Saturday, Mar 28 2020 | Time 23:50 Hrs(IST)
 • ಕೊವಿದ್‍-19: ರಾಜ್ಯದಲ್ಲಿ ಹೊಸ 12 ಪ್ರಕರಣಗಳು ದೃಢ, ಒಟ್ಟು ಸಂಖ್ಯೆ 76ಕ್ಕೆ ಏರಿಕೆ
 • ಲಾಕ್‌ಡೌನ್: ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ನಿರ್ಬಂಧಗಳು ಸಡಿಲ
 • ಕೊರೊನಾ ನಿರ್ಣಾಯಕ ಹಂತದಲ್ಲಿ, ತುರ್ತು ಪರಿಸ್ಥಿತಿ ಘೋಷಣೆ ಅಗತ್ಯವಿಲ್ಲ : ಅಬೆ
 • ಬಾಂಗ್ಲಾದೇಶದಲ್ಲಿ ರಸ್ತೆ ಅಪಘಾತ : ಆರು ಸಾವು
 • ಒಂದೇ ದಿನ 194 ಹೊಸ ಖಚಿತ ಪ್ರಕರಣ ದಾಖಲು
 • ಮೋದಿ ನಾಡಿನಲ್ಲೂ ಕರೋನ ಸೋಂಕಿಗೆ ನಾಲ್ವರ ಬಲಿ
 • ಬಡವರಿಗೆ ಆಹಾರ ಒದಗಿಸಲು ನೆರವಾಗುವಂತೆ ಪರೋಪಕಾರಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಮನವಿ
 • ಕೋವಿಡ್-19 ತಡೆಯಲು ಗ್ರಾಮಗಳಿಗೆ ನಿರ್ಬಂಧ; ಪಿಐಎಲ್ ಸಲ್ಲಿಕೆ
 • ಕೊರೋನಾ ಪೀಡಿತರಿಗೆ ಪರಿಹಾರ ಕೋರಿ ಪಿಐಎಲ್ ಸಲ್ಲಿಕೆ
 • ಸಾಲ ವಸೂಲಿ- ಆಸ್ತಿ ಹರಾಜು ನಡೆಸುವಂತಿಲ್ಲ: ಹೈಕೋರ್ಟ್
 • ಕರ್ನಾಟಕದ ಕಾರ್ಮಿಕರನ್ನು ತೆರವುಗೊಳಿಸುವ ವದಂತಿ ಸುಳ್ಳು; ಗೋವಾ ಸಿಎಂ
 • ಕೋವಿಡ್-19; 15 ಸಾವಿರ ಆಹಾರ ಪೊಟ್ಟಣ ವಿತರಿಸಿದ ಟಿಟಿಡಿ
 • ಜನ ಸಾಮಾನ್ಯರಿಗೆ ಅಗತ್ಯ ವಸ್ತುಗಳಿಗೆ ತೊಂದರೆಯಾಗದು: ಯಡಿಯೂರಪ್ಪ
 • ಕೊರೋನಾ ಭೀತಿ: 8 ಲಕ್ಷ ಲೀ ಹಾಲು ಮಾರಾಟವಾಗುತ್ತಿಲ್ಲ: ಬಾಲಚಂದ್ರ ಜಾರಕಿಹೊಳಿ
 • ಮನೆ ವಿತರಣೆಗೆ ಸಿದ್ಧವಾಗಿರಲು ಹೋಟೆಲ್ ಮತ್ತು ಸೂಪರ್ ಮಾರ್ಕೆಟ್‍ಗಳಿಗೆ ಮೈಸೂರು ಜಿಲ್ಲಾಡಳಿತ ಸೂಚನೆ
National Share

ಕುಸಿದ ತಾಪಮಾನ, ದೆಹಲಿ, ಉತ್ತರ ಭಾರತ ಗಡಗಡ

ನವದೆಹಲಿ, ಡಿ 31 (ಯುಎನ್ಐ) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದ್ದು, 119 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ಡಿಸೆಂಬರ್ ಮಾಹೆಯ ಚಳಿ ಹೊಸ ದಾಖಲೆ ಬರೆದಿದೆ.
ದೆಹಲಿಯಲ್ಲಿ ಸೋಮವಾರ ಕನಿಷ್ಟ ತಾಪಮಾನ 9.4 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆಯಾಗಿದ್ದು, ಡಿಸೆಂಬರ್ ತಿಂಗಳ ಮಧ್ಯಾಹ್ನದ ಅವಧಿಯಲ್ಲಿ ದೆಹಲಿ ಇಷ್ಟೊಂದು ಚಳಿಯನ್ನು ಅನುಭವಿಸಿದ್ದು 119 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು ಎಂದು ಹವಾಮಾನ ಇಲಾಖೆ ಹೇಳಿದೆ.
ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಚಳಿಯ ಪ್ರಮಾಣ ಜೋರಾಗಿದೆ. ಸೋಮವಾರ ದೆಹಲಿಯಲ್ಲಿ ವಿಪರೀತ ಮಂಜು ಆವರಿಸಿದ್ದರಿಂದ 30ಕ್ಕೂ ಹೆಚ್ಚು ರೈಲುಗಳ ಸಂಚಾರ ವಿಳಂಬವಾಗಿತ್ತು. 50ಕ್ಕೂ ಹೆಚ್ಚು ವಿಮಾನಗಳ ಹಾರಾಟವೂ ವಿಳಂಬವಾಗಿತ್ತು
ಪಕ್ಕದ ರಾಜಸ್ಥಾನದಲ್ಲೂ ಚಳಿ ಗಾಳಿಯ ಅಬ್ಬರ ಜೋರಾಗಿದೆ. ಸಿಕಾರ್ ಜಿಲ್ಲೆಯಲ್ಲಿ 0.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದೂ ಹವಾಮಾನ ಇಲಾಖೆ ವರದಿ ಹೇಳಿದೆ.
ಪಂಜಾಬ್, ಚಂಡೀಘಡದಲ್ಲೂ ಚಳಿ ಹೆಚ್ಚಾಗಿದೆ . ಹರಿಯಾಣದ ಕೆಲ ಪ್ರದೇಶಗಳಲ್ಲಿ 1.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇನ್ನು, ಒಂದು ತಿಂಗಳಗಳ ಕಾಲ ಇದೇ ವಾತಾವಾರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಚಳಿಯ ಪ್ರಮಾಣ, ತೀವ್ರತೆ ಕಡಿಮೆ ಇದೆ.
ಯುಎನ್ಐ ಕೆಎಸ್ಆರ್ 1010
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..