್ನು ಖಚಿತಪಡಿಸಿಕೊಳ್ಳಲು ಪ್ರಮುಖ ಆಹಾರ ಪದಾರ್ಥಗಳನ್ನು ಅನಿಯಂತ್ರಿತಗೊಳಿಸುವುದು ಮತ್ತು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಸ್ಟಾಕ್ ಮಿತಿಗಳನ್ನು ಹೇರುವುದು. ಇಂದಿನ ಭಾಷಣದ ಗಮನವು ಮುಖ್ಯವಾಗಿ ಗ್ರಾಮೀಣ ಭಾರತವಾಗಿತ್ತು, ಅನುಷ್ಠಾನವು ಇನ್ನೂ ಮುಖ್ಯ ಸವಾಲಾಗಿ ಉಳಿದಿದೆ ಎಂದು ಆಮರ್ ಹೇಳಿದ್ದಾರೆ.
ಯುಎನ್ಐ ಎಎಚ್ 1100
More News
ರಿಲಯನ್ಸ್‌ನಿಂದ ಭಾರತದಲ್ಲಿಯೇ ಪಿಪಿಇ ತಯಾರಿಕೆ: ಬೆಲೆಯಲ್ಲಿ ಭಾರಿ ಕಡಿತ

ರಿಲಯನ್ಸ್‌ನಿಂದ ಭಾರತದಲ್ಲಿಯೇ ಪಿಪಿಇ ತಯಾರಿಕೆ: ಬೆಲೆಯಲ್ಲಿ ಭಾರಿ ಕಡಿತ

31 May 2020 | 5:40 PM

ನವದೆಹಲಿ, ಮೇ 31 (ಯುಎನ್ಐ) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ ಐಎಲ್) ಭಾರತದ ಹೂಮ್ಯಾನಿಟೇರಿಯನ್ (ಮಾನವೀಯ) ರಪ್ತುನ ಮುಂಚೂಣಿಯನ್ನು ವಹಿಸಿಕೊಳ್ಳಲಿದ್ದು, ಇದಕ್ಕಾಗಿ ಹೊಸದಾಗಿ ಸ್ವಾಧೀನಪಡಿಸಿಕೊಂಡಿರುವ ಅಲೋಕ್ ಇಂಡಸ್ಟ್ರೀಸ್ ಅನ್ನು "ಸಂಪೂರ್ಣವಾಗಿ" ಪಿಪಿಇ ಉತ್ಪಾದನೆಗೆ ಮೀಸಲು ಇಡಲಿದೆ.

 Sharesee more..