Saturday, Nov 28 2020 | Time 15:47 Hrs(IST)
 • ಬಿಬಿಐಎಲ್‌: ಕೋವ್ಯಾಕ್ಸಿನ್‌ ಪ್ರಗತಿಗೆ ವಿಜ್ಞಾನಿಗಳಿಗೆ ಮೋದಿ ಅಭಿನಂದನೆ
 • ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ನಿಗ್ರಹ ಸುಗ್ರೀವಾಜ್ಞೆ ಇಂದಿನಿಂದ ಜಾರಿ
 • ಇಂದು ಪುಣೆ ತಲುಪಲಿರುವ ಪ್ರಧಾನಿ ಮೋದಿ
 • ಪಾಕ್ ನಿಂದ ಕಾಂಬೋಡಿಯಾಗೆ ವಿಮಾನದಲ್ಲಿ 10 ಗಂಟೆ ಪ್ರಯಾಣಿಸಲಿರುವ ಆನೆ !
 • ಜೈಡಸ್ ಕ್ಯಾಡಿಲಾ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ: ಪ್ರಧಾನಿ ಮೋದಿ
 • ಬಿ ಐ ಎಸ್ ದೃಢೀಕೃತ ಹೆಲ್ಮಟ್ ಮಾತ್ರ ಧರಿಸಬೇಕು ತಪ್ಪಿದರೆ ಶಿಕ್ಷೆ ನಿಶ್ಚಿತ !
 • ಗುರುಗ್ರಾಮದಲ್ಲಿ ಡಿ 18ಕ್ಕೆ ಬಾಕ್ಸಿಂಗ್ ಸಂಸ್ಥೆಯ ಚುನಾವಣೆ
 • ಹೈದ್ರಾಬಾದ್ ; ‘ಕೋವಾಕ್ಸಿನ್’ ಲಸಿಕೆ ಅಭಿವೃದ್ದಿ ಪರಿಶೀಲಿಸುತ್ತಿರುವ ಪ್ರಧಾನಿ ಮೋದಿ
 • ಪುಟಿದೇಳುವ ನಿರೀಕ್ಷೆಯಲ್ಲಿ ಒಡಿಶಾ, ಜಮ್ ಶೆಡ್ಪುರ
 • ಮತ್ತೆ ಮಿಂಚುವ ಬಗ್ಗೆ ಭರವಸೆ ನೀಡಿದ ರಾಬ್ಬೀ ಫ್ಲವರ್
 • ಸರಣಿ ಜೀವಂತಕ್ಕೆ ಟೀಮ್ ಇಂಡಿಯಾ ಹಂಬಲ
 • ದೇಶದಲ್ಲಿ ಕೋವಿಡ್‍-19ನ 41,322 ಹೊಸ ಪ್ರಕರಣಗಳು ವರದಿ: ಒಟ್ಟು ಸಂಖ್ಯೆ 93,51,110ಕ್ಕೆ ಏರಿಕೆ
 • ಭಾರತ-ಹವಾಮಾನ ಬದಲಾವಣೆ ಜ್ಞಾನ ಪೋರ್ಟಲ್ ಗೆ ಪ್ರಕಾಶ್ ಜಾವಡೇಕರ್ ಚಾಲನೆ
 • ಚಂಡಮಾರುತದಿಂದ ಉಂಟಾದ ಪರಿಸ್ಥಿತಿ ಕುರಿತು ತಮಿಳುನಾಡು ಮುಖ್ಯಮಂತ್ರಿಯೊಂದಿಗೆ ಪ್ರಧಾನಿ ಚರ್ಚೆ
 • ಕೋವಿಡ್ ಸೋಂಕು ನಿಯಂತ್ರಣ: ಪರಿಷ್ಕೃತ ಮಾರ್ಗ ಸೂಚಿ ಹೊರಡಿಸಿದ ರಾಜ್ಯ ಸರ್ಕಾರ
Sports Share

ಕೊಹ್ಲಿ ಭಾರತದ ಶ್ರೇಷ್ಠ ವೈಟ್ ಬಾಲ್ ಕ್ರಿಕೆಟಿಗ

ನವದೆಹಲಿ, ಜುಲೈ 3(ಯುಎನ್ಐ)
ಟೀಮ್ ಇಂಡಿಯಾ ಹಾಲಿ ನಾಯಕ ವಿರಾಟ್ ಕೊಹ್ಲಿ ವೈಟ್ ಬಾಲ್ ನಲ್ಲಿ ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗ ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ವಾಸೀಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಕ್ರಿಕ್ ಟ್ರ್ಯಾಕರ್ ವೆಬ್ ಸೈಟ್ ಗೆ ಸಂದರ್ಶನ ನೀಡಿದ ಅವರಿಗೆ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ನಡುವೆ ಸೀಮಿತ ಓವರ್ ಗಳ ಸರ್ವ ಶ್ರೇಷ್ಠ ಆಟಗಾರರನ್ನು ಆಯ್ಕೆ ಮಾಡುವಂತೆ ಕೇಳಲಾಗಿತ್ತು. ಇದಕ್ಕೆ ಮುಂಬಯಿ ಆಟಗಾರ ಜಾಫರ್, ಹಾಲಿ ನಾಯಕ ಕೊಹ್ಲಿಯನ್ನು ಹೆಸರಿಸಿದ್ದಾರೆ.
ಭಾರತ ಪರ 31 ಪಂದ್ಯಗಳಿಂದ 1944 ರನ್ ಕಲೆಹಾಕಿರುವ ಬಲಗೈ ಆಟಗಾರ ಜಾಫರ್ ಗೆ ಇದೇ ವೇಳೆ ತಮ್ಮ ನೆಚ್ಚಿನ ನಾಯಕನನ್ನು ಆಯ್ಕೆ ಮಾಡುವಂತೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿರುವ ಅವರು ಬಿಸಿಸಿಐನ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಆಯ್ಕೆ ಮಾಡಿದ್ದಾರೆ. '' 2000ದ ಇಸವಿಯ ಬಳಿಕ ತಂಡವನ್ನು ರಚಿಸಿದ ಸೌರವ್, ಆಟಗಾರರ ಬೆಂಬಲಕ್ಕೆ ನಿಲ್ಲುವ ಜತೆಗೆ ಅವರು ಬೆಳೆಯಲು ನೆರವಾಗುತ್ತಿದ್ದರು. ಹೀಗಾಗಿಯೇ ಸೆಹ್ವಾಗ್, ಜಹೀರ್ ಖಾನ್, ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ರಂತಹ ಆಟಗಾರರು ಬೆಳೆಯಲು ಕಾರಣವಾಯಿತು,'' ಎಂದು ಗಂಗೂಲಿ ಅವರನ್ನು ಜಾಫರ್ ಶ್ಲಾಘಿಸಿದ್ದಾರೆ. ಜಾಫರ್ ಮುಂಬರುವ ದೇಶೀಯ ಟೂರ್ನಿಯಲ್ಲಿ ಉತ್ತರಾಖಂಡ ರಣಜಿ ತಂಡಕ್ಕೆ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಯುಎನ್ಐಆರ್ ಕೆ1812