Friday, Sep 25 2020 | Time 11:14 Hrs(IST)
  • ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 86 ಸಾವಿರ ಹೊಸ ಕೊರೊನಾ ಪ್ರಕರಣಗಳು, 1141 ಸಾವು!
  • ಸೆನ್ಸೆಕ್ಸ್ 400 ಅಂಕ ಚೇತರಿಕೆ
  • ಶೋಪಿಯಾನ್ ಮಿನಿ ಸಚಿವಾಲಯದ ಭದ್ರತೆಯಲ್ಲಿದ್ದ ಸೈನಿಕನ ಮೇಲೆ ಉಗ್ರರ ದಾಳಿ
  • ಕೊವಿಡ್-19 : 3 ಕೋಟಿ 20 ಲಕ್ಷ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ
  • ಅವಿಶ್ವಾಸ ನಿರ್ಣಯ: ಯಾವಾಗ ಬೇಕಾದರೂ ಚರ್ಚೆಗೆ ಸಿದ್ಧ-ಸಿದ್ದರಾಮಯ್ಯ
  • ಐಪಿಎಲ್‌ 2020: ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ ಸೋಲಿನ ಜವಾಬ್ದಾರಿ ಹೊತ್ತ ವಿರಾಟ್‌ ಕೊಹ್ಲಿ
  • ಐಪಿಎಲ್‌ 2020: ನಿಧಾನಗತಿಯಲ್ಲಿ ಬೌಲಿಂಗ್‌ ಮಾಡಿದ್ದಕ್ಕಾಗಿ ಕೊಹ್ಲಿಗೆ 12 ಲಕ್ಷ ರೂ ದಂಡ
  • ಕೆ ಎಲ್‌ ರಾಹುಲ್‌ ಅವರ ಎರಡು ಕ್ಯಾಚ್‌ ಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ
  • ಪಂಜಾಬ್, ಹರಿಯಾಣದಲ್ಲಿ ರೈತರ ಬಂದ್ ಗೆ ಉತ್ತಮ ಪ್ರತಿಕ್ರಿಯೆ
business economy Share

ಕ್ಸಿಯೋಮಿಯಿಂದ ರೆಡ್‌ಮಿ ಕೆ 20 ಸರಣಿ, ರೆಡ್‌ಮಿ 7 ಎ ಸ್ಮಾರ್ಟ್‌ಪೋನ್ ಬಿಡುಗಡೆ

ಚಂಡೀಗಢ, ಜು.22(ಯುಎನ್‌ಐ) ದೇಶದ ನಂಬರ್ ಒನ್ ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್ ಟಿವಿ ಬ್ರಾಂಡ್‌ ಕ್ಸಿಯೋಮಿ, ಸೋಮವಾರ ತನ್ನ ಪ್ರಮುಖ ರೆಡ್‌ಮಿ ಕೆ 20 ಸರಣಿಯ ಸ್ಮಾರ್ಟ್‌ಫೋನ್‌ಗಳಾದ ರೆಡ್‌ಮಿ ಕೆ 20 ಮತ್ತು ರೆಡ್‌ಮಿ ಕೆ 20 ಪ್ರೊ, ರೆಡ್‌ಮಿ 7 ಎ ಎಕಾನಮಿ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಕ್ಸಿಯೋಮಿ ಇಂಡಿಯಾ ಮುಖ್ಯ ಮಾರುಕಟ್ಟೆ ಅಧಿಕಾರಿ (ಸಿಎಮ್‌ಒ) ಅನುಜ್ ಶರ್ಮಾ ಮಾತನಾಡಿ, ರೆಡ್‌ಮಿ ಕೆ 20 ಸರಣಿಯು 6.39 ಇಂಚಿನ, ಪೂರ್ಣ ಎಚ್‌ಡಿ + ಅಮೋಲೆಡ್ ಹರೈಸನ್ ಡಿಸ್ಪ್ಲೇಯನ್ನು ಏಳನೇ ತಲೆಮಾರಿನ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಹೊಂದಿದೆ. ಕವರ್ಡ್‌ ಗೊರಿಲ್ಲಾ ಗ್ಲಾಸ್ 5ರೊಂದಿಗೆ (ಮುಂಭಾಗ ಮತ್ತು ಹಿಂಭಾಗ) ರಕ್ಷಣೆ ಹೊಂದಿದೆ. 20 ಎಂಪಿ ಪಾಪ್-ಅಪ್ ಸೆಲ್ಫಿ ಕ್ಯಾಮೆರಾ, 4000 ಎಂಎಎಚ್‌ ಬ್ಯಾಟರಿಯಿಂದ ವೇಗದ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ ಎಂದರು.

ರೆಡ್‌ಮಿ ಕೆ 20 ಪ್ರೊ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 ತಂತ್ರಾಂಶವನ್ನು ಹೊಂದಿದೆ. ರೆಡ್‌ ಮಿ ಕೆ 20 ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 730 ಪ್ರೊಸೆಸರ್ ಅನ್ನು ಹೊಂದಿದೆ ಮತ್ತು ಎಐ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಕಾಣಿಸಿಕೊಂಡಿದೆ. ಇದರಲ್ಲಿ 48 ಎಂಪಿ ಮುಖ್ಯ ಕ್ಯಾಮೆರಾ, 8 ಎಂಪಿ ಟೆಲಿಫೋಟೋ ಮತ್ತು 13 ಎಂಪಿ ವೈಡ್-ಆಂಗಲ್ ಇದೆ.
ಎರಡೂ ಫೋನ್‌ಗಳು ಸೋಮವಾರದಿಂದ ಮಿ.ಕಾಮ್, ಫ್ಲಿಪ್‌ಕಾರ್ಟ್ ಮತ್ತು ಮಿ ಹೋಮ್‌ಗಳಲ್ಲಿ ಮಾರಾಟವಾಗಲಿದ್ದು, ಜುಲೈ 30, 2019 ರಿಂದ ಎಲ್ಲಾ ಆಫ್‌ಲೈನ್ ಚಿಲ್ಲರೆ ಮಳಿಗೆಗಳಲ್ಲಿಯೂ ಲಭ್ಯವಾಗಲಿದೆ ಎಂದು ಅವರು ಹೇಳಿದರು.

ರೆಡ್‌ಮಿ ಕೆ 20 ಪ್ರೊ 6 ಜಿಬಿ / 128 ಜಿಬಿ ವಿಸ್ತರಣೆಗೆ 27,999 ರೂ.ಗಳಿಗೆ ಲಭ್ಯ. 8 ಜಿಬಿ / 256 ಜಿಬಿಗೆ 30,999 ರೂ.

ರೆಡ್‌ಮಿ ಕೆ 20, 6 ಜಿಬಿ / 64 ಜಿಬಿಗೆ 21,999 ರೂ. ಮತ್ತು ಫ್ಲೇಮ್ ರೆಡ್, ಗ್ಲೇಸಿಯರ್ ಬ್ಲೂ ಮತ್ತು ಕಾರ್ಬನ್ ಬ್ಲ್ಯಾಕ್‌ನಲ್ಲಿ 6 ಜಿಬಿ / 128 ಜಿಬಿ ಫೋನ್‌ಗೆ 23,999 ರೂ.

ಯುಎನ್‌ಐ ಕೆಎಸ್‌ವಿ ವಿಎನ್‌ಎಲ್‌ 1827