Monday, Aug 3 2020 | Time 23:33 Hrs(IST)
  • ಕರೋನಾ ಸೇನಾನಿ ಡಾ ಜೋಗಿಂದರ್ ಚೌಧರಿ ಕುಟುಂಬಕ್ಕೆ 1 ಕೋಟಿ ರೂ ಮೊತ್ತದ ಚೆಕ್‍ ನೀಡಿದ ಕೇಜ್ರಿವಾಲ್‍
  • ಪೋಖ್ರಿಯಾಲ್ ಅವರಿಂದ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ
  • ಕೊವಿಡ್‍:ದೆಹಲಿಯಲ್ಲಿ ಸತತ 2ನೇ ದಿನ 1,000ಕ್ಕೂ ಕಡಿಮೆ ಪ್ರಕರಣಗಳು ವರದಿ, ಚೇತರಿಕೆ ಪ್ರಮಾಣ ಶೇ89 72ಕ್ಕೆ ಏರಿಕೆ
  • 2004ರಲ್ಲಿ ಸುನಾಮಿಯಿಂದ ಪಾರಾದ ಬಗ್ಗೆ ವಿವರಿಸಿದ ಅನಿಲ್‌ ಕುಂಬ್ಳೆ
  • ರಾಮ ಮಂದಿರ ಭೂಮಿ ಪೂಜೆಯಲ್ಲಿ ಸರ್ಕಾರ ಭಾಗವಹಿಸುವಿಕೆ ಸಂವಿಧಾನದ ಉಲ್ಲಂಘನೆ-ಸಿಪಿಎಂ
  • ಮಹೇಂದ್ರ ಸಿಂಗ್‌ ಧೋನಿ ಸಹಾಯವನ್ನು ಸ್ಮರಿಸಿದ ಸ್ಯಾಮ್‌ ಬಿಲ್ಲಿಂಗ್ಸ್‌
  • 'ರಾಖಿ’ ಕಳುಹಿಸಲಾಗಲಿಲ್ಲ ಎಂದ ಲತಾ ಮಂಗೇಷ್ಕರ್ ಪ್ರಧಾನಿ ಮೋದಿ ಭಾವೋದ್ವೇಗದ ಉತ್ತರ
  • ದ್ರಾವಿಡ್ ಎದುರಿಸಿದ್ದ ಸಮಸ್ಯೆ ಬಹಿರಂಗಪಡಿಸಿದ ದಲ್ಜಿತ್‌ ಸಿಂಗ್‌
  • ಕೌಂಟಿ ಕ್ರಿಕೆಟ್ ತೊರೆದು ಕಾರ್ಗಿಲ್‌ ಯುದ್ಧ ಮಾಡಲು ಮುಂದಾಗಿದ್ದೆ: ಶೊಯೇಬ್ ಅಖ್ತರ್
  • ಕೆಪಿಸಿಸಿಯಿಂದ ನಾಯಕತ್ವ, ಆಡಳಿತ ನಿರ್ವಹಣಾ ಸಮಿತಿ ರಚನೆ
  • ಕಾಸರಗೋಡು: ಯುವಕನಿಂದ ಕುಟುಂಬದ ನಾಲ್ವರ ಬರ್ಬರ ಹತ್ಯೆ
  • ಅಯೋಧ್ಯ ಭೂಮಿ ಪೂಜೆಗೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
  • ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ:ಸಾವಿನ ಸಂಖ್ಯೆ 12ಕ್ಕೆ ಏರಿಕೆ
  • ಅಯೋಧ್ಯ ಭೂಮಿ ಪೂಜೆಗೆ ಬರುವಂತೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
  • ಲಾಕ್‌ಡೌನ್ ದಿನಗಳನ್ನು ಪರಿಷ್ಕರಿಸಿ ಹೊಸ ದಿನಾಂಕ ಘೋಷಿಸಿದ ಪಶ್ಚಿಮ ಬಂಗಾಳ ಸರ್ಕಾರ
Sports Share

ಗಂಗೂಲಿ ಕೆಕೆಆರ್‌ ನಾಯಕತ್ವ ಕಳೆದುಕೊಂಡಿದ್ದಕ್ಕೆ ಕಾರಣ ತಿಳಿಸಿದ ಆಕಾಶ್‌ ಚೋಪ್ರಾ

ನವದೆಹಲಿ, ಜುಲೈ 3 (ಯುಎನ್ಐ)
ಕೋಲ್ಕತಾ ನೈಟ್‌ ರೈಡರ್ಸ್‌ ತಂಡವನ್ನು ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಮುನ್ನಡೆಸುತ್ತಿದ್ದ ವೇಳೆ ಅಂದಿನ ಕೆಕೆಆರ್‌ ಕೋಚ್‌ ಜಾನ್‌ ಬುಕಾನನ್, ಗಂಗೂಲಿಯಿಂದ ಕ್ಯಾಪ್ಟನ್ಸಿ ಕಸಿದಿದ್ದ ಘಟನೆಯನ್ನು ಆಕಾಶ್‌ ಚೋಪ್ರಾ ಇದೀಗ ಬಹಿರಂಗ ಪಡಿಸಿದ್ದಾರೆ.
