Monday, Jul 22 2019 | Time 19:49 Hrs(IST)
 • ಆರ್ ಟಿಐ ಮಸೂದೆಗೆ ಕಾಂಗ್ರೆಸ್ ವಿರೋಧ; ಹಿಂಪಡೆಯುವಂತೆ ಒತ್ತಾಯ
 • ಚಂದ್ರಯಾನ್-2ಕ್ಕೆ ಭಾರತೀಯ ಉಕ್ಕು ಪ್ರಾಧಿಕಾರದ ವಿಶೇಷ ಲೋಹ ಬಳಕೆ
 • ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕಲ್ ರಾಜ್ ಮಿಶ್ರಾ ಪ್ರಮಾಣವಚನ
 • ವಿಧಾನಸಭೆಯಲ್ಲಿ ಲಿಂಬಾವಳಿ ಕಣ್ಣೀರು
 • ದಾಖಲೆ ನಿರ್ಮಿಸಿದ ಅಮರನಾಥ ಯಾತ್ರೆ; 22 ದಿನಗಳಲ್ಲಿ 2 85 ಲಕ್ಷ ಯಾತ್ರಿಕರ ಭೇಟಿ
 • ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು
 • ಕ್ರಿಪ್ಟೋ ಕರೆನ್ಸಿ ಮೇಲೆ ನಿಷೇಧ ವಿಧಿಸಲು ಸರ್ಕಾರ ನೇಮಿಸಿದ್ದ ಸಮಿತಿ ಸಲಹೆ
 • ಕಾಶ್ಮೀರದ ದೋಡಾದಲ್ಲಿ ಉಗ್ರರ ಅಡಗುದಾಣ ನಾಶ
 • ವಿಧಾನಸಭೆಯಲ್ಲಿ ಸದ್ದುಮಾಡಿದ ಝೀರೋ ಟ್ರಾಫಿಕ್
 • ಟಿವಿಎಸ್‌ ಮಾರಾಟ ಶೇ 7 8ರಷ್ಟು ಏರಿಕೆ
 • ಕಳೆದ 3 ವರ್ಷದಲ್ಲಿ ಭಾರತೀಯ ನೌಕಾ ಸಿಬ್ಬಂದಿ ಸಂಖ್ಯೆ ಜಾಗತಿಕವಾಗಿ ಶೇ 45ರಷ್ಟು ಏರಿಕೆ
 • ವಿಶ್ವಾಸಮತ ಯಾಚನೆಗೆ ಕಾಲಮಿತಿ ನಿಗದಿಪಡಿಸುವಂತೆ ಸ್ಪೀಕರ್ ಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಪಿಐಎಲ್
 • ಕ್ಸಿಯೋಮಿಯಿಂದ ರೆಡ್‌ಮಿ ಕೆ 20 ಸರಣಿ, ರೆಡ್‌ಮಿ 7 ಎ ಸ್ಮಾರ್ಟ್‌ಪೋನ್ ಬಿಡುಗಡೆ
 • ಸುಪ್ರಿಂಕೋರ್ಟ್ ತೀರ್ಪು ಬರುವತನಕ ವಿಶ್ವಾಸಮತ ಮುಂದೂಡಬೇಕು : ದಿನೇಶ್ ಗುಂಡೂರಾವ್
 • ಟ್ರಂಪ್ ಭೇಟಿಗೆ ಮುಂದಾದ ಇಮ್ರಾನ್ ಖಾನ್
Entertainment Share

