Monday, Sep 21 2020 | Time 11:54 Hrs(IST)
  • ಸಚಿವ ಸಂಪುಟ ವಿಸ್ತರಣೆಗಾಗಿ ವರಿಷ್ಠರ ಸಂದೇಶಕ್ಕಾಗಿ ಕಾಯುತ್ತಿದ್ದೇನೆ: ಯಡಿಯೂರಪ್ಪ
  • ಕೊರೋನಾ ಆರ್ಭಟ, 24 ಗಂಟೆಯಲ್ಲಿ 1,130 ಮಂದಿ ಸಾವು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ಕೊವಿಡ್‍-19: ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ 1,36,895 ಕ್ಕೆ ಏರಿಕೆ
  • ಬ್ರೆಜಿಲ್‌ನಲ್ಲಿ ಹೆದ್ದಾರಿ ಅಪಘಾತ: 12 ಮಂದಿ ಸಾವು
  • ಪ್ರೇಮಸೌಧ, ತಾಜ್ ಮಹಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ
  • ಭಾರತ- ಚೀನಾ ನಡುವೆ ಇಂದು ಸೇನಾ ಮಟ್ಟದ ಮಾತುಕತೆ
  • ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು
Karnataka Share

ಕಾಸರಗೋಡು: ಯುವಕನಿಂದ ಕುಟುಂಬದ ನಾಲ್ವರ ಬರ್ಬರ ಹತ್ಯೆ

ಕಾಸರಗೋಡು, ಆ.3 (ಯುಎನ್ಐ) ಯುವಕನೋರ್ವ ತನ್ನ ಕುಟುಂಬದ ನಾಲ್ವರು ಸದಸ್ಯರನ್ನು ಭೀಕರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ಇಲ್ಲಿನ ಬಾಯಾರ್ ಎಂಬಲ್ಲಿ ಇಂದು ಸಂಜೆ ನಡೆದಿದೆ.
ಉಪ್ಪಳ ಬಾಯಾರ್ ಕಣಿಯಾಲ ಸುದಂಬಳ ಗುರಿಕುಮೇರಿನಲ್ಲಿ ಈ ಘಟನೆ ನಡೆದಿದೆ.
ಸದಾಶಿವ, ವಿಠಲ, ಬಾಬು, ದೇವಕಿ ಎಂಬವರನ್ನು ಕೊಲೆ ಮಾಡಲಾಗಿದೆ. ಕೊಲೆಗೀಡಾದವರು ಆರೋಪಿಯ ಮೂವರು ಮಾವಂದಿರು ಮತ್ತು ಚಿಕ್ಕಮ್ಮ ಎಂದು ತಿಳಿದುಬಂದಿದೆ.
ಕೊಲೆ ಆರೋಪಿ ಉದಯ ಎಂಬಾತನನ್ನು ಸ್ಥಳೀಯರು ಹಿಡಿದು ಕೈಕಾಲು ಕಟ್ಟಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಉದಯ ಮಾನಸಿಕ ಅಸ್ವಸ್ಥನಾಗಿದ್ದು, ಇತ್ತೀಚೆಗೆ ಆತನ ನಡವಳಿಕೆಯಲ್ಲಿ ಏರು ಪೇರು ಕಂಡುಬಂದಿತ್ತು. ಮನೆಗೆ ಹೋಗುವ ದಾರಿಯ ವಿಷಯದಲ್ಲಿ ಉಂಟಾದ ವಿವಾದ ಈ ಕೊಲೆಗೆ ಕಾರಣ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಿಂದ ಇಡೀ ಗ್ರಾಮ ಬೆಚ್ಚಿ ಬಿದ್ದಿದ್ದು, ಜನರು ಆತಂಕಗೊಂಡಿದ್ದಾರೆ.
ಯುಎನ್ಐ ಎಎಚ್ 2045