ಆಸ್ಟ್ರೇಲಿಯಾ ತಂಡಕ್ಕೆ ತಮ್ಮ ಮಾರ್ಗದರ್ಶನದಲ್ಲಿ ಎರಡು ವಿಶ್ವಕಪ್‌ ಗೆಲ್ಲುವಂತೆ ಮಾಡಿದ್ದ ಕೋಚ್ ಜಾನ್‌ ಬುಕಾನ್‌ ಮತ್ತು ಸೌರವ್‌ ಗಂಗೂಲಿ ನಡುವಣ ಬಾಂಧವ್ಯ ಹದಗೆಟ್ಟಿತ್ತು ಎಂದು ಭಾರತ ಟೆಸ್ಟ್‌ ತಂಡದ ಮಾಜಿ ಓಪನರ್‌ ಆಕಾಶ್‌ ಚೋಪ್ರಾ ಇದೀಗ ಹೇಳಿಕೊಂಡಿದ್ದಾರೆ.
2009ರ ಆವೃತ್ತಿಯಲ್ಲಿ ಕೆಕೆಆರ್‌ ತಂಡದ ನಾಯಕತ್ವದಿಂದ ಗಂಗೂಲಿ ಅವರನ್ನು ಕೆಳಗಿಳಿಸುವಲ್ಲಿ ಬುಕಾನನ್‌ ಯಶಸ್ವಿಯಾಗಿದ್ದರು ಕೂಡ. ಬಳಿಕ ನ್ಯೂಜಿಲೆಂಡ್‌ ತಂಡದ ಮಾಜಿ ನಾಯಕ ಬ್ರೆಂಡನ್‌ ಮೆಕಲಮ್‌ ಅವರನ್ನು ಕೆಕೆಆರ್‌ ತಂಡದ ನೂತನ ನಾಯಕನನ್ನಾಗಿ ನೇಮಕ ಮಾಡಲಾಗಿತ್ತು.
"ಸೌರವ್‌ ಗಂಗೂಲಿ ಮೊದಲ ಆವೃತ್ತಿಯ ಐಪಿಎಲ್‌ ಸಲುವಾಗಿ ಕೆಕೆಆರ್‌ ತಂಡ ಸೇರಿಕೊಂಡಾಗ ಅಲ್ಲಿ ಬುಕಾನನ್‌ ಮತ್ತು ಆಸ್ಟ್ರೇಲಿಯಾ ತಂಡದ ಅಂದಿನ ನಾಯಕ ರಿಕಿ ಪಾಂಟಿಂಗ್‌ ಕೂಡ ಇದ್ದರು. ಆದರೂ ಗಂಗೂಲಿ ಕೆಕೆಆರ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದರು. ನಾನು ಇದನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಆರಂಭದಲ್ಲಿ ಕೋಚ್‌ ಮತ್ತು ಕ್ಯಾಪ್ಟನ್‌ ನಡುವೆ ಉತ್ತಮ ಬಾಂಧವ್ಯವಿತ್ತು," ಎಂದು ಆಕಾಶ್‌ ತಮ್ಮ ಯೂಟ್ಯೂಬ್‌ ಚಾನಲ್‌ನ 'ಆಕಾಶ್‌ವಾಣಿ' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
"ಬಳಿಕ ಎಲ್ಲವೂ ಬದಲಾಯಿತು. ಕೋಚ್‌ ಮತ್ತು ಕ್ಯಾಪ್ಟನ್‌ ನಡುವಣ ಸಂಬಂಧ ಹಳಸಿತ್ತು. ಏಕೆಂದರೆ ಬುಕಾನನ್‌ ಅವರ ಕಾರ್ಯವೈಖರಿಯೇ ವಿಭಿನ್ನ. ಹಾಗೂ ಗಂಗೂಲಿ ಅವರ ಮನಸ್ಥಿತಿಯೇ ಬೇರೆ. ಅಂತಿಮವಾಗಿ ಗಂಗೂಲಿಯನ್ನು ನಾಯಕನ ಪಟ್ಟದಿಂದ ಇಳಿಸಬೇಕೆಂದು ಬುಕಾನನ್ ಹಟ ಹಿಡಿದಿದ್ದರು. ನಂತರದ ಆವೃತ್ತಿಯಲ್ಲಿ ಇದು ಸಾಧ್ಯವಾಯಿತು ಕೂಡ. ಮೊದಲ ಆವೃತ್ತಿಯಲ್ಲಿ 6ನೇ ಕ್ರಮಾಂಕದಲ್ಲಿ ಆಡಿದ್ದ ಸೌರವ್‌, 2ನೇ ಆವೃತ್ತಿಯಲ್ಲಿ ನಾಯಕತ್ವ ಕಳೆದುಕೊಂಡ ಬಳಿಕ 8ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತಾಗಿತ್ತು," ಎಂದು ಆಕಾಶ್‌ ವಿವರಿಸಿದ್ದಾರೆ.
ಯುಎನ್ಐಆರ್ ಕೆ 1635