Monday, Jul 22 2019 | Time 07:05 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Special Share

ಗುಜರಾತಿ ಸಾಂಪ್ರದಾಯಿಕ ಭೋಜನ ಸವಿದ ರಾಹುಲ್‌ ಗಾಂಧಿ

ಅಹಮದಾಬಾದ್, ಜುಲೈ 12 (ಯುಎನ್‌ಐ) ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ನಗರದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಶುಕ್ರವಾರ ಸಾಂಪ್ರದಾಯಿಕ ಗುಜರಾತಿ ಆಹಾರಕ್ಕಾಗಿ ಇಲ್ಲಿನ ಪ್ಲಶ್ ಲಾ ಗಾರ್ಡನ್ ಪ್ರದೇಶದ ಖಾಸಗಿ ರೆಸ್ಟೋರೆಂಟ್‌ಗೆ ಭೇಟಿ ನೀಡಿದರು.
ಎಐಸಿಸಿ ಖಜಾಂಚಿ ಅಹಮದ್ ಪಟೇಲ್, ಜಿಪಿಸಿಸಿ ಅಧ್ಯಕ್ಷ ಅಮಿತ್ ಚಾವ್ಡಾ, ಗುಜರಾತ್ ವಿಧಾನಸಭೆಯ ಪ್ರತಿಪಕ್ಷದ ನಾಯಕ ಪರೇಶ್ ಧನಾನಿ ಸೇರಿದಂತೆ ಪಕ್ಷದ ನಾಯಕರು ಪ್ರಕರಣದ ವಿಚಾರಣೆಗಾಗಿ ಸರ್ಕ್ಯೂಟ್ ಹೌಸ್‌ನಿಂದ ಮೆಟ್ರೋ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ, ಖಾಸಗಿ ರೆಸ್ಟೋರೆಂಟ್‌ನಲ್ಲಿ ಅಧಿಕೃತ ಗುಜರಾತಿ ಭೋಜನ ಸವಿದರು.
2017ರ ಗುಜರಾತ್‌ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಅವರು ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ್ದರು ಮತ್ತು ಸಾಂಪ್ರದಾಯಿಕ ತಿಂಡಿಗಳು ಮತ್ತು ಸಿಹಿತಿಂಡಿಗಳಲ್ಲದೆ ಬೀದಿ ಆಹಾರವನ್ನು ಮೆಚ್ಚಿದ್ದರು.
ರಾಹುಲ್‌, ಧೋಕ್ಲಾ, ಖಿಚಡಿ, ಎಳನೀರು ಸ್ವೀಕರಿಸಿದರು ಮತ್ತು ಜನರಿಗೆ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಸಹ ಅವಕಾಶ ಮಾಡಿಕೊಟ್ಟರು ಎನ್ನಲಾಗಿದೆ.
ಯುಎನ್‌ಐ ಕೆಎಸ್‌ವಿ ಎಸ್‌ಎಚ್‌ 1946