ಗಲ್ಲಾ ಪೆಟ್ಟಿಗೆಯಲ್ಲಿ ಗುದ್ದಾಡಲಿರುವ ಜಾನ್-ಅಕ್ಷಯ್

ಮುಂಬೈ, ಜುಲೈ 11 (ಯುಎನ್ಐ) ಬಾಲಿವುಡ್ ನಟ ಜಾನ್ ಅಬ್ರಾಹಂ ಹಾಗೂ ಅಕ್ಷಯ್ ಕುಮಾರ್ ಒಂದೇ ದಿನ ಗಲ್ಲಾ ಪೆಟ್ಟಿಗೆಯಲ್ಲಿ ಗುದ್ದಾಡಲು ಸಜ್ಜಾಗಿದ್ದಾರೆ.
ಜಾನ್ ಅಬ್ರಹಂ ಅಭಿನಯದ 'ಬಾಟಲ್ ಹೌಸ್' ಹಾಗೂ ಅಕ್ಷಯ್ ಅವರ 'ಮಿಷನ್ ಮಂಗಲ್' ಮತ್ತು ಪ್ರಭಾಸ್ ರ 'ಸಾಹೋ' ಈ ಮೂರು ಚಿತ್ರಗಳು ಆಗಸ್ಟ್ 15ರಂದು ತೆರೆಗೆ ಬರಲಿವೆ.
'ಬಾಟಲ್ ಹೌಸ್ 'ಚಿತ್ರವು 2008ರಲ್ಲಿ ದೆಹಲಿಯಲ್ಲಿ ನಡೆದ ಎನ್ ಕೌಂಟರ್ ವೊಂದರ ಸತ್ಯ ಘಟನಾಧಾರಿತ ಕಥಾ ವಸ್ತು ಹೊಂದಿದೆ. ದೆಹಲಿಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ಎನ್ ಕೌಂಟರ್ ನಲ್ಲಿ ಹತರಾಗಿದ್ದು, ಆಗ ಅದು ಭಾರಿ ವಿವಾದಕ್ಕೀಡಾಗಿತ್ತು. ಈ ಚಿತ್ರದಲ್ಲಿ ಜಾನ್, ಪೊಲೀಸ್ ಅಧಿಕಾರಿ ಸಂಜೀವ್ ಕುಮಾರ್ ಯಾದವ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಿಟೌನ್ ನಲ್ಲಿ ಉತ್ತಮ ಸ್ನೇಹಿತರೆಂದು ಕರೆಸಿಕೊಳ್ಳುವ ಜಾನ್ ಹಾಗೂ ಅಕ್ಷಯ್ ಇದೇ ಮೊದಲ ಬಾರಿಗೇನೂ ಗಲ್ಲಾ ಪೆಟ್ಟಿಗೆಯಲ್ಲಿ ಗುದ್ದಾಡುತ್ತಿಲ್ಲ. ಇದಕ್ಕೂ ಮೊದಲು ಅಕ್ಷಯ್ ರ 'ಗೋಲ್ಡ್' ಹಾಗೂ ಜಾನ್ ಅವರ 'ಸತ್ಯ ಮೇವ ಜಯತೆ' ಎರಡು ಚಿತ್ರ ಒಂದೇ ದಿನ ಪ್ರದರ್ಶನಗೊಂಡಿದ್ದವು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಾನ್, ''ಈ ಸಂದರ್ಭದಲ್ಲಿ 'ಮೇಕ್ ಸಮ್ ನಾಯ್ಸ್ ಫಾರ್ ದೇಸಿ ಬಾಯ್ಸ್' ಎಂದು ಹೇಳಲಿಚ್ಛಿಸುತ್ತೇನೆ. ಇಂತಹ ವಾತಾವರಣದಲ್ಲಿ ಜನ ವಿವಾದ ಹುಟ್ಟುಹಾಕಲು ಮುಂದಾಗುತ್ತಾರೆ ಎಂಬುದು ನನಗೆ ಗೊತ್ತು. ಆದರೆ, ಅಕ್ಷಯ್ ನಾನು ಉತ್ತಮ ಸ್ನೇಹಿತರು ಎಂಬುದು ಸತ್ಯ'' ಎಂದಿದ್ದಾರೆ.
''ಇತ್ತೀಚೆಗಷ್ಟೇ ಒಂದೇ ದಿನ ಚಿತ್ರ ಬಿಡುಗಡೆಗೊಳ್ಳುತ್ತಿರುವುದರ ಕುರಿತು ಇಬ್ಬರೂ ಸಂದೇಶ ರವಾನಿಸಿದ್ದೇವೆ. ಚಿತ್ರದ ಬಿಡುಗಡೆಯ ಕುರಿತು ಇಬ್ಬರಲ್ಲಿ ವಿಶ್ವಾಸವಿದೆ. ಪ್ರಸ್ತುತ ಪ್ರೇಕ್ಷಕರಿಗೆ ನಾನು ವಿಭಿನ್ನ ಚಿತ್ರಗಳನ್ನು ನೀಡುತ್ತಿದ್ದು ಇಷ್ಟವಾಗಲಿದೆ ಎಂಬ ಭರವಸೆ ಇದೆ'' ಎಂದು ವಿಶ‍್ವಾಸ ವ್ಯಕ್ತಪಡಿಸಿದ್ದಾರೆ.
''ನನ್ನ ಚಿತ್ರದೊಂದಿಗೆ ಬಿಡುಗಡೆಗೊಳ್ಳುತ್ತಿರುವ 'ಮಂಗಲ್ ಮಿಷನ್' ಹಾಗೂ 'ಸಾಹೋ' ಚಿತ್ರಕ್ಕೂ ಒಳ್ಳೆಯದಾಗಲಿ'' ಎಂದು ಜಾನ್ ಶುಭ ಹಾರೈಸಿದ್ದಾರೆ.
ಯುಎನ್ಐ ಪಿಕೆ ಎಸ್ಎಚ್ 1742
More News
ಈ ವಾರ ತೆರೆಗೆ `ದಶರಥ’

ಈ ವಾರ ತೆರೆಗೆ `ದಶರಥ’

22 Jul 2019 | 5:57 PM

ಬೆಂಗಳೂರು, ಜುಲೈ 22 (ಯುಎನ್ಐ) ಎಂ ಎಸ್ ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಕ್ಷಯ್ ಸಮರ್ಥ ನಿರ್ಮಿಸಿರುವ `ದಶರಥ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ

 Sharesee more..

ಜುಲೈ 24ರಂದು `ನನ್ನ ಪ್ರಕಾರ’ ಹಾಡು ಬಿಡುಗಡೆ

22 Jul 2019 | 5:35 PM

 Sharesee more..

ಆಸ್ಟ್ರೇಲಿಯಾಗೆ ‘ಗಂಟುಮೂಟೆ’

22 Jul 2019 | 5:28 PM

 Sharesee more..

ಮುಕೇಶ್ ಜನ್ಮದಿನ: ಪ್ರಸಿದ್ಧ ಗಾಯಕನ ಸ್ಮರಣೆ

22 Jul 2019 | 4:50 PM

ಕೋಲ್ಕತಾ, ಜುಲೈ 22 (ಯುಎನ್ಐ) “ಜೀನಾ ಯಹಾ, ಮರ್ನಾ ಯಹಾ, ಇಸ್ ಕೆ ಸಿವಾ ಜಾನಾ ಕಹಾ” ಹಾಡನ್ನು ಇಂದಿನ ಯುವಪೀಳಿಗೆಯೂ ಹಾಡಿ ನಲಿಯುತ್ತಿದೆ ಇಂತಹ ಹಲವು ಗೀತೆಗಳೊಂದಿಗೆ ತನ್ನ ವಿಶಿಷ್ಟ ಗಾಯನದಿಂದ ಭಾರತೀಯ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಮುಕೇಶ್ ಅವರ 96ನೇ ಜನ್ಮದಿನವನ್ನು ಸೋಮವಾರ ದೇಶಾದ್ಯಂತ ಆಚರಿಸುತ್ತಿದ್ದು, ಸಂಗೀತ ಕಾರ್ಯಕ್ರಮಗಳ ಮೂಲಕ ನಮನ ಸಲ್ಲಿಸಲಾಗುತ್ತಿದೆ

 Sharesee more..

ಈ ವಾರ ‘ಮಹಿರ’ ತೆರೆಗೆ

22 Jul 2019 | 4:17 PM

 Sharesee more..