Wednesday, Feb 26 2020 | Time 10:41 Hrs(IST)
  • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
  • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
  • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
  • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
  • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
  • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
  • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
National Share

ಗಣರಾಜ್ಯೋತ್ಸವ; ಅಪಾಚೆ, ಚಿನೋಕ್ ಯುದ್ಧ ಹೆಲಿಕಾಪ್ಟರ್ ಗಳು ಭಾಗಿ

ನವದೆಹಲಿ, ಜ 13 (ಯುಎನ್ಐ) ದೆಹಲಿಯ ರಾಜಪಥದಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ತಯಾರಾದ ಅಪಾಚೆ 64 ಇ ಮತ್ತು ತೂಕದ ವಸ್ತುಗಳನ್ನು ಸಾಗಿಸುವ ಚಿನೋಕ್ ಸಿಎಚ್ 47 ಹೆಲಿಕಾಪ್ಟರ್ ಭಾಗಿಯಾಗಲಿವೆ.
ಚಿನೂಕ್ ನಲ್ಲಿ ಹೊಸದಾಗಿ ಸೇರ್ಪಡೆಗೊಂಡ ಮೂರು ಸಾರಿಗೆ ಹೆಲಿಕಾಪ್ಟರ್ ಗಳಿರಲಿದೆ ಎಂದು ವಾಯುಪಡೆಯ ಹಿರಿಯ ಅಧಿಕಾರಿ ಸೋಮವಾರ ನಡೆದ ಗಣರಾಜ್ಯೋತ್ಸವ ಪೆರೇಡ್ ಕುರಿತ ಪೂರ್ವಿಭಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅದರ ಹಿಂದೆ 'ಅಪಾಚೆ' ರಚನೆಯಲ್ಲಿ ಭಾರತೀಯ ವಾಯುಪಡೆಗೆ ಹೊಸದಾಗಿ ಸೇರ್ಪಡೆಯಾಗಿರುವ ದಾಳಿ ಹೆಲಿಕಾಪ್ಟರ್ ಗಳು ಭಾಗಿಯಾಗಲಿವೆ. ಈ ಐದು ಹೆಲಿಕಾಪ್ಟರ್ ಗಳು ಬಾಣದ ತಲೆಯ ರಚನೆಯ ರೂಪದಲ್ಲಿ ಹಾರಾಟ ನಡೆಸಲಿವೆ ಎಂದರು.
ಈ ಎರಡೂ ಹೆಲಿಕಾಪ್ಟರ್ ಗಳನ್ನು ಅಮೆರಿಕದ ಪ್ರಮುಖ ಬೋಯಿಂಗ್ ತಯಾರಿಸಿದೆ ಎಂದರು. 2018ರ ಏಪ್ರಿಲ್ ನಲ್ಲಿ ಚಂಡೀಗಡದಲ್ಲಿ ಚಿನೂಕ್ ಸಿಎಚ್ 47 ಅನ್ನು ವಾಯಪಡೆಗೆ ಸೇರಿಸಲಾಗಿತ್ತು. ಇದು ಎಲ್ಲಾ ವಾತಾವರಣದಲ್ಲಿ ವಿಶೇಷವಾಗಿ ಬೆಟ್ಟಗಳಲ್ಲಿ ನಿರಂತರ ಲಾಜಿಸ್ಟಿಕ್ಸ್ ಸಾಮರ್ಥ್ಯ ಒದಗಿಸಲಿದೆ. ಇದು 11 ಟನ್ ಅಥವಾ 45 ತಂಡಗಳನ್ನು ಹೊರುವ ಸಾಮರ್ಥ್ಯ ಹೊಂದಿದ್ದು, ವಾಯುಪಡೆಗೆ ಹೊಸ ಶಕ್ತಿ ಒದಗಿಸಿದೆ ಎಂದರು.
ಅಪಾಚಿ 64 ಇ ಅನ್ನು ಸೆಪ್ಟೆಂಬರ್ ನಲ್ಲಿ ಪಠಾನ್ ಕೋಟ್ ನಲ್ಲಿ ವಾಯಪಡೆಗೆ ಸೇರಿಸಲಾಯಿತು.
ಈ ಸಾಲಿನ ವಾಯುಪಡೆಯ ಪ್ರದರ್ಶನದಲ್ಲಿ 16 ಯುದ್ಧ, 10 ಸಾರಿಗೆ ವಿಮಾನಗಳ ಜೊತೆಗೆ 19 ಹೆಲಿಕಾಪ್ಟರ್ ಗಳು ಸೇರಿದಂತೆ 41 ಜೆಟ್ ಗಳು ಭಾಗಿಯಗಲಿವೆ.
ಇದೇ ಮೊದಲ ಬಾರಿಗೆ ರಫೇಲ್ ಯುದ್ಧ ವಿಮಾನ ಕೂಡ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಪಾಲ್ಗೊಳ್ಳಲಿದೆ.
ಯುಎನ್ಐ ಎಸ್ಎಚ್ 1748