Friday, Oct 30 2020 | Time 06:28 Hrs(IST)
Special Share

ಕೃಷಿ ಮಸೂದೆಗಳಿಗೆ ಸಹಿ ಹಾಕದಂತೆ ರಾಷ್ಟ್ರಪತಿಗೆ ಎಸ್‌ಎಡಿ ಮನವಿ

ಚಂಡೀಗಢ, ಸೆ 20 (ಯುಎನ್ಐ) ಸಂಸತ್ತಿನಲ್ಲಿ ಅನುಮೋದನೆಗೊಂಡಿರುವ ಕೃಷಿ ಮಸೂದೆಗಳಿಗೆಸಹಿ ಹಾಕಬಾರದು ಎಂದು ಶಿರೋಮಣಿ ಅಕಾಲಿ ದಳ ಭಾನುವಾರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರನ್ನು ಮನವಿ ಮಾಡಿದೆ.
ದುರ್ಬಲ ವರ್ಗವಾಗಿರುವ ರೈತರ ಪರವಾಗಿ ನಿಲ್ಲಬೇಕು. ಈ ಸಂದರ್ಭದಲ್ಲಿ ರೈತ ಕಾರ್ಮಿಕರು, ಮಂಡಿ ಕಾರ್ಮಿಕರು ಮತ್ತು ದಲಿತರ ಪರವಾಗಿ ಕೂಡ ನಿಲ್ಲಬೇಕಿದೆ ಎಂದು ಎಸ್‌ಎಡಿ ಅಧ್ಯಕ್ಷ ಸುಖಬೀರ್‌ ಸಿಂಗ್‌ ಬಾದಲ್‌ ಮನವಿ ಮಾಡಿದ್ದಾರೆ.
ಈ ಜನರು ಶೋಷಣೆಯನ್ನು ಎದುರಿಸುತ್ತಿದ್ದಾರೆ ಈ ಮಸೂದೆಗಳಿಗೆ ಸಹಿ ಮಾಡದಿರುವ ಮೂಲಕ ರಾಷ್ಟ್ರಪತಿಗಳು ಅವರ ರಕ್ಷಣೆಗೆ ನಿಲ್ಲಬೇಕು. ಇದು ವಿಫಲವಾದರೆ, ಬಡವರು ಮತ್ತು ತೊಂದರೆಗೀಡಾದ ವರ್ಗಗಳು ಮತ್ತು ಅವರ ಮುಂದಿನ ಪೀಳಿಗೆಗಳು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಹೇಳಿದರು.
ಈ ಮಸೂದೆಯನ್ನು ಮರುಪರಿಶೀಲನೆಗಾಗಿ ಸಂಸತ್ತಿಗೆ ಹಿಂದಿರುಗಿಸಬೇಕು. ಇದರಿಂದಾಗಿ ಅತಿಯಾದ ಮೊಂಡುತನದ ಕ್ಷಣಿಕ ಕ್ಷಣದಲ್ಲಿ ತೆಗೆದುಕೊಳ್ಳುವ ಆತುರದ ನಿರ್ಧಾರಗಳು ದೇಶದ ಜನರ ಹಿತಾಸಕ್ತಿಗೆ ಧಕ್ಕೆ ತರಲಿದೆ ಎಂದಿದ್ದಾರೆ.
ಇದು ರಾಷ್ಟ್ರಪತಿಗಳು ತಮ್ಮ ಸರ್ವೋಚ್ಚ ಅಧಿಕಾರ ಚಲಾಯಿಸಿ ಕಾಯ್ದೆಯನ್ನು ಮರುಪರಿಶೀಲನೆಗೆ ಕಳುಹಿಸಲು ಸರಿಯಾದ ಪ್ರಕರಣವಾಗಿದೆ ಎಂದಿದ್ದಾರೆ.
ಯುಎನ್ಐ ಎಸ್ಎಚ್ 1859