Friday, Feb 28 2020 | Time 09:00 Hrs(IST)
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಗಲ್ಫ್ ರಾಷ್ಟ್ರಗಳ ಶಾಂತಿ, ಸೌಹಾರ್ದತೆಗೆ ಮೊದಲ ಆದ್ಯತೆ: ಮೋದಿ

ಗಲ್ಫ್ ರಾಷ್ಟ್ರಗಳ ಶಾಂತಿ, ಸೌಹಾರ್ದತೆಗೆ ಮೊದಲ ಆದ್ಯತೆ: ಮೋದಿ
ಗಲ್ಫ್ ರಾಷ್ಟ್ರಗಳ ಶಾಂತಿ, ಸೌಹಾರ್ದತೆಗೆ ಮೊದಲ ಆದ್ಯತೆ: ಮೋದಿ

ನವದೆಹಲಿ, ಜ 15 (ಯುಎನ್ಐ) ಇರಾನ್ ಸೇರಿದಂತೆ ಇತರ ಗಲ್ಫ್ ರಾಷ್ಟ್ರಗಳಲ್ಲಿ ಶಾಂತಿ, ಭದ್ರತೆ ಮತ್ತು ಸುಸ್ಥಿರತೆ ಕಾಪಾಡುವತ್ತ ಭಾರತ ಹೆಚ್ಚಿನ ಆಸಕ್ತಿ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವದ್ ಜರೀಫ್ ಅವರನ್ನು ಭೇಟಿಯಾದ ಮೋದಿ, ಇರಾನ್ ಜೊತೆಗೆ ಸದೃಢ ಮತ್ತು ಸ್ನೇಹ ಸಂಬಂಧ ಮುಂದುವರಿಸಲು ಬದ್ಧವಾಗಿದೆ ಎಂದಿದ್ದಾರೆ.

ಭೇಟಿಯ ನಂತರ ಪ್ರದಾನ ಮಂತ್ರಿಗಳ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, ಇರಾನ್ ನಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಅಲ್ಲಿನ ವಿದೇಶಾಂಗ ಸಚಿವರು ಮಾಹಿತಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಶಾಂತಿ ಕಾಪಾಡುವತ್ತ ಒತ್ತು ನೀಡಿದ್ದಾರೆ ಎಂದಿದೆ.

ಚಬಹಾರ್ ಯೋಜನೆಯ ಪ್ರಗತಿ ಹಾಗೂ ಅದನ್ನು ವಿಶೇಷ ಆರ್ಥಿಕ ವಲಯವಾಗಿ ಘೋಷಿಸಿದ ಇರಾನ್ ಗೆ ಮೋದಿ ಅಭಿನಂದನೆ ಸಲ್ಲಿಸಿದರು.

ಯುಎನ್ ಐ ಎಸ್ಎಚ್ 